ADVERTISEMENT

ಅಂತರಂಗ ತಲುಪಿದ ನೃತ್ಯಾಂತರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 19:30 IST
Last Updated 27 ಜೂನ್ 2012, 19:30 IST
ಅಂತರಂಗ ತಲುಪಿದ ನೃತ್ಯಾಂತರ
ಅಂತರಂಗ ತಲುಪಿದ ನೃತ್ಯಾಂತರ   

ಚೌಡಯ್ಯ ಸ್ಮಾರಕ ಭವನದಲ್ಲಿ ನೃತ್ಯಾಂತರ ಸಮಾರೋಪ ಸಮಾರಂಭದಲ್ಲಿ ನಡೆದ ನತ್ಯ ಪ್ರದರ್ಶನ ರಸಿಕರ ಅಂತರಂಗ ತಲುಪಿ ಮುದ ನೀಡಿತು.

ಶಿವ ಪ್ರಿಯ ನತ್ಯ ಶಾಲೆ, ಶಿವನ ಮಹಿಮೆಗಳನ್ನು ಆಧರಿಸಿದ -ತಾಂಡವ ನತ್ಯ ರೂಪಕ. ತಾಂಡವ ನತ್ಯದ ಆನಂದ ತಾಂಡವ, ಶೃಂಗಾರ ತಾಂಡವ ಮತ್ತು ರೌದ್ರ ತಾಂಡವದ ರಸಾನುಭವಗಳನ್ನು ಗಿರಿಜಾ ಕಲ್ಯಾಣದಲ್ಲಿ  ಕಲ್ಯಾಣ ಸಂಭ್ರಮ, ಗಿರಿಜೆಗೆ ಕಾಲುಂಗುರ ತೊಡಿಸುವ ದಶ್ಯ ವಿಭಿನ್ನವಾಗಿತ್ತು.

 ಮನ್ಮಥ ದಹನ, ಅಮೃತ ಮಂಥನ ನೃತ್ಯ ಸನ್ನಿವೇಶ ಸಹಜವಾಗಿ ಮೂಡಿಬಂತು. ದಕ್ಷ ಯಜ್ಞದ ಸಂದರ್ಭದಲ್ಲಿ ಸೃಷ್ಟಿಸಿದ ವೀರಭದ್ರನ ರೌದ್ರ ತಾಂಡವ ನರ್ತನ ಅಮೋಘವಾಗಿತ್ತು.

`ಮೇರೆ ಥೋ ಗಿರಿಧರ ಗೋಪಾಲ~ ಮೀರಾ ಭಜನ್ ನರ್ತಿಸುವಾಗ ಭಕ್ತಿ, ವಿನಮ್ರತೆ, ಶರಣಾಗತಿ ಮತ್ತು ಮೆಲುಕು ಹಾಕುವಂಥ ನೃತ್ಯಾನುಭಾವ ನೋಡುಗರಲ್ಲಿ ಆನಂದವನ್ನುವುಂಟು ಮಾಡಿತು. ಶುದ್ಧ ನಡೆ ಗತಿ ಮತ್ತು ನಿರ್ದಿಷ್ಟ ಅಡುವುಗಳಿಂದ ಕೂಡಿದ ತಿಲ್ಲಾನದಿಂದ ಮುಕ್ತಾಯಗೊಳಿಸಿದರು.  

ವೈಜಯಂತಿ ಮತ್ತು ಪ್ರತಿಕ್ಷಾ ಕಾಶಿ ಅವರ ನೃತ್ಯ ಶೀರ್ಷಿಕೆ `ಪರಂಪರ~ ವಿಶೇಷವಾಗಿತ್ತು. ಪ್ರಾರಂಭದಲ್ಲಿ ಪೂಜಾವಿಧಿಯಲ್ಲಿರುವ ಸಂಕಲ್ಪ ಮಂತ್ರ, ಓಂ ಭುವಃ, ಸುವಃ, ಸತ್ಯಂ ಮತ್ತು ನೃತ್ಯ ಶಾಸ್ತ್ರದ ಆಂಗಿಕ, ವಾಚಿಕ, ಆಹಾರ್ಯ ಮತ್ತು ಗೌರಿ ಸರಸ್ವತಿ ಮತ್ತು ಲಕ್ಷ್ಮೀ ಮೂರು ಅಭಿವ್ಯಕ್ತ ಭಾವನೆಗಳ ಅವಿಭಾಜ್ಯ ಸಂಬಂಧ ವ್ಯಕ್ತ ಮಾಡುವಲ್ಲಿ ಯಶಸ್ವಿಯಾದರು. ಕೂಚಿಪುಡಿ ನೃತ್ಯ ಆಕರ್ಷಕವಾಗಿತ್ತು. `ಪಾಹಿ ಪಾಹಿ ಕೃಷ್ಣ~ ಗೀತೆಯಲ್ಲಿ ದೇವಕಿಯಾಗಿ  ನೃತ್ಯಗಾರ್ತಿ ತೋರಿದ ಮಾತೃ ವಾತ್ಸಲ್ಯದ ಭಾವ ಗಮನ ಸೆಳೆಯಿತು.

ಪೂತನಿಯಾಗಿ ವೈಜಯಂತಿ ತೋರಿದ ಅಭಿನಯ, ತುಂಟ ಕಷ್ಣನಾಗಿ ಹಾಗೂ ಕಾಳಿಂಗಮರ್ದನ ಮಾಡುವ ದೃಶ್ಯದಲ್ಲಿ ಪ್ರತಿಕ್ಷಾ ಕಾಶಿ ಅಭಿನಯ ಮತ್ತು ತಟ್ಟೆ ಮೇಲಿನ ನರ್ತನ ರಸಿಕರ ಮನವನ್ನು ರಂಜಿಸಿತು. ಕುಬ್ಜೆಯಾಗಿ ವೈಜಯಂತಿ ಅಭಿನಯ ಹಾಗೂ ಕೃಷ್ಣನಾಗಿ ಪ್ರತಿಕ್ಷಾ ಕಾಶಿ ಅಭಿನಯ ವಿಶೇಷವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.