ADVERTISEMENT

ಅಪ್ಸರ ಲೋಕ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
ಕ್ಯಾಮೆರಾದಲ್ಲಿ ಸೆರೆ ಹಿಡಿದವರು  ಸತೀಶ್‌ ಬಡಿಗೇರ್
ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಸತೀಶ್‌ ಬಡಿಗೇರ್   

ಹೊಳೆಹೊಳೆವ ಹೊಸ ದಿರಿಸು, ಮಿರುಗುವ ಬೆರಗು ಕಣ್ಣು, ನೀಳಕಾಲು, ಬಿಂಕ ಬಿನ್ನಾಣದ  ಬಳುಕು ಹೆಜ್ಜೆ... ಚೆಲುವಿನ ಖನಿಯಂತಿದ್ದ ರೂಪಸಿಯರು ಹೆಜ್ಜೆ ಮೇಲೆ ಹೆಜ್ಜೆಯನಿಟ್ಟು ನಡೆದು ಬರುತ್ತಿದ್ದರೆ ಅಲ್ಲೊಂದು ಅಪ್ಸರೆಯರ ಲೋಕವೇ ನಿಧಾನವಾಗಿ ತೆರೆದುಕೊಳ್ಳುತ್ತಿತ್ತು.

ಈ ಭೂಲೋಕ ಸ್ವರ್ಗ ಮೈದಳೆದದ್ದು ನಗರದ ಹೋಟೆಲ್ ಷೆರಾಟನ್‌ನಲ್ಲಿ. ವಸ್ತ್ರವಿನ್ಯಾಸಕರಾದ ಲೀನಾ ಸಿದ್ಧಪಡಿಸಿದ ಉಡುಪು ತೊಟ್ಟ ರೂಪದರ್ಶಿಯರು ಬಳುಕುತ್ತಾ ನಡೆದರು.

‘ಬೆಂಗಳೂರು ಫ್ಯಾಷನ್‌ ವೀಕ್‌ 15ನೇ ಆವೃತ್ತಿ’  ಕಾರ್ಯಕ್ರಮದಲ್ಲಿ ಅನಾವರಣಗೊಂಡ ಚಂದಕಿಂತ ಚಂದದ ಉಡುಗೆಗಳನ್ನು ಮತ್ತು ಅವನ್ನು ತೊಟ್ಟ ಸುಂದರ ಯುವತಿಯರನ್ನು ಅಚ್ಚುಕಟ್ಟಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದವರು  ಸತೀಶ್‌ ಬಡಿಗೇರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.