ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಅಮೀರ್ ಖಾನ್ ಅರ್ಥಪೂರ್ಣ ನಗು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಅಮೀರ್‌ ಖಾನ್
ಅಮೀರ್‌ ಖಾನ್   

ಮಿ.ಪರ್ಫೆಕ್ಷನಿಸ್ಟ್‌ ಖ್ಯಾತಿಯ ಅಮಿರ್‌ ಏನು ಮಾಡಿದರೂ ವಿಶೇಷ ಇರುತ್ತದೆ. ಈ ಮಾತನ್ನು ಅವರ ಇನ್‌ಸ್ಟಾಗ್ರಾಂ ಖಾತೆ ಮತ್ತೊಮ್ಮೆ ಸಾಬೀತು ಮಾಡಿದೆ.

ಹುಟ್ಟಹಬ್ಬದ ದಿನವೇ ಇನ್‌ಸ್ಟಾಗ್ರಾಂ ಖಾತೆ ತೆರೆದು ಸಾಮಾಜಿಕ ಜಾಲತಾಣಗಳ ವ್ಯಾಪ್ತಿ ಹಿಗ್ಗಿಸಿಕೊಂಡಿದ್ದ ಅಮೀರ್‌. ಅದರಲ್ಲಿ ಹೊಸ ಚಿತ್ರವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಒಂಬತ್ತು ಚೌಕಟ್ಟುಗಳಿವೆ. ಒಟ್ಟುಗೂಡಿದಾಗ ಸ್ಪಷ್ಟ ರೂಪ ಕಾಣುತ್ತದೆ. ಸುತ್ತಲೂ ಮಕ್ಕಳು, ಮಧ್ಯೆ ಚಂದದ ನಗುವಿನೊಂದಿಗೆ ಅಮೀರ್‌ ಕೂತಿದ್ದಾರೆ.

‘ಈ ಮಕ್ಕಳು ಮಹಾರಾಷ್ಟ್ರದ ಝಾಖಂಗೊನ್ (Zakhangaon) ಗ್ರಾಮದವರು. ಯಾರ ಮುಖದಲ್ಲಾದರೂ ಇವರು ನಗು ತರಿಸಬಲ್ಲರು’ ಎಂದು ಬರೆದುಕೊಂಡಿದ್ದಾರೆ. ಅಂದ ಹಾಗೆ ಅಮೀರ್‌ ಅಲ್ಲಿಗೆ ಹೋಗಿದ್ದು ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಅರಿವು ಬೆಳೆಸುವ ಸಲುವಾಗಿ. ಪಾನಿ ಫೌಂಡೇಷನ್‌ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಅಮೀರ್ ಇನ್‌ಸ್ಟಾಗ್ರಾಂ ಖಾತೆಗೆ ಆರು ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.