ADVERTISEMENT

ಇಂದು ಮತ್ತು ನಾಳೆ, ನಾಡಿದ್ದು...

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 19:30 IST
Last Updated 18 ಫೆಬ್ರುವರಿ 2011, 19:30 IST

ದಿ ಔಟ್‌ಹೌಸ್
ಚಿತ್ರಸಮೂಹ ಮತ್ತು ಕೆ ವಿ ಸುಬ್ಬಣ್ಣ ಆಪ್ತಸಮೂಹ: ಶನಿವಾರ ಸಂಜೆ 6 ಮತ್ತು ಭಾನುವಾರ  ಮಧ್ಯಾಹ್ನ 3.30ಕ್ಕೆ ಪ್ರಶಸ್ತಿ ವಿಜೇತ ಇಂಗ್ಲಿಷ್ ಚಿತ್ರ ‘ದಿ ಔಟ್‌ಹೌಸ್’ (ನಿ: ಲೆಸ್ಲಿ ಕರ್ವಾಲೊ. ಛಾಯಾಗ್ರಹಣ: ಎಸ್. ರಾಮಚಂದ್ರ. ಪಾತ್ರವರ್ಗ: ಪ್ರೆಸಿಲ್ಲೊ ಕರ್ವಾಲೊ, ರತನ್ ಠಾಕೋರ್ ಗ್ರಾಂಟ್, ಜುಡಿತ್ ಬಿಡ್ಡಪ್ಪ).
ಸ್ಥಳ: 151, 7ನೇ  ಕ್ರಾಸ್, ಟೀಚರ್ಸ್ ಕಾಲೋನಿ 1ನೇ ಹಂತ (ದಯಾನಂದ ಸಾಗರ್ ಕಾಲೇಜು ಬಳಿ, ವಸುಧಾ ಭವನ ಎದುರು), ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ ಆರ್ ಗೋಪಿನಾಥ್ 92425 23523.

ಸ್ಕಂದ ಪ್ರವಚನ
ಉಡುಪಿ ಫಲಿಮಾರು ಮಠ: ಶನಿವಾರ ಭಾನುವಾರ ಮತ್ತು ಸೋಮವಾರ ಕಡೂರು ಶ್ರೀಧರ್ ಆಚಾರ್ಯ ಅವರಿಂದ ಭಾಗವತ ದ್ವಿತಿಯ ಸ್ಕಂದ ಪ್ರವಚನ.
ಸ್ಥಳ: ಉಡುಪಿ ಫಲಿಮಾರು ಮಠ, ಸಂಪಿಗೆ ರಸ್ತೆ (ಫುಡ್‌ವರ್ಲ್ಡ್ ಎದುರು), ಮಲ್ಲೇಶ್ವರ. ಸಂಜೆ 7.

ಜೀರ್ಣೋದ್ಧಾರ
ಕಾಳಿಕಾಂಬಾಪರಮೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್: ನೂತನ ವಿಮಾನ ಗೋಪುರ ಹಾಗೂ ದೇವಾಲಯದ ಜೀರ್ಣೋದ್ಧಾರ, ಕುಂಭಾಭಿಷೇಕ. ಶನಿವಾರ ಬೆಳಿಗ್ಗೆ ಬಿಂಬ ಶುದ್ಧಿ, ಶಾಂತಿ ಪ್ರಾಯಶ್ಚಿತ್ತ ಹೋಮ.

ಸಂಜೆ 6ಕ್ಕೆ ಕರ್ನಾಟಕ ಸಾಂಸ್ಕೃತಿಕ ಕಾಲ ಪ್ರತಿಷ್ಠಾನ ಕಲಾವಿದರಿಂದ ‘ಷಣ್ಮುಗ ವಿಜಯ-ಪುರುಷಾ ಮೃಗ’ ಯಕ್ಷಗಾನ ಪೌರಾಣಿಕ ಯಕ್ಷಗಾನ ಬಯಲಾಟ.
ಭಾನುವಾರ ಬೆಳಿಗ್ಗೆ 9.15ಕ್ಕೆ ತತ್ವ ಹೋಮ, ದೇವತಾ ಪ್ರತಿಷ್ಠೆ, ಜೂನಿಯರ್ ಘಂಟಸಾಲ ವೃದಂದವರಿಂದ ಭಕ್ತಿಗೀತೆಗಳು. ಬೆಳಿಗ್ಗೆ 10.30ಕ್ಕೆ ಉದ್ಘಾಟನೆ: ಬಾಲಗಂಗಾಧರನಾಥ  ಸ್ವಾಮೀಜಿ, ಅತಿಥಿಗಳು: ಶಿವಕುಮಾರ್ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಅಧ್ಯಕ್ಷತೆ: ವಿ.ಸೋಮಣ್ಣ. ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ. ಸಂಜೆ 6ಕ್ಕೆ ರಾಮಕೃಷ್ಣ ಸೇವಾ ಟ್ರಸ್ಟ್ ಅವರಿಂದ ಭಜನೆ.

ಸ್ಥಳ: 5ನೇ ಅಡ್ಡ ರಸ್ತೆ, 8ನೇ ಮುಖ್ಯ ರಸ್ತೆ, ಆವಲಹಳ್ಳಿ, ಬಿಡಿಎ ಬಡಾವಣೆ. (ರಾಷ್ಟ್ರಕವಿ ಕುವೆಂಪು ರಂಗ ಮಂದಿರದ ಎದುರು).

 ಮೋನಿಶಾ ನೃತ್ಯೋತ್ಸವ...
ಮೋನಿಶಾ ಆರ್ಟ್ಸ್: ಮೋನಿಶಾ ನೃತ್ಯೋತ್ಸವ. ಶನಿವಾರ ಬೆಳಿಗ್ಗೆ 11ಕ್ಕೆ ಮೋನಿಶಾ ಆರ್ಟ್ಸ್ ವಿದ್ಯಾರ್ಥಿಗಳಿಂದ ಕೈಕೊಟ್ಟಿಕಳಿ. ನಿರ್ಮಲಾ ಪಣಿಕ್ಕರ್ ಅವರಿಂದ ಮೋಹಿನಿ ಆಟ್ಟಂ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ. ಸಂಜೆ
6.30ಕ್ಕೆ ರಾಜಶ್ರೀ ವಾರಿಯರ್ ಅವರಿಂದ ಭರತನಾಟ್ಯ. 7.45ಕ್ಕೆ ಭಾರತಿ ಶಿವಾಜಿ ಅವರಿಂದ ಮೋಹಿನಿ ಆಟ್ಟಂ.
ಭಾನುವಾರ ಸಂಜೆ 5ಕ್ಕೆ ಮೋನಿಶಾ ಆರ್ಟ್ಸ್ ಕಲಾವಿದರಿಂದ ನೃತ್ಯ. 7ಕ್ಕೆ ಸತ್ಯನಾರಾಯಣ ರಾಜು ಅವರಿಂದ ಭರತನಾಟ್ಯ. 8ಕ್ಕೆ ಕೇರಳದ ತಂಡದಿಂದ ಥೆಯ್ಯಂ ನೃತ್ಯ.

ADVERTISEMENT

ಸ್ಥಳ; ಎಡಿಎ ರಂಗಮಂದಿರ. ರವೀಂದ್ರ ಕಲಾಕ್ಷೇತ್ರದ ಎದುರು. ಜೆ.ಸಿ.ರಸ್ತೆ.

ಸತ್ಯ ಕಲೆ
ನಮನ್: ಶನಿವಾರ ಭಾನುವಾರ ಸೋಮವಾರ ಸತ್ಯ ಶಿವಕುಮಾರ್ ಅವರಿಂದ  ‘ಕರಗಿದ ಶಿಲೆಗಳು ಅಂಡ್ ಮಚ್ ಮೋರ್’ ಕಲಾ ಪ್ರದರ್ಶನ.

ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ.

ಶ್ರೀಮದ್ಭಾಗವತ
ಶ್ರೀ ಕೃಷ್ಣಪ್ರಜ್ಞ ಪ್ರತಿಷ್ಠಾನ: ಶನಿವಾರ ಭಾನುವಾರ ಗುರುರಾಜ ಆಚಾರ್ಯರಿಂದ ಶ್ರೀಮದ್ಭಾಗವತ ಕುರಿತು ಪ್ರವಚನ. ಸ್ಥಳ; ವಿದ್ಯಾಧೀಶ ಸಭಾಂಗಣ,  ವಾಣಿ ವಿಲಾಸ ರಸ್ತೆ, ಬಸವನಗುಡಿ. ನಿತ್ಯ ಸಂಜೆ 6.

ಪ್ರವಚನ
ವಿದ್ಯಾರಣ್ಯಪುರ ಧಾರ್ಮಿಕ ಸೇವಾ ಟ್ರಸ್ಟ್ ಹಾಗೂ ರಾಮಕೃಷ್ಣ ಸೇವಾ ಟ್ರಸ್ಟ್: ಶನಿವಾರ, ಭಾನುವಾರ  ಸ್ವಾಮಿ ಅಭಯಚೈತನ್ಯ ಅವರಿಂದ ಭಗವದ್ಗೀತೆ ಭಕ್ತಿಯೋಗ ಪ್ರವಚನ. ಸ್ಥಳ: ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಎಚ್‌ಎಂಟಿ ಲೇಔಟ್, ವಿದ್ಯಾರಣ್ಯಪುರ 2ನೇ ಹಂತ. ಸಂಜೆ 6.30.

ನರಸಿಂಹ ಉತ್ಸವ
ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ: ಶನಿವಾರ ಬೆಳಿಗ್ಗೆ 9ಕ್ಕೆ ಮಹಾಭಿಷೇಕ. ಸಂಜೆ 7ಕ್ಕೆ ವಿಶ್ವಕ್ಸೇನರ ಉತ್ಸವ. ಭಾನುವಾರ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ. ಸಂಜೆ 7ಕ್ಕೆ ಹಂಸವಾಹನೋತ್ಸವ. ಸೋಮವಾರ ಬೆಳಿಗ್ಗೆ 10ಕ್ಕೆ ತಿರುವೀದಿ ಉತ್ಸವ. ಸಂಜೆ 7ಕ್ಕೆ ಹನುಮಂತ ವಾಹನೋತ್ಸವ. ಸ್ಥಳ: 15ನೇ ಅಡ್ಡರಸ್ತೆ, ಮಲ್ಲೇಶ್ವರಂ.

ದಾಸನವಮಿ
ರಾಮದಾಸಸ್ವಾಮಿ ಮಠ: ರಾಮದಾಸಸ್ವಾಮಿ ದಾಸನವಮಿ ಉತ್ಸವ. ಶನಿವಾರ ಬೆಳಿಗ್ಗೆ 7.30ಕ್ಕೆ ಅಭಿಷೇಕ. ಸಂಜೆ 8ಕ್ಕೆ ಸಮರ್ಥ ರಾಮದಾಸ ಮತ್ತು ಎಸ್.ಎಸ್.ಕೆ.ಕಲಾ ಸಮಿತಿ ಅವರಿಂದ ಭಕ್ತಿಗೀತೆ.
ಭಾನುವಾರ ಸಂಜೆ 7ಕ್ಕೆ ಹೆಚ್.ಎಂ. ಶಂಕರಸಾ ಮತ್ತು ವೃಂದದಿಂದ ಭಕ್ತಿಗೀತೆ. ಸೋಮವಾರ ಸಂಜೆ 8ಕ್ಕೆ ಮಲ್ಲಿಕಾರ್ಜುನ ಮಂಡಳಿ ಅವರಿಂದ ಸಾಂಪ್ರದಾಯಿಕ ಪಂಡರೀ ಭಜನೆ. 
ಸ್ಥಳ: ಬಸೆಟ್ಟಪೇಟೆ, ಬಿ.ವಿ.ಕೆಅಯ್ಯಂಗಾರ್ ರೋಡ್ ಕ್ರಾಸ್, ಚಿಕ್ಕಪೇಟೆ.

ಪ್ರವಚನ
ಕಬೀರನಾಥಸ್ವಾಮೀಜಿ ಬ್ರಹ್ಮವಿದ್ಯಾಶ್ರಮ ಟ್ರಸ್ಟ್: ಭಾನುವಾರ ಮತ್ತು ಸೋಮವಾರ ಕಬೀರನಾಥಸ್ವಾಮೀಜಿ 60ನೇ ವರ್ಷದ ಪುಣ್ಯಾರಾಧನ ಸಪ್ತಾಹ. ಸ್ಥಳ: 3ನೇ ಕ್ರಾಸ್, ಕೆಂಪೇಗೌಡ ಬಡಾವಣೆ. ನಿತ್ಯ ಸಂಜೆ. ಮಾಹಿತಿಗೆ: 2228 7793.

ಕುಂಭಾಭಿಷೇಕ
ಬಾಲಾಂಜನೇಯಸ್ವಾಮಿ ದೇವಾಲಯ: ವೆಂಕಟರಮಣಸ್ವಾಮಿ ದೇವಾಲಯಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವ. ಶನಿವಾರ ಸಂಜೆ 4ಕ್ಕೆ ಕಲಶಾರಾಧನೆ, ವಿಮಾನಗೋಪುರ ಕಳಶ ಸ್ಥಾಪನೆ.
ಭಾನುವಾರ ಬೆಳಿಗ್ಗೆ ಹೋಮ. ಸೋಮವಾರ ಮಂಡಲ ಪೂಜೆ. ಸಾನ್ನಿಧ್ಯ: ಕುಮಾರ ಚಂದ್ರಶೇಖರನಾಥ ಸ್ವಾಮೀಜಿ. ಸ್ಥಳ: ನ್ಯೂ ಬಿಇಎಲ್ ರಸ್ತೆ, ರಾಜಮಹಲ್ ವಿಲಾಸ 2ನೇ ಹಂತ.

ಮಹಾಭಾರತ
ಸದ್ವಿಚಾರ ಸೇವಾ ಟ್ರಸ್ಟ್: 108 ದಿನಗಳ ಶ್ರೀಮನ್ ಮಹಾಭಾರತ ಪ್ರವಚನ ಮಾಲಿಕೆಯಲ್ಲಿ ವಿಷ್ಣುದಾಸ ನಾಗೇಂದ್ರಾಚಾರ್ಯ ಅವರಿಂದ ಪ್ರವಚನ. ಸ್ಥಳ: ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ಬಿಎಂಎಸ್ ಕಾಲೇಜು ಸಮೀಪ, ಬಸವನಗುಡಿ. ಸಂಜೆ 6.30.

ಹರಿದಾಸರು ಕಂಡ ಹನುಮ
ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ ಆರ್.ಪರಮೇಶ್ವರ ಮತ್ತು ಡಾ. ಜನೆಟ್ ಪರಮೇಶ್ವರ್ ಅವರಿಂದ ಆರೋಗ್ಯ ಕಾರ್ಯಕ್ರಮ.
ಭಾನುವಾರ ಸಂಜೆ 5.30 ಕ್ಕೆ ಮೈಸೂರು ರಾಮಚಂದ್ರಾಚಾರ್ ಅವರಿಂದ ದಾಸರಪದಗಳು.
ಸೋಮವಾರ ಸಂಜೆ 6ಕ್ಕೆ ಸಾಮೂಹಿಕ ಶ್ರೀ ಸಂಕಷ್ಠಹರ ಗಣಪತಿ ವ್ರತ.  ಸ್ಥಳ: ರಾಗಿಗುಡ್ಡ ದೇವಸ್ಥಾನ, 9ನೇ ಬ್ಲಾಕ್ ಜಯನಗರ.

ಶೇಷವಾಹನೋತ್ಸವ
ಜ್ಯೋತಿನಗರೇಶ್ವರ ಸ್ವಾಮಿ ಮತ್ತು ಚನ್ನಕೇಶವಸ್ವಾಮಿ ದೇವಸ್ಥಾನಗಳ ಸಮಿತಿ: ಶ್ರೀಭೂದೇವಿ ನೀಳಾದೇವಿಯವರ ಸಮೇತ ಶ್ರೀ ಚೆನ್ನಕೇಶವಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ. ಶನಿವಾರ ಶೇಷವಾಹನೋತ್ಸವ. ಭಾನುವಾರ ಮತ್ತು ಸೋಮವಾರ ವಿಶೇಷ ಪೂಜೆ. ಸ್ಥಳ: ಗಾಣಿಗರ ಪೇಟೆ. ಸಂಜೆ 6.30.

ಶಿವಸ್ತುತಿ
ನವ ಮಂತ್ರಾಲಯ ಮಂದಿರ:  ಎಸ್.ಆರ್. ಮೋಹನಾಚಾರ್ಯ ಅವರಿಂದ ‘ಶಿವಸ್ತುತಿ’. 
ಸ್ಥಳ: ಬಸವನಗುಡಿ ರಸ್ತೆ. ಸಂಜೆ 6.30.

ಸಂಗೀತ, ಪ್ರವಚನ
ತಿರುಮಲ ತಿರುಪತಿ ದೇವಸ್ಥಾನ ಹಿಂದೂ ಧರ್ಮ ಪ್ರಚಾರ ಪರಿಷತ್: ಶನಿವಾರ ಸಂಜೆ 6ಕ್ಕೆ ಜಯನಗರ ಟಿಟಿಡಿಯಲ್ಲಿ ರೂಪಶ್ರೀ ಸಂಗೀತ ಮತ್ತು ಪಿ. ಭುಜಂಗರಾವ್ ಪ್ರವಚನ.
ಭಾನುವಾರ ಸಂಜೆ 6ಕ್ಕೆ ವೈಯಾಲಿಕಾವಲ್ ಟಿಟಿಡಿಯಲ್ಲಿ ಟಿ. ಸಿಂಧು ಅವರಿಂದ ಉಪನ್ಯಾಸ.

ಹರಿದಾಸ ನಮನ
ಫಲಿಮಾರು ಮಠ: ಶನಿವಾರ ಹರಿದಾಸ ನಮನ. ಸಾನ್ನಿಧ್ಯ: ರಘುಮಾನ್ಯತೀರ್ಥ ಸ್ವಾಮೀಜಿ.  ಉಪನ್ಯಾಸ: ಡಾ.ಅರಳುಮಲ್ಲಿಗೆ ಪಾರ್ಥಸಾರಥಿ. ನಂತರ ರಾಯಚೂರು ಶೇಷಗಿರಿದಾಸ ಅವರಿಂದ ಹರಿದಾಸ ವಾಣಿ,
ಭಾನುವಾರ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ ವಿಷ್ಣು ಸಹಸ್ರನಾಮ ಕುರಿತು ಉಪನ್ಯಾಸ, ಹುಸೇನ್‌ಸಾಬ್ ಕನಕಗಿರಿ ಅವರಿಂದ ಹರಿದಾಸ ವಾಣಿ. ಸ್ಥಳ: ಪ್ರಸನ್ನ ಶ್ರೀನಿವಾಸ ಸನ್ನಿಧಿ, ವಿದ್ಯಾಮಾನ್ಯ ನಗರ. ಸಂಜೆ 5.30.

ಗುಡಿಯ ಸಂಭ್ರಮದಲ್ಲಿ...
ಪಾರಂಪರಿಕ ಸಂಸ್ಕೃತಿ ಸೇವಾ ಸಮಿತಿ- ಹೆರಿಟೇಜ್: ಗುಡಿ ಸಂಭ್ರಮ. ಶನಿವಾರ ಪೂರ್ಣಿಮ ಗುರುರಾಜ ಅವರಿಂದ ಭರತನಾಟ್ಯ. ಚೆನ್ನೈಯ ಚಾರುಲತ ಮಣಿ ಅವರಿಂದ ಕರ್ನಾಟಕ ಸಂಗೀತ.
ಭಾನುವಾರ ವೀಣಾ ಮತ್ತು ಧನ್ಯಾ ನಾಯರ್ ಸಹೋದರಿಯರಿಂದ ಮೋಹಿನಿಆಟ್ಟಂ ಮತ್ತು ಭರತನಾಟ್ಯ. ಬಾಲಸುಬ್ರಮಣ್ಯ ಶರ್ಮ ಅವರಿಂದ ಕರ್ನಾಟಕ ಸಂಗೀತ. ಸ್ಥಳ: ಚೊಕ್ಕನಾಥಸ್ವಾಮಿ ದೇವಸ್ಥಾನ, ದೊಮ್ಮಲೂರು. ಸಂಜೆ 5.30.

ವೀಣಾವಾದನ, ಭಜನೆ
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ ಸಂಧ್ಯಾ ಬಾಲಚಂದ್ರ ಅವರಿಂದ ವೀಣಾವಾದನ ಸಂಜೆ 6.30. 
ಭಾನುವಾರ ಬೆಳಿಗ್ಗೆ 9ಕ್ಕೆ ಲಲಿತಾ ಪಂತುಲು ಅವರಿಂದ ಭಜನೆ. ಸ್ಥಳ: ಮಹಾಲಕ್ಷ್ಮೀಪುರ.

ಆರಾಧನಾ ಮಹೋತ್ಸವ
ತ್ಯಾಗರಾಜ ಗಾನ ಸಭಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ: ಪುರಂದರ, ತ್ಯಾಗರಾಜರ ಆರಾಧನಾ ಮಹೋತ್ಸವ, ಶನಿವಾರ ಸಂಜೆ 4 ಕ್ಕೆ ಗಾಯನದಲ್ಲಿ: ಮಧುವಂತಿ, ಮೇಘನಾ ಮಧುಸೂದನ್, ಚಿಂತಲಪಲ್ಲಿ ಸೋಮಶೇಖರ್, ತನ್ಮಯಿ ಕೃಷ್ಣಮೂರ್ತಿ, ಸೌಮ್ಯ ಸುಬ್ಬಗಂಗಾ, ಸಾಯಿತೇಜಸ್ ಚಂದ್ರಶೇಖರ್. ಎ.ಶಂಕರರಾಮನ್ (ವೀಣೆ), ಗಾಯಿತ್ರಿ ರಾಜಾಪುರೆ ಕಾಸೆಬಾಂ (ಗೋಟುವಾದ್ಯ). ಭಾನುವಾರ ಬೆಳಿಗ್ಗೆ 8ಕ್ಕೆ ತ್ಯಾಗರಾಜರ ಪಂಚರತ್ನ, ಪುರಂದರದಾಸರ ನವರತ್ನ ಮಾಲಿಕೆ ಗೋಷ್ಠಿಗಾಯನ. ಸ್ಥಳ: 1246, ವಾಣಿ ವಿದ್ಯಾಕೇಂದ್ರ, 4ನೇ ಮುಖ್ಯರಸ್ತೆ, ಈ ಬ್ಲಾಕ್, 2ನೇ ಹಂತ, ರಾಜಾಜಿನಗರ.

ವೈರಮುಡಿ ಉತ್ಸವ
ಶ್ರೀರಂಗಂ ಶ್ರೀಮದ್ ಆಂಡವನ್ ಆಶ್ರಮ: ಬ್ರಹ್ಮೋತ್ಸವ ಕಾರ್ಯಕ್ರಮ. ಶನಿವಾರ ಬೆಳಿಗ್ಗೆ ಸಾಮೂಹಿಕ ಕಲ್ಯಾಣೋತ್ಸವ. ಸಂಜೆ ಶಯನೋತ್ಸವ. ಭಾನುವಾರ ಬೆಳಿಗ್ಗೆ ಸುಪ್ರಭಾತಂ, ವಿಶ್ವರೂಪದರ್ಶನಂ. ಸಂಜೆ ವೈರಮುಡಿ ಉತ್ಸವ.
ಸ್ಥಳ: ಅಂಡಾಳ್ ರಂಗಮನ್ನಾರ್ ದೇವಸ್ಥಾನ, ಗರುತ್ಮನ್ ಪಾರ್ಕ್, ಆರ್‌ವಿಟಿ ಕಾಲೇಜು ಹಿಂಭಾಗ, ಆರ್‌ವಿ ರಸ್ತೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.