ADVERTISEMENT

ಇಂದು ಉಂಡಾಡಿ ಗುಂಡ ನಾಟಕ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:30 IST
Last Updated 18 ಮೇ 2012, 19:30 IST

ಭಾರ್ಗವಿ ನಾರಾಯಣ್ ನಿರ್ದೇಶನದ `ಉಂಡಾಡಿ ಗುಂಡ~ ನಾಟಕ ಶನಿವಾರ ಪ್ರದರ್ಶನಗೊಳ್ಳಲಿದೆ. ಗ್ರೀನ್‌ರೂಂ ತಂಡ ಕಲಾವಿದರು ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.

ಇದು ಹಾಸ್ಯ ಪ್ರಧಾನ ಸಾಮಾಜಿಕ ನಾಟಕ. ಗೋವಿಂದರಾಯ ಒಬ್ಬ ಶ್ರೀಮಂತ ಜಮೀನ್ದಾರ. ಮಲೆನಾಡಿನ ಒಂದು ಸಣ್ಣ ಊರಿನಲ್ಲಿ ವಾಸ. ಹೆಂಡತಿ ಭಾಗೀರಥಿ. ಪದ್ಮ ಮತ್ತು ಶಾಂತಿ ಇಬ್ಬರು ಹೆಣ್ಣುಮಕ್ಕಳು. ಒಬ್ಬ ಮಗ ಗುಂಡ.
 
ಮಗ ಓದಿನಲ್ಲಿ ಚುರುಕಿಲ್ಲವೆಂದು ತಂದೆಗೆ ಅಸಮಾಧಾನ. ತನ್ನ ಹಾಗೂ ತನ್ನ ಸ್ನೇಹಿತರ ಬಗ್ಗೆ ತಂದೆ ಹಗುರವಾಗಿ ಮಾತಾಡಿದರೆಂಬ ಕಾರಣಕ್ಕೆ ಗುಂಡನಿಗೆ ತಂದೆಯ ಬಗ್ಗೆ ಕೋಪ. ತನ್ನ ಸಹೋದರಿ ಪದ್ಮಾಳನ್ನು ನೋಡಲು ಬೆಂಗಳೂರಿಗೆ ಬಂದ ರಾಮು ಹಾಗೂ ಅವನ ಸ್ನೇಹಿತ ಕಿಟ್ಟಿ ಮನೆ ಸಿಕ್ಕದೆ ಒದ್ದಾಡುತ್ತ್ದ್ದಿದಾಗ ಅವರಿಬ್ಬರನ್ನೂ ತನ್ನ ಮನೆಗೆ ಕರೆತಂದು ಇದೊಂದು ಹೋಟೆಲ್ ಎಂದು ಪರಿಚಯಿಸುತ್ತಾನೆ.

ಅವನ ಮಾತು ನಂಬಿ ಆ ಮನೆಯನ್ನು ಹೋಟೆಲ್ ಎಂದುಕೊಂಡ ರಾಮು ಮತ್ತು ಕಿಟ್ಟು ಅಲ್ಲಿ ಸ್ವೇಚ್ಛೆಯಾಗಿ ವರ್ತಿಸಿ ಫಜೀತಿಗೆ ಒಳಗಾಗುವುದೇ ನಾಟಕದ ಕಥೆ.ಎಸ್. ಶಿವರಾಂ, ಎ.ಪದ್ಮನಾಭ, ಬಿ.ಆರ್. ಜಯರಾಂ, ರಾಜಲಕ್ಷ್ಮಿ ಆಚಾರ್, ಕುಲದೀಪಕ್, ನಂಜುಂಡಮೂರ್ತಿ ಮತ್ತಿತರ ಕಲಾವಿದರು ಅಭಿನಯಿಸಲಿದ್ದಾರೆ.

ಸ್ಥಳ: ರಂಗಶಂಕರ, ಜೆ.ಪಿ. ನಗರ ಎರಡನೇ ಹಂತ. ಮಧ್ಯಾಹ್ನ 3.30 ಹಾಗೂ ಸಂಜೆ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.