ADVERTISEMENT

ಉಗುರಿಗೆ ಬಣ್ಣದ ಚಿತ್ತಾರ

ಸುಮಾ ಬಿ.
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಉಗುರಿಗೆ ಬಣ್ಣದ ಚಿತ್ತಾರ
ಉಗುರಿಗೆ ಬಣ್ಣದ ಚಿತ್ತಾರ   

ಒಂದು ಬಾಟಲ್ ಉಗುರು ಬಣ್ಣ (ನೇಲ್ ಪಾಲಿಶ್‌) ಕೊಂಡು ತಂದರೆ, ಅದು ಗಟ್ಟಿ ಆಗುವವರೆಗೂ ತಿಂಗಳಾನುಗಟ್ಟಲೆ ಮನೆಯ ಹೆಣ್ಣುಮಕ್ಕಳೆಲ್ಲ ಹಚ್ಚಿ ಸಂಭ್ರಮಿಸುವ ಕಾಲವೊಂದಿತ್ತು. ಹೆಣ್ಣಿನ ‘ಟ್ರೆಂಡಿ ಫ್ಯಾಷನ್‌’ ಹುಡುಕಾಟದಲ್ಲಿ ಉಗುರು ಬಣ್ಣವೂ ಈಗ ಚೆಲುವಿನ ಚಿತ್ತಾರವಾಗಿ ರೂಪಾಂತರಗೊಂಡಿದೆ.

ಒಂದೇ ಬಣ್ಣ ಬಳಸುವ ಜಾಗದಲ್ಲಿ ಹತ್ತಾರು ಬಣ್ಣಗಳು ಆವರಿಸಿಕೊಂಡಿವೆ. 3ರಿಂದ 4 ದಿನದೊಳಗೆ ಅಲ್ಲಲ್ಲಿ ಬಣ್ಣ ಉದುರಿ, ಬೆರಳುಗಳ ಅಂದಗೆಡಿಸುತ್ತಿದ್ದ ಮಾಮೂಲಿ ಉಗುರುಬಣ್ಣ ಈಗ ಮೂಲೆಗುಂಪಾಗುತ್ತಿವೆ. ಆ ಜಾಗದಲ್ಲಿ ಅಕ್ರಿಲಿಕ್, ಜೆಲ್‌ ನೇಲ್‌ ಪಾಲಿಶ್‌ಗಳು ತಳವೂರುತ್ತಿವೆ.

45ರಿಂದ 60 ದಿನಗಳವರೆಗೂ ಈ ನೇಲ್‌ಪಾಲಿಶ್‌ಗಳು ಅಂದಗೆಡುವುದಿಲ್ಲ. ಉಗುರು ಮೊಟಕಾಗಿದ್ದು, ಉದ್ದದ ಉಗುರಿಗೆ ವಿನ್ಯಾಸ ಮಾಡಿಸಿಕೊಳ್ಳಬೇಕು ಎಂದು ಬಯಸುವವರಿಗಾಗಿ ಕೃತಕ ಉಗುರುಗಳು ಈಗ ಸಿಗುತ್ತಿವೆ. ಉಗುರಿಗೆ ಮುತ್ತು, ಹರಳುಗಳನ್ನು ಪೋಣಿಸಿಕೊಳ್ಳುವುದೂ ಟ್ರೆಂಡ್‌. ಉಗುರಿನ ಒಂದು ತುದಿಯಲ್ಲಿ ಸಣ್ಣ ರಂಧ್ರ ಕೊರೆದು ಅವುಗಳನ್ನು ಪೋಣಿಸಲಾಗುತ್ತದೆ.

ADVERTISEMENT

ಪರ್ಮನೆಂಟ್‌ ಜೆಲ್‌ ಆರ್ಟ್‌, ಅಕ್ರಿಲಿಕ್‌ ಎಕ್ಸ್‌ಟೆನ್ಷನ್‌, ಕ್ರಾಫ್ಟ್‌, ವೆಲ್‌ವೆಟ್‌ ಆರ್ಟ್‌, ಮಿರರ್‌ ಆರ್ಟ್‌ ವರ್ಕ್‌ ಈಗ ಹೆಚ್ಚು ಜನಪ್ರಿಯ. ‘ತ್ರಿಡಿ’ ನೇಲ್‌ ಆರ್ಟ್‌ ಕೂಡ ಸಾಕಷ್ಟು ಲಲನೆಯರನ್ನು ಆಕರ್ಷಿಸಿದೆ. ಬಣ್ಣಗಳಲ್ಲೇ ‘ತ್ರಿಡಿ’ ಎಫೆಕ್ಟ್‌ ಮೂಡಿಸುವುದು ಇದರ ವಿಶೇಷ.

‘ಮೆಹೆಂದಿ ವಿನ್ಯಾಸಕ್ಕೆ, ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಮಾತ್ರ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದ ಲಲನೆಯರು, ಉಗುರಿನ ಅಂದ, ಕಾಳಜಿಗೂ ಪಾರ್ಲರ್‌ನ ನಂಟು ಇಟ್ಟುಕೊಂಡಿದ್ದಾರೆ. ಉದ್ದನೆಯ ಉಗುರು ಬೆಳೆಸಿಕೊಂಡು ನೇಲ್‌ ಆರ್ಟ್‌ ಮಾಡಿಸಿಕೊಳ್ಳಬೇಕು ಎಂದು ಸಾಕಷ್ಟು ಮಹಿಳೆಯರು ಇಷ್ಟಪಡುತ್ತಾರೆ. ಆಕಸ್ಮಿಕವಾಗಿ ಒಂದು ಉಗುರು ಕಟ್‌ ಆದರೂ ಚಿಂತೆ ಪಡಬೇಕಿಲ್ಲ. ಕೃತಕ ಉಗುರು ಬಳಸಿ ವಿನ್ಯಾಸಗೊಳಿಸಬಹುದು’ ಎನ್ನುತ್ತಾರೆ ಬ್ಯೂಟಿಷಿಯನ್ ಪಲ್ಲವಿ.

ಕಂಪ್ಯೂಟರ್‌ ಮೂಲಕ ನಮಗೆ ಬೇಕಾದ ವಿನ್ಯಾಸವನ್ನು ಪಡೆಯಬಹುದು. ನಾವು ತೊಟ್ಟಿರುವ ಬಟ್ಟೆಯನ್ನು ಕಂಪ್ಯೂಟರ್‌ನಲ್ಲಿರುವ ಕ್ಯಾಮೆರಾ ಕ್ಯಾಪ್ಚರ್‌ ಮಾಡಿಕೊಂಡು, ಅದಕ್ಕನುಸಾರವಾಗಿ ಕೃತಕ ಉಗುರಿನ ಮೇಲೆ ವಿನ್ಯಾಸ ಮೂಡಿಸಿ ಕ್ಷಣಾರ್ಧದಲ್ಲಿ ನಮ್ಮ ಮುಂದಿಡುತ್ತದೆ. ಧಾವಂತದಲ್ಲಿ ಇರುವ ಮಹಿಳೆಯರಿಗೆ ಇದು ವರದಾನವಾಗಿದೆ.

ಮುಖದ ಸೌಂದರ್ಯ ಕಾಪಾಡಲು ಇರುವಂತೆ ಉಗುರಿನ ಅಂದಕ್ಕೂ ಮೆನಿಕ್ಯೂರ್‌, ಪೆಡಿಕ್ಯೂರ್‌, ಆರೋಮ, ಚಾಕಲೇಟ್‌ ಮೆನಿಕ್ಯೂರ್‌, ಡಿಟಾನ್‌ ಬಳಸಲಾಗುತ್ತದೆ. ಹೀಗೆ ಮಾಡುವುದರಿಂದ ಉಗುರುಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಪಲ್ಲವಿ.

ಉಗುರಿನ ಆರೋಗ್ಯಕ್ಕೆ ಅವರು ಕೊಡುವ ಟಿಪ್ಸ್‌ ಇಲ್ಲಿವೆ:
* ವಾರಕ್ಕೆ ಒಂದು ದಿನ ಉಗುರಿಗೆ ಬಣ್ಣ ಹಚ್ಚದೆ ಹಾಗೇ ಬಿಡುವುದು
* ಸ್ನಾನಕ್ಕೂ ಮೊದಲು ಆಗಾಗ ನಿಂಬೆಹಣ್ಣಿನಿಂದ ಕೈ ಉಗುರು, ಕಾಲಿನ ಉಗುರನ್ನು ಸ್ವಚ್ಛಗೊಳಿಸುವುದು
* ಸ್ನಾನದ ನಂತರ ಉಗುರಿನ ರಕ್ಷಣೆಗೆಂದೇ ಇರುವ ಕ್ರೀಮ್‌ಗಳನ್ನು ಹಚ್ಚುವುದು
* ತಿಂಗಳಿಗೆ ಒಂದು ಬಾರಿಯಾದರೂ ಪೆಡಿಕ್ಯೂರ್‌ ಮಾಡಿಸಿಕೊಳ್ಳುವುದು v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.