ADVERTISEMENT

ಅಪೂರ್ವ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST

ನೃತ್ಯಾರ್ಪಣಾ ನೃತ್ಯಶಾಲೆ: ಗುರುವಾರ ಗುರು ಭವಾನಿ ರಾಮನಾಥ್ ಅವರ ಶಿಷ್ಯೆ ಅಪೂರ್ವ ಅವರಿಂದ ಭರತನಾಟ್ಯ ರಂಗಪ್ರವೇಶ.

ನಟುವಾಂಗ: ಗುರು ಭವಾನಿ ರಾಮನಾಥ್. ಗಾಯನ: ವಿದುಷಿ ರೋಹಿಣಿ ಪ್ರಭುನಂದನ. ಮೃದಂಗ: ಲಿಂಗರಾಜು. ಕೊಳಲು:  ವೇಣುಗೋಪಾಲ್. ವಯಲಿನ್: ಸೋಮಣ್ಣ.

ಡಾ. ಉದಯ ಶಂಕರ್ ಮತ್ತು ಅರುಣಾಕುಮಾರಿ ಅವರ ಪುತ್ರಿ ಅಪೂರ್ವ ಯುವ ಪ್ರತಿಭಾವಂತ ನೃತ್ಯ ಕಲಾವಿದೆ. 12 ವರ್ಷದವಳಿದ್ದಾಗ ನೃತ್ಯಾರ್ಪಣಾ ಶಾಲೆಯಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದರು. ಹಿಮಾಂಶು ಜ್ಯೋತಿ ಕಲಾಪೀಠದಲ್ಲಿ ಓದಿ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದಾರೆ.

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು, ಕ್ರೀಡಾಪಟುವೂ ಹೌದು.
ಗುರು ಭವಾನಿ ರಾಮನಾಥ್ ಅವರು ಗುರು ಮುತ್ತಯ್ಯ ಪಿಳ್ಳೈ ಮತ್ತು ಕಿಟ್ಟಪ್ಪ ಪಿಳ್ಳೈ ಅವರ ಬಳಿ ಪಂಡನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ.

ದೂರದರ್ಶನ ಮತ್ತು ರಂಗಕ್ಕಾಗಿ ಹಲವು ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಅವರ ರಚಿಸಿರುವ ಜಾವಳಿ ಮತ್ತು ಲಕ್ಷಣಗೀತೆಗಳು ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿವೆ. ಹಲವು ನಾಟಕ, ಧಾರಾವಾಹಿ, ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
 
1987ರಲ್ಲಿ ನೃತ್ಯಾರ್ಪಣಾ ಶಾಲೆ ಸ್ಥಾಪಿಸಿ ತಮ್ಮ ಕಲೆಯನ್ನು ನೂರಾರು ಶಿಷ್ಯರಿಗೆ ಧಾರೆ ಎರೆದಿದ್ದಾರೆ.ಅತಿಥಿಗಳು: ಡಾ. ಡಿ. ಎಸ್. ಕಾಮತ್, ಎಚ್. ಎನ್. ಸುರೇಶ್.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ  ಸಂಜೆ 6.15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.