ADVERTISEMENT

ಇಸ್ಕಾನ್ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST
ಇಸ್ಕಾನ್ ದೀಪೋತ್ಸವ
ಇಸ್ಕಾನ್ ದೀಪೋತ್ಸವ   

ಕಾರ್ತಿಕವೆಂದರೆ ದೀಪೋತ್ಸವಗಳ ಪವಿತ್ರ ಮಾಸ. ದೇವಸ್ಥಾನಗಳಲ್ಲಿ, ಪುಷ್ಕರಣಿಗಳಲ್ಲಿ ದೀಪಗಳ ಸಾಲು. ಮೇಲೆ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ಭಕ್ತಿ, ಭಾವದಿಂದ ತೇಲಿ ಬಿಡುವ ದೀಪಗಳಿಂದ ಕಲ್ಯಾಣಿಗಳಲ್ಲಿ ನಕ್ಷತ್ರ ಗೊಂಚಲು.

ಇಸ್ಕಾನ್ ರಾಧಾಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಇಂದಿನಿಂದ ನವೆಂಬರ್ 9ರವರೆಗೆ ದೀಪೋತ್ಸವ. ಈ ದಿನಗಳಲ್ಲಿ ಇಸ್ಕಾನ್‌ಗೆ ಭೇಟಿ ನೀಡುವವರು ಭಕ್ತಿ ಸಂಗೀತದ ಹಿನ್ನೆಲೆಯಲ್ಲಿ ರಾಧಾ- ಕೃಷ್ಣರಿಗೆ ತುಪ್ಪದ ದೀಪ ಅರ್ಪಿಸಬಹುದು.

ಅ. 25, 26 ಮತ್ತು 27ರಂದು ದೀಪಾವಳಿಯ ಸಂದರ್ಭದಲ್ಲಿ ವಿಶೇಷ ದೀಪೋತ್ಸವ, ಬಾಣ-ಬಿರುಸು ಪ್ರದರ್ಶನವೂ ಇರುತ್ತದೆ. ಮಂಗಳವಾರ ಸಂಜೆ 7 ಗಂಟೆಗೆ ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, 7.45ಕ್ಕೆ ಗಣ್ಯರಿಂದ ಉತ್ಸವ ಉದ್ಘಾಟನೆ, 8 ಗಂಟೆಗೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ನಿತ್ಯವೂ ಇದೇ ರೀತಿ ಕಾರ್ಯಕ್ರಮಗಳು ಜರುಗುತ್ತವೆ.

ಸ್ಥಳ: ಇಸ್ಕಾನ್, ಪಶ್ಚಿಮ ಕಾರ್ಡ್ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.