ADVERTISEMENT

ಇಂದು ‘ಸ್ಮಿರ್ನ್‌ಆಫ್’ ಅಬ್ಬರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST
ಇಂದು ‘ಸ್ಮಿರ್ನ್‌ಆಫ್’ ಅಬ್ಬರ
ಇಂದು ‘ಸ್ಮಿರ್ನ್‌ಆಫ್’ ಅಬ್ಬರ   

ಸಂಗೀತ ಪ್ರಿಯರಿಗೆ ವಿಶೇಷ ಬಗೆಯ ರಸದೌತಣ ನೀಡಲು ನಗರ ಈಗ ಸಜ್ಜುಗೊಂಡಿದೆ. ಶನಿವಾರ ನಡೆಯುವ ‘ಸ್ಮಿರ್ನ್‌ಆಫ್’ ಕಾರ್ಯಕ್ರಮ ಸಂಗೀತ ಮೋಹಿಗಳಿಗೆ ನಾದ- ಲೋಕದ ವಿಶಿಷ್ಟ ಅನುಭೂತಿ ಕಟ್ಟಿಕೊಡಲಿದೆ.

 ಡಬ್‌ಸ್ಟೆಪ್ ಐಕಾನ್ ‘ನೆರೊ’ ಮತ್ತು ‘ರುಸ್ಕೊ’ ಅವರ ನೇತೃತ್ವದಲ್ಲಿ ನಡೆಯುವ ಈ ವಿಶೇಷ ಶೈಲಿಯ ಕಾರ್ಯಕ್ರಮವು ತಂತ್ರಜ್ಞಾನ, ಸಂಗೀತ ಮತ್ತು ದೃಶ್ಯ ಕಲಾ ಮಾಧ್ಯಮದ ನಡುವಿನ ಗೆರೆಗಳನ್ನೇ ಮಸುಕಾಗಿಸಿ, ಮೂರೂ ಪ್ರಕಾರಗಳನ್ನು ಒಂದಾಗಿಸಿ ಭಿನ್ನ ಸ್ವರೂಪದ ನಾದವನ್ನು  ಹೊಮ್ಮಿಸಲಿದೆ.

ಭಾರತೀಯ ಸಂಗೀತ ಲೋಕದ ಇತಿಹಾಸದಲ್ಲಿಯೇ ಈ ಬಗೆಯ ಪ್ರಯತ್ನ ಮೊಟ್ಟ ಮೊದಲನೆಯದು ಎಂದು ಹೇಳಿಕೊಳ್ಳುತ್ತಾರೆ ಕಾರ್ಯಕ್ರಮ ಆಯೋಜಿಸಿರುವ ಆಯೋಜಕರು.

ADVERTISEMENT

ಗ್ರ್ಯಾಮಿ ಪ್ರಶಸ್ತಿ ವಿಜೇತ ತಾರೆ ನೆರೊ ತಂಡ, ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ತಮ್ಮ ವಿಶಿಷ್ಟ ನಾದದ ಝೇಂಕಾರದ ರುಚಿಯನ್ನು ಇಲ್ಲಿನ ಸಂಗೀತ ಪ್ರೇಮಿಗಳಿಗೆ ಉಣಬಡಿಸಲಿದ್ದಾರೆ. ಸ್ಥಳ: ಮ್ಯಾನ್ಫೊ ಕನ್ವೆನ್ಷನ್ ಸೆಂಟರ್, ಹೆಬ್ಬಾಳ. ಸಂಜೆ 7. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.