ADVERTISEMENT

ಆತ್ಮಾವಲೋಕನ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಮನುಷ್ಯ ಎಷ್ಟೇ ಉನ್ನತ ಮಟ್ಟಕ್ಕೆ ಏರಿರಲಿ. ಆತ್ಮಾವಲೋಕನ ಅಗತ್ಯ. ಅದು ಮಿತಿ ದಾಟಿ ಹಾರಾಡದಂತೆ ನಮ್ಮನ್ನು ತಡೆಯುತ್ತದೆ. ಕೇರಳದ ದೇವನ್ ಮದಾಂಗರ್ಲಿ ಅವರ ಚಿಂತನೆಗೆ ಹಚ್ಚುವ ‘ಇಂಟ್ರಾಸ್ಪೆಕ್ಟಿವ್ ಪರ್ಸೆಪ್ಷನ್ಸ್’ ಸರಣಿಯ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

ದಟ್ಟ ಬಣ್ಣಗಳನ್ನು ಬಳಸಿರುವ ಈ ಕಲಾಕೃತಿಗಳಲ್ಲಿ ಮನುಷ್ಯರು ಒಂಟಿಯಾಗಿ ಕುಳಿತು ಯೋಚಿಸುತ್ತಿರುವ, ಸ್ವಯಂ ಅವಲೋಕನ ಮಾಡಿಕೊಳ್ಳುವ ಭಾವ ಎದ್ದು ಕಾಣುತ್ತದೆ.

ದೇವನ್ ಮದಾಂಗರ್ಲಿ ಕೇರಳದಲ್ಲಿ ಹುಟ್ಟಿ ಬೆಳೆದ ಕಲಾವಿದ. ತಮಗೆ ತಾವೇ ಗುರುವಾಗಿ ಚಿತ್ರಕಲೆ ಕಲಿತವರು. ಹಲವು ಪ್ರಮುಖ ಸಮೂಹ ಪ್ರದರ್ಶನ, ಕಲಾ ಶಿಬಿರದಲ್ಲಿ ಪಾಲ್ಗೊಂಡಿರುವ ಅವರು ಕೇರಳ ಲಲಿತಕಲಾ ಅಕಾಡೆಮಿಯ ಪುರಸ್ಕಾರ ಪಡೆದಿದ್ದಾರೆ.

ಸ್ಥಳ: ಸಾರಾ ಅರಕ್ಕಲ್ ಗ್ಯಾಲರಿ, 156, 4ನೇ ಮುಖ್ಯರಸ್ತೆ, ಬಿಇಎಂಎಲ್ ಲೇಔಟ್, ಐಟಿಪಿಎಲ್ ರಸ್ತೆ. ಪ್ರದರ್ಶನ ಜನವರಿ 30ರಂದು ಮುಕ್ತಾಯ.                                                       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.