ADVERTISEMENT

ಭುವನಗಿರಿಯ ಭುವನೇಶ್ವರಿ

ರವೀಂದ್ರ ಭಟ್ಟ, ಬಳಗುಳಿ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಇದು ಕನ್ನಡ ತಾಯಿಯ ದೇವಾಲಯ. ಮಲೆನಾಡಿನ ಎತ್ತರದ ಗಿರಿಯ ಮೇಲೆ, ಸಾಲು ಸಾಲು ಗುಡ್ಡಗಳ ಶಾಂತ ಪರಿಸರದ ಮಧ್ಯೆ ನೆಲೆ ನಿಂತಿರುವ ಭುವನೇಶ್ವರಿ ಅಮ್ಮನವರ ವಾಸಸ್ಥಳ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಕ್ಷೇತ್ರ ಸಿದ್ದಾಪುರದಿಂದ ಕುಮಟಾಗೆ ತೆರಳುವ ರಸ್ತೆಯ ಪಕ್ಕದಲ್ಲಿಯೇ ಇದೆ. ವಿಶಾಲ ಪುಷ್ಕರಣಿಯ ಸಮೀಪದಲ್ಲಿಯೇ ಗುಡ್ಡ ಏರಲು ಮೆಟ್ಟಿಲುಗಳಿವೆ. ಈ ಸ್ಥಳಕ್ಕಿಂತ ಕೊಂಚ ಹಿಂದೆ ದೇವಾಲಯ ತಲುಪಲು ರಸ್ತೆಯೂ ಕಾಣಿಸುತ್ತದೆ.

`ಭುವನಗಿರಿ ಅಮ್ಮನವರು~ ಎಂದೇ ಪ್ರಸಿದ್ಧವಾಗಿರುವ ಭುವನೇಶ್ವರಿ ತಾಯಿಯ ದೇವಾಲಯವನ್ನು ಬಿಳಗಿ ಅರಸರ ಕೊನೆಯ ದೊರೆ ಬಸವೇಂದ್ರ 1692ರಲ್ಲಿ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಶಿಲಾಮಯವಾದ ಗರ್ಭಗುಡಿ ಮತ್ತು ಅಮ್ಮನವರ ಉದ್ಭವ ಮೂರ್ತಿ ಈ ದೇವಾಲಯ ಪುರಾತನ ಕಾಲದ್ದು ಎಂಬುದನ್ನು ಸಾರಿ ಹೇಳುತ್ತವೆ.

ಬಿಳಗಿಯ ಅರಸರು ವಿಜಯನಗರ ಅರಸರ ಕಟ್ಟಾ ಅಭಿಮಾನಿಗಳಾಗಿದ್ದರು. ಅದರೊಂದಿಗೆ ಭಟ್ಟಾಕಳಂಕರ ಶಿಷ್ಯರಾಗ್ದ್ದಿದು ತೀವ್ರವಾದ ಕನ್ನಡ ಅಭಿಮಾನ ಹೊಂದಿದ್ದರು. ಆದ್ದರಿಂದಲೇ ಇಲ್ಲಿ  ಭುವನೇಶ್ವರಿ ದೇವಾಲಯವನ್ನು ನಿರ್ಮಿಸಿರಬಹುದು ಎಂದು ಹೇಳಲಾಗುತ್ತಿದೆ.

ಭುವನಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ನಂತರ ಭುವನೇಶ್ವರಿ ದೇವಿ ಇಲ್ಲಿ ನೆಲೆ ನಿಂತಿದ್ದರಿಂದ ಈ ಕ್ಷೇತ್ರಕ್ಕೆ ಭುವನಗಿರಿ ಎಂಬ ಹೆಸರು ಬಂದಿದೆ. ಈ ದೇವಾಲಯದ ಶಿಲಾಮಯ ಗರ್ಭಗುಡಿಯನ್ನು ಉಳಿಸಿಕೊಂಡು ಸುತ್ತಲಿನ ಕಟ್ಟಡವನ್ನು ಅತ್ಯಂತ ಸುಂದರವಾಗಿ ನವೀಕರಿಸಲಾಗಿದೆ.

ದೇವಸ್ಥಾನದಲ್ಲಿ ಸೇವೆಗಳು
* ಕರ್ಪೂರ ಆರತಿ 5 ರೂ
* ಕುಂಕುಮಾರ್ಚನೆ 10
* ಹರಕೆ ಕಾಣಿಕೆ 11
* ಉಡಿ ತುಂಬುವುದು 11
* ಪಂಚಾಮೃತ ಪೂಜೆ 51
* ಪಾರಾಯಣ 100
* ಸಪ್ತಶತಿ ಪಾರಾಯಣ ಪಲ್ಲವಿ 110
* ತುಲಾಭಾರ ಕಾಣಿಕೆ 205
* ನಿತ್ಯಪೂಜೆ ಠೇವು 500
* ಪಲ್ಲಕ್ಕಿ ಉತ್ಸವ 1001

ಮಾಘ ಶುದ್ಧ ಹುಣ್ಣಿಮೆಯ ದಿವಸ (ಈ ವರ್ಷ ಇಂದು ಅಂದರೆ ಫೆ.7) ಮಹಾ ರಥೋತ್ಸವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.