ADVERTISEMENT

ಆರತಿ ತಟ್ಟೆಯಲ್ಲಿ ದೇವರ ರೂಪ

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಆರತಿ ತಟ್ಟೆಯಲ್ಲಿ ದೇವರ ರೂಪ
ಆರತಿ ತಟ್ಟೆಯಲ್ಲಿ ದೇವರ ರೂಪ   

ಆರತಿ ತಟ್ಟೆಗಳಿಗೆ ಮನೆಗಳಲ್ಲಿ ಪೂಜ್ಯ ಸ್ಥಾನ. ಹಬ್ಬ, ದೇವರ ಪೂಜೆ, ಅರಿಶಿನ ಕುಂಕುಮದಂತಹ ಕಾರ್ಯಕ್ರಮಗಳಲ್ಲಿ ಆರತಿ ತಟ್ಟೆ ಬೇಕು. ಈ ಆರತಿ ತಟ್ಟೆಗಳಿಗೆ ಯಾವುದೇ ವಿನ್ಯಾಸಗಳಿರುವುದಿಲ್ಲ. ಆದರೆ ಯಲಹಂಕದ ಉಮಾಸರ್ವೆಶ್‌ ಅವರು ಆರತಿ ತಟ್ಟೆಗಳಲ್ಲಿ ಕುಂಕುಮ ಹರಡಿ, ಅದರ ಮೇಲೆ ಬೆಂಕಿಕಡ್ಡಿ ಸಹಾಯದಿಂದ ಬೇರೆ ಬೇರೆ ದೇವರುಗಳ ಚಿತ್ರಗಳನ್ನು ಬರೆಯುತ್ತಾರೆ.

ಆಯಾ ಹಬ್ಬಗಳ ಸಂದರ್ಭಗಳಲ್ಲಿ ರಂಗೋಲಿಯಲ್ಲಿ ದೇವರುಗಳನ್ನು ಕೈಯಲ್ಲೇ ಬರೆದು ಬಣ್ಣ ತುಂಬುತ್ತಾರೆ ಉಮಾ ಅವರು. ಅವರಿಗೆ ಈ ಹವ್ಯಾಸ ಕೈಹಿಡಿದಿದ್ದು ಆಕಸ್ಮಿಕವಾಗಿ. ತಟ್ಟೆಯಲ್ಲಿ ಕುಂಕುಮ ಹಾಕಿ ದೇವರುಗಳ ಚಿತ್ರ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದ ಉಮಾ ಅವರಿಗೆ ಬರುಬರುತ್ತಾ ಚಕಚಕನೇ ಎಲ್ಲಾ ದೇವರುಗಳ ಚಿತ್ರ ಬರೆಯುವ ಅಭ್ಯಾಸ ಬೆಳೆಸಿಕೊಂಡರು.

ಉಮಾಸರ್ವೆಶ್‌

ADVERTISEMENT

ಸಾಮಾನ್ಯವಾಗಿ ಯಾರ ಮನೆಗೆ ಪೂಜೆ , ಅರಿಶಿನ , ಕುಂಕುಮಕ್ಕೆ ಹೋದಾಗ ಅವರ ಮನೆಯಲ್ಲೇ ಒಂದು ತಟ್ಟೆ, ಸ್ವಲ್ಪ ತುಪ್ಪ, ಕುಂಕುಮ ಒಂದು ಬೆಂಕಿ ಕಡ್ಡಿ ತೆಗೆದುಕೊಂಡು, ಅವರಿಗೆ ಯಾವ ದೇವರು ಬೇಕೋ ಅದನ್ನು ಐದು ನಿಮಿಷ ಗಳಲ್ಲಿ ಬರೆಯುತ್ತಾರೆ. ಈಚೆಗೆ ಅಮೆರಿಕಕ್ಕೆ ಹೋದಾಗ ಅಲ್ಲೂ ಸ್ನೇಹಿತರ ಮನೆಗಳಲ್ಲಿ  ತಟ್ಟೆಯಲ್ಲಿ ದೇವರ ಚಿತ್ರ ಬಿಡಿಸಿ ಮೆಚ್ಚುಗೆ ಗಳಿಸಿದ್ದಾರೆ. ಕಸೂತಿ , ರಂಗೋಲಿ , ತರಕಾರಿ ಕೆತ್ತನೆ, ಕೇಶ ವಿನ್ಯಾಸದಲ್ಲೂ ಉಮಾ ಅವರ ಇತರ ಹವ್ಯಾಸಗಳು.

ಸಂಪರ್ಕಕ್ಕೆ – 9945650440

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.