ADVERTISEMENT

ಎಂ ಜಿ ರಸ್ತೆಯಲ್ಲೂ ಬಜಾರ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2011, 19:30 IST
Last Updated 1 ಏಪ್ರಿಲ್ 2011, 19:30 IST
ಎಂ ಜಿ ರಸ್ತೆಯಲ್ಲೂ ಬಜಾರ್
ಎಂ ಜಿ ರಸ್ತೆಯಲ್ಲೂ ಬಜಾರ್   

ಬೆಂಗಳೂರು ಟ್ರೇಡ್ಸ್ ಅಸೋಸಿಯೇಶನ್ ಶನಿವಾರದಿಂದ ಏ. 11ರ ವರೆಗೆ ಮಹಾತ್ಮ ಗಾಂಧಿ ರಸ್ತೆ ‘ಬಜಾರ್ ಉತ್ಸವ’ ನಡೆಸುತ್ತಿದೆ.
ಯುಗಾದಿ ಹಬ್ಬದ ಪ್ರಯುಕ್ತ ಎಂ.ಜಿ ರಸ್ತೆಯ ಮಳಿಗೆಗಳು ಶೇ 5 ರಿಂದ ಶೇ 50ರ ವರೆಗೂ ವಿಶೇಷ ರಿಯಾಯ್ತಿ ಮತ್ತು ಉಡುಗೊರೆಗಳನ್ನು ನೀಡಲಿವೆ. ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದ ವರೆಗಿನ ರಸ್ತೆಯಲ್ಲಿ ಅಲ್ಲಲ್ಲಿ ಮೂರು ಕಮಾನುಗಳು ಸ್ವಾಗತಿಸುತ್ತವೆ. ಮೊದಲ ಬಾರಿ ಇಂಥದೊಂದು ಸಂತೆ ನೆರೆಯಲಿದೆ ಎಂದು ಬೆಂಗಳೂರು ಟ್ರೇಡ್ಸ್ ಅಸೋಸಿಯೇಶನ್ ಅಧ್ಯಕ್ಷ ಭೂಪಾಲಂ ಶ್ರೀನಾಥ್ ವಿವರಿಸುತ್ತಾರೆ.

 ಅಸೋಸಿಯೇಶನ್‌ನ ಕಾರ್ಯದರ್ಶಿ ಶ್ರೀಶ್ ಆರ್ ಬಾಬು ಅವರ ಪ್ರಕಾರ, ಇದು ಥೇಟ್ ಮಾಲ್ ಸಂಸ್ಕೃತಿಯಿಂದ ಪ್ರೇರಿತವಾಗಿರುತ್ತದೆ. ಅತ್ಯುತ್ತಮ ಬ್ರಾಂಡ್‌ಗಳಿರುವ ಮಳಿಗೆಗಳೆಲ್ಲ ಈ ಮೆಗಾಸೇಲ್‌ನಲ್ಲಿ ಭಾಗವಹಿಸುತ್ತಿರುವುದು ವಿಶೇಷ, ಆದರೆ ಅದೇ ಬ್ರಾಂಡ್‌ನ ರಿಯಾಯ್ತಿ ನಗರದ ಬೇರೆ ಕಡೆಯಿರುವ ಮಳಿಗೆಗಳಿಗೆ ಅನ್ವಯಿಸುವುದಿಲ್ಲ.

ಉಳಿದಂತೆ ಆಹಾರ ವೈವಿಧ್ಯ, ನಿಧಾನ ನಡಿಗೆಯಂತಹ ಎಂಜಿ ರಸ್ತೆಯ ಆಕರ್ಷಣೆ ಇದ್ದೇ ಇರುತ್ತದೆ. ಪಾರ್ಕಿಂಗ್‌ಗೆ ವಿಶೇಷ ಸೌಲಭ್ಯವೇನಿಲ್ಲ. ಮೆಟ್ರೊ ಕಾಮಗಾರಿ ನಡೆದೇ ಇದ್ದರೂ ಕುತೂಹಲದ ನೋಟಗಳಿಗೆ ಸಜ್ಜಾಗೇ ಇದೆಯಲ್ಲ! ಸುಮ್ಮನೇ ನೋಡಿ ಹೋಗುವ ವಿಂಡೋ ಶಾಪಿಂಗ್ ಪ್ರಿಯರಿಗೂ ಸರಿಯೆ; ಶಾಪೋಹಾಲಿಕ್ ಕೊಳ್ಳುಬಾಕರಿಗೂ ಸರಿಯೆ...ಕಾಯುತ್ತಿದೆ ಎಂಜಿ ರಸ್ತೆ..ಅಭಿಸಾರಿಕೆಯಂತೆ. ಶನಿವಾರ ಬೆಳಿಗ್ಗೆ 11ಕ್ಕೆ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರಿಂದ ಉದ್ಘಾಟನೆ. ಸ್ಥಳ: ಎಂ ಜಿ ರಸ್ತೆ ವಿಜಯಲಕ್ಷ್ಮಿ ಸಿಲ್ಕ್ ಅಂಡ್ ಸ್ಯಾರೀಸ್ ಮುಂಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.