ADVERTISEMENT

ಅಂದದ ಬೆರಳಿಗೆ ಫೆದರ್ ರಿಂಗ್ ಭೂಷಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಉಂಗುರ
ಉಂಗುರ   

ಹೆಣ್ಣಿನ ತುಂಬು ಕೈಗಳಿಗೆ ಬಳೆಗಳೇ ಭೂಷಣ. ಹಾಗೆಯೇ, ಚೆಂದದ ಕೈ ಬೆರಳುಗಳಿಗೆ ಉಂಗುರಗಳೇ ಅಂದ ತುಂಬುತ್ತ‌ವೆ. ಹೆಣ್ಣುಮಕ್ಕಳು ಚಿನ್ನ, ಬೆಳ್ಳಿ, ಪ್ಲಾಟಿನಂ ಉಂಗುರಗಳ ಜೊತೆಗೆ ಆರ್ಟಿಫಿಷಲ್ ಉಂಗುರಗಳನ್ನೂ ಹೆಚ್ಚಾಗಿ ಬಳಸುತ್ತಾರೆ. ಮಹಿಳೆಯರಿಗೆ ಅಚ್ಚುಮೆಚ್ಚು ಎನಿಸಿರುವ ಉಂಗುರಗಳಲ್ಲಿಯೂ ಇಂದು ನವ ನವೀನ ವಿನ್ಯಾಸಗಳು ಕಾಣ ಸಿಗುತ್ತವೆ.

ಫ್ಯಾಷನ್‌ ಜಗತ್ತಿನಲ್ಲಿ ಪ್ರತಿದಿನವೂ ಬದಲಾವಣೆ ಗಳಾಗುತ್ತಿರುತ್ತವೆ. ಅದೇರೀತಿ, ಉಂಗುರಳ ವಿನ್ಯಾಸ ಹಾಗೂ ಫ್ಯಾಷನ್‌ನಲ್ಲಿಯೂ ಅನೇಕ ಬದಲಾವಣೆಗಳು ಆಗಿವೆ. ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಫೆದರ್(ಗರಿ) ಉಂಗುರಗಳು ಟ್ರೆಂಡಿಯಾಗಿದ್ದು, ಮಹಿಳೆಯರನ್ನು ಆಕರ್ಷಿಸುತ್ತಿವೆ.

ಫೆದರ್ ಉಂಗುರಗಳು ನೋಡಲು ಆಕರ್ಷಕ ವಾಗಿದ್ದು, ಧರಿಸಿದಾಗ ಕೈ ಹಾಗೂ ಬೆರಳಿಗೆ ಉತ್ತಮ ಮೆರುಗು ನೀಡುತ್ತವೆ. ಮದುವೆ ಮತ್ತಿತತರ ಶುಭ ಸಮಾರಂಭಗಳಿಗೆ ಈ ಫೆದರ್‌ ಉಂಗುರಗಳನ್ನು ಬಳಸಬಹುದು.

ADVERTISEMENT

ಬಣ್ಣಬಣ್ಣದ ಗರಿಗಳಿಂದ ಕೂಡಿದ ಈ ರಿಂಗ್ ಧರಿಸಿದ ಡ್ರೆಸ್‌ಗೆ ಒಪ್ಪುವಂತಿರುತ್ತದೆ. ದೊಡ್ಡ ಸ್ಟೋನ್ ಉಂಗುರ ಅಥವಾ ಸ್ಟಡ್‌ಗಳಿಗೆ ಈ ಗರಿಗಳನ್ನು ಜೋಡಿಸಬಹುದು. ನವಿಲಿನ ವಿನ್ಯಾಸದ ಉಂಗುರಗಳಿಗೆ ಗರಿಗಳನ್ನು ಜೋಡಿಸಿದರೆ ಒಂದು ಒಳ್ಳೆಯ ಮೆರುಗು ಸಿಗುತ್ತದೆ. ರಂಗುರಂಗಿನ ಪುಟ್ಟ ನವಿಲುಕೈಯ ಮೇಲೆ ಬಂದು ಕುಳಿತಂತಿರುತ್ತದೆ.

ಒಂದೇ ಬಣ್ಣದ ಗರಿಯನ್ನು ರಿಂಗ್‌ಗೆ ಬಳಸುವು ದಕ್ಕಿಂತ 2 ಅಥವಾ 3 ಬಣ್ಣದ ಗರಿಗಳನ್ನು ಬಳಸಿದರೆ ಇನ್ನೂ ಅಂದವಾಗಿ ಕಾಣುತ್ತದೆ. ರಂಗಿನ ಗರಿಗಳ ಉಂಗುರ ಈಗಿನ ಹೊಸ ಟ್ರೆಂಡ್ ಆಗಿದೆ. ಈ ರೀತಿಯ ಫೆದರ್ ರಿಂಗ್ ಒಂದನ್ನು ಧರಿಸಿದರೆ ಬೇರೆ ಉಂಗುರ
ಗಳ ಅವಶ್ಯಕತೆ ಇರುವುದಿಲ್ಲ. ಈ ಗರಿಗಳನ್ನು ನಮ್ಮ ಇಷ್ಟಕ್ಕೆ ತಕ್ಕ ಅಳತೆಯಲ್ಲಿ ಬಳಸಬಹುದು.

ಹೆಚ್ಚು ಉದ್ದನೆಯ ಗರಿಗಳನ್ನು ಅಥವಾ ಚಿಕ್ಕ ಗರಿಗಳನ್ನು ಈ ಫೆದರ್ ಉಂಗುರಕ್ಕೆ ಬಳಸಬಹುದು. ಸ್ಟಡ್‌ಗಳಿಗೆ ಗರಿಗಳನ್ನು ಜೋಡಿಸುವುದಾದರೆ ಹೆಚ್ಚು ಉದ್ದದ ಗರಿಗಳ ಬದಲು ಚಿಕ್ಕ ಗರಿಗಳನ್ನು ಉಳಸುವುದು ಉತ್ತಮ.

ನವಿಲಿನ ಉಂಗುರಕ್ಕೆ ಹೆಚ್ಚು ಉದ್ದದ ಗರಿಗಳಿದ್ದರೆ ಅದು ಅಂದವಾಗಿ ಕಾಣುತ್ತದೆ. ಹಾಗೂ ಅದಕ್ಕೆ ಹೆಚ್ಚಿನ ಬಣ್ಣದ ಗರಿಗಳು ಬಳಕೆ ಮಾಡಿದರೆ ಒಳ್ಳೆಯ ಮೆರುಗು ಸಿಗುತ್ತದೆ.

ನೂರು ಜನರ ಮಧ್ಯೆ ಆಕರ್ಷಣೆಯ ಕೇಂದ್ರಬಿಂದು ಆಗಬೇಕು ಎಂದು ಸದಾ ತುಡಿಯುವ ಹೆಣ್ಣುಮಕ್ಕಳ ಕೈಬೆರಳ ಅಂದವನ್ನು ಇಮ್ಮಡಿಗೊಳಿಸುವ ಫೆದರ್‌ ರಿಂಗ್‌ಗಳಿಗೆ ಈಗ ತರುಣಿಯರುಫಿದಾ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.