ADVERTISEMENT

ಇಂಪೋರ್ಟೆಡ್ ಕಮರಿಯಾದ ಬಳಕು

​ಪ್ರಜಾವಾಣಿ ವಾರ್ತೆ
Published 13 ಜೂನ್ 2012, 19:30 IST
Last Updated 13 ಜೂನ್ 2012, 19:30 IST
ಇಂಪೋರ್ಟೆಡ್ ಕಮರಿಯಾದ ಬಳಕು
ಇಂಪೋರ್ಟೆಡ್ ಕಮರಿಯಾದ ಬಳಕು   

ಶಾಂಘೈ ಚಿತ್ರದಲ್ಲಿರುವ `ಇಂಪೋರ್ಟೆಡ್ ಕಮ್ಮರಿಯಾ~  ಹಾಡಿಗೆ ಹೆಜ್ಜೆ ಹಾಕಿ, ಸೊಂಟ ಬಳುಕಿಸಿದ ಬಾಲಿವುಡ್ ಚೆಲುವೆ ಸ್ಕಾರ್ಲೆಟ್‌ಗೆ ಒಂದು ಅಸಾಮಾನ್ಯ ಪಾತ್ರ ನಿರ್ವಹಿಸುವ ಅಸೆಯಂತೆ.

ಬ್ರಿಟಿಷ್ ಮೂಲದ ರೂಪದರ್ಶಿ ಸ್ಕಾರ್ಲೆಟ್ ಮೆಲಿಶ್ ವಿಲ್ಸನ್ ತಮ್ಮ ಬಾಲಿವುಡ್ ಯಾನವನ್ನು ಐಟಂ ನೃತ್ಯದಿಂದ ಆರಂಭಿಸಿದ್ದಾರೆ. ಆದರೆ ಸ್ಕಾರ್ಲೆಟ್ ತಾವು ನಟನೆಯ ತರಬೇತಿ ಪಡೆದಿದ್ದು, ಒಂದು `ಪೀರಿಯೆಡ್~ ಚಿತ್ರದಲ್ಲಿ ನಟಿಸುವ ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.

ಹಲವಾರು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಈ ಬ್ರಿಟಿಷ್ ನಟಿ, ತಮ್ಮ ಜೀವನದುದ್ದಕ್ಕೂ ಹಾಡು, ನೃತ್ಯ ಹಾಗೂ ನಟಿಸಿರುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ಹಾಗಾಗಿ ನಟನೆ ನನಗೆ ಸುಲಭವಾಗಿದೆ. ಪರ್ಫಾಮಿಂಗ್ ಆರ್ಟ್ಸ್ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದೆ. ನಟನೆಯಲ್ಲಿ ಪದವಿ ಪಡೆದಿದ್ದೇನೆ ಎಂದೆಲ್ಲ ಹೇಳಿದ್ದಾರೆ.

ಈ ವಿದೇಶಿ ಬೆಡಗಿ ಮೂರು ವರ್ಷಗಳ ಹಿಂದೆ ಭಾರತಕ್ಕೂ ರೂಪದರ್ಶಿಯಾಗಿ ಭೇಟಿ ನೀಡಿದ್ದರಂತೆ. ಈ ಹಾಡಿಗೆ ಆಯ್ಕೆಯಾಗಲು ಹಲವಾರು ಸುತ್ತಿನ ಆಡಿಷನ್‌ಗಳಲ್ಲಿಯೂ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ.

`ಇಂಪೋರ್ಟೆಡ್ ಕಮ್ಮರಿಯಾ ಹಾಡಿನಲ್ಲಿ ನರ್ತಿಸುವುದಕ್ಕೆ ಮುಂಚೆ ಸಾಕಷ್ಟು ರಿಹರ್ಸಲ್ ಮಾಡಿದ್ದೇನೆ. ಭಾವಾಭಿನಯಕ್ಕಾಗಿ ದಿವಾಕರ್ ಬ್ಯಾನರ್ಜಿ ಜೊತೆಗೆ ಚರ್ಚಿಸಿದ್ದೇನೆ. ಮುಖಭಾವಗಳನ್ನು ವ್ಯಕ್ತ ಪಡಿಸಲೇಬೇಕಿರುವುದು ಭಾರತೀಯ ನೃತ್ಯ ಪ್ರಕಾರದಲ್ಲಿ ಅತ್ಯಗತ್ಯ ಎಂದು ಅರಿತುಕೊಂಡಿದ್ದೇನೆ. ಈ ಹಾಡಿನಲ್ಲಿರುವ ವಯ್ಯಾರ, ಬಿನ್ನಾಣ ಒಂದೊಂದು ಹೆಜ್ಜೆಯನ್ನೂ ಹಲವಾರು ಸಲ ಅಭ್ಯಾಸ ಮಾಡಿಯೇ ಶೂಟಿಂಗ್‌ಗೆ ಹೋಗಿದ್ದು. ನನ್ನ ತಯಾರಿ ಯಾವತ್ತಿಗೂ ಹೀಗೆಯೇ ಇರುತ್ತದೆ~ ಎಂದೆಲ್ಲ ಸ್ಕಾರ್ಲೆಟ್ ಹೇಳಿಕೊಂಡಿದ್ದಾರೆ. ಬಾಲಿವುಡ್‌ನ ಬಾಗಿಲು ಈ ವಿದೇಶಿ ಚೆಲುವೆಗೆ ತೆರೆದಿದೆಯೇ ಎಂಬುದನ್ನು ಸಮಯವೇ ಹೇಳಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.