ADVERTISEMENT

ಎಂಎಸ್‌ಆರ್‌ನ ಸವ್ಯಸಾಚಿಗಳು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2011, 19:30 IST
Last Updated 13 ಏಪ್ರಿಲ್ 2011, 19:30 IST
ಎಂಎಸ್‌ಆರ್‌ನ ಸವ್ಯಸಾಚಿಗಳು
ಎಂಎಸ್‌ಆರ್‌ನ ಸವ್ಯಸಾಚಿಗಳು   

ಇತ್ತೀಚೆಗೆ ನಡೆದ ಹಲವು ಅಂತರ್‌ಕಾಲೇಜು ಸ್ಪರ್ಧೆಗಳಲ್ಲಿ ಎಂ. ಎಸ್. ರಾಮಯ್ಯ ಹೋಟೆಲ್ ಮ್ಯಾನೇಜ್‌ಮೆಂಟ್ (ಎಂಎಸ್‌ಆರ್‌ಸಿಎಚ್‌ಎಂ) ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಪ್ರತಿಭೆ ಪ್ರದರ್ಶಿಸಿದ್ದಾರೆ.

ಕೆಎಲ್‌ಇ ಕಾಲೇಜು ಏರ್ಪಡಿಸಿದ್ದ ಅಂತರ್‌ಕಾಲೇಜು ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ‘ಎಂಎಸ್‌ಆರ್‌ಸಿಎಚ್‌ಎಂ’ ವಿದ್ಯಾರ್ಥಿಗಳು ತಮ್ಮ ಕೈಚಳಕ ಮೆರೆದಿದ್ದಾರೆ. ಫ್ರಂಟ್ ಆಫೀಸ್ ಇವೆಂಟ್‌ನಲ್ಲಿ ಆಕಾಶ್ ಅಗ್ನಿಹೋತ್ರಿ ಮೊದಲ ಸ್ಥಾನ ಗಳಿಸಿದ್ದಾರೆ. ವ್ಯರ್ಥವಾಗಿ ಉಳಿದ ವಸ್ತುಗಳಿಂದ ಹಣ ಗಳಿಸುವ ಸ್ಪರ್ಧೆಯಲ್ಲಿ ತರಾನಾ ಮೊರ್ಯಾನಿ, ಆಹಾರ ಸರ್ವ್ ಮಾಡುವ ಸ್ಪರ್ಧೆಯಲ್ಲಿ ಉದಯ್‌ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. ತರಕಾರಿ ಕೆತ್ತನೆ ಮತ್ತು ಆಹಾರ ಪ್ರದರ್ಶನದಲ್ಲಿ ಕರ್ಮಾ ಥೆಂಪಾ ಮತ್ತು ಸುರೇಶ್ 2ನೇ ಸ್ಥಾನ ಗಳಿಸಿದ್ದಾರೆ.

ಇದಕ್ಕೂ ಮುನ್ನ ಆಕ್ಸ್‌ಫರ್ಡ್ ಕಾಲೇಜ್ ನಡೆಸಿದ ಸ್ಪರ್ಧೆಯಲ್ಲಿ ಆಕಾಶ್ ಅಗ್ನಿಹೋತ್ರಿ  ಫ್ರಂಟ್ ಆಫೀಸ್ ಇವೆಂಟ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು. ಫ್ಲವರ್ ಆರ್ಟ್‌ನಲ್ಲಿ ನಿತಿಶ್ ಅಬ್ರಾಹಂ ಮೊದಲ ಸ್ಥಾನ, ಡ್ಯಾನಿಯಲ್ ಸೆಲ್ವರಾಜ್ ಮತ್ತು ಪ್ರವೀಣ್ ಬಾಸ್ಕೆಟ್ ಕುಕರಿಯಲ್ಲಿ 2ನೇ ಸ್ಥಾನ, ಆಹಾರ ಸೇವೆ ಮತ್ತು ನ್ಯಾಪ್‌ಕಿನ್ ಫೋಲ್ಡ್‌ನಲ್ಲಿ ಉದಯ್ ಮತ್ತು ಜಿಬಿನ್ ಮೊದಲ ಸ್ಥಾನ ಗಳಿಸಿದ್ದರು.

ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ಮತ್ಸ್ಯಮೇಳದಲ್ಲಿ ತನ್ಮಯ್ ಮತ್ತು ಪವನ್ ಕ್ರಮವಾಗಿ 2 ಮತ್ತು 3ನೇ ಸ್ಥಾನ ಗಳಿಸಿದ್ದರು. ಸೇಂಟ್ ಜೋಸೆಫ್ಸ್ ಡಿಗ್ರಿ ಕಾಲೇಜಿನ ಇವೆಂಟ್‌ನಲ್ಲಿ ವಿಕ್ರಮ್ ಚಂದೇಲ್ ಛಾಯಾಗ್ರಹಣದಲ್ಲಿ 3ನೇ ಬಹುಮಾನ ಪಡೆದರು.                                                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.