ADVERTISEMENT

ಉತ್ತರ ಭೂಪ ಬೀchi

​ಪ್ರಜಾವಾಣಿ ವಾರ್ತೆ
Published 15 ಮೇ 2012, 19:30 IST
Last Updated 15 ಮೇ 2012, 19:30 IST

ಸವ್ಯಸಾಚಿ ಬೀchi ಜನ್ಮ ಶತಮಾನೋತ್ಸವದ ಅಂಗವಾಗಿ 19ರಂದು (ಶನಿವಾರ) ಉತ್ತರ ಭೂಪ ಬೀchi ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ಬ್ಚೀಜಿ (ರಾಯಸಂ ಭೀಮಸೇನರಾವ್) ಕನ್ನಡ ನಾಡು ಕಂಡ ಅಪರೂಪದ ಹಾಸ್ಯ ಸಾಹಿತಿ. ತಮ್ಮ ಹಾಸ್ಯ ಸಾಹಿತ್ಯ ನಗೆ ಚಟಾಕಿಯ ಮೂಲಕ ಇಂದಿಗೂ ನಮ್ಮ ನಡುವೆ ಎಲ್ಲೋ ಇರುವಂತಿರುವ ಬೀchi ಕನ್ನಡ ಹಾಸ್ಯ ಸಾಹಿತ್ಯಕ್ಕೊಂದು ಘನತೆ ತಂದು ಕೊಟ್ಟವರು.

ಹಾಸ್ಯದೊಂದಿಗೆ ಸಮಾಜಕ್ಕೊಂದು ಸಂದೇಶಕೊಡುವ ಕಾಳಜಿಯೂ ಅವರಲ್ಲಿತ್ತು. ಅವರ ಸೃಷ್ಟಿಯ `ತಿಂಮ~ ಇಂದಿಗೂ ಓದುಗರನ್ನು ನಗಿಸುತ್ತಿದ್ದಾನೆ.

`ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ~ ಪ್ರಶ್ನೋತ್ತರ ಸಂಗ್ರಹ `ಉತ್ತರ ಭೂಪ ಬೀchi~ ಹನುಮಂತನಗರದ ಕೆ. ಎಚ್. ಕಲಾಸೌಧದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ.
 
ನಾಟಕಕ್ಕೆ ಎನ್. ಸಿ. ಮಹೇಶ್ ಗೀತಸಾಹಿತ್ಯ ಒದಗಿಸಿದ್ದು ರಂಗವಿನ್ಯಾಸ ಹಾಗೂ ನಿರ್ದೇಶನ ಯುವ ನಿರ್ದೇಶಕಿ ಅರ್ಚನಾ ಶ್ಯಾಂ ಅವರದ್ದು. ಮುಂಗಡ ಬುಕ್ಕಿಂಗ್‌ಗಾಗಿ 98809 14509. ಟಿಕೆಟ್ ದರ: 50.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.