ADVERTISEMENT

ಅರ್ಕುಮೆನ್ ವಿಜಯ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2011, 19:30 IST
Last Updated 9 ನವೆಂಬರ್ 2011, 19:30 IST
ಅರ್ಕುಮೆನ್ ವಿಜಯ
ಅರ್ಕುಮೆನ್ ವಿಜಯ   

ಆರ್ಕಿಟೆಕ್ಚರ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಎಥೋಸ್ ಸಂಸ್ಥೆ ಆಯೋಜಿಸಿದ್ದ `ಅರ್ಕುಮೆನ್~ ಕ್ವಿಜ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ದಯಾನಂದ ಸಾಗರ ಸ್ಕೂಲ್ ಆಫ್ ಆರ್ಕಿಟೆಕ್ಚರ್ ವಿದ್ಯಾರ್ಥಿಗಳಾದ ಪಿ.ಎಸ್.ಶಶಾಂಕ್ ಮತ್ತು ಆಶಿಕ್ ಪಾತ್ರಾ ಪ್ರಥಮ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು.  ಇವರಿಗೆ 15 ಸಾವಿರ ರೂ ನಗದು ಬಹುಮಾನ ದೊರೆಯಿತು.

ಪುಣೆಯ ಪಿವಿಪಿಸಿಓಎ ವಿದ್ಯಾರ್ಥಿಗಳಾದ ಅರ್ನವ್ ಗಾರ್ಡೆ ಮತ್ತು ಅಶ್ವಿನಿ ಜೋಶಿ ಹೆಚ್ಚು ಅಂಕಗಳಿಸಿ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಇದೇ ವಿಭಾಗದ ಬೆಂಡಿಂಗ್ ಮೋಮೆಂಟ್ ಸ್ಪರ್ಧೆಯಲ್ಲಿ ಮಣಿಪಾಲ ಎಂಐಟಿಯ ಶಸದ್ ಗುಜ್ರನ್ ಮತ್ತು ಸಂಚಿತ್ ಚಿತ್ರೆ ಮೊದಲ ಸ್ಥಾನ ಗಳಿಸಿ 25 ಸಾವಿರ ರೂ ನಗದು ಬಹುಮಾನಕ್ಕೆ ಪಾತ್ರರಾದರು.

ಕೋಲ್ಕತ್ತಾದ ವಾಸ್ತುಶಿಲ್ಪಿ ಗೀತಾ ಬಾಲಕೃಷ್ಣನ್ ಅವರ ಕನಸಿನ ಕೂಸು `ಎಥೋಸ್~. ಇವರು ಎಥೋಸ್ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.