ADVERTISEMENT

ಎವಾನ್ ವಾಯ್ಸಸ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:30 IST
Last Updated 9 ಫೆಬ್ರುವರಿ 2011, 18:30 IST


ಮಹಿಳೆಯರ ಸೌಂದರ್ಯ, ಫ್ಯಾಷನ್ ಸಾಮಗ್ರಿಗಳ ಬ್ರಾಂಡ್ ತನ್ನ 125ನೇ ವಾರ್ಷಿಕೋತ್ಸವದ ಅಂಗವಾಗಿ ‘ಎವಾನ್ ವಾಯ್ಸಸ್’ ಎಂಬ ವಿಶ್ವ ಮಟ್ಟದ ಮೊದಲ ಆನ್‌ಲೈನ್ ಗಾಯನ ಪ್ರತಿಭಾನ್ವೇಷಣೆ (ಮಹಿಳೆಯರಿಗೆ ಮಾತ್ರ) ಮತ್ತು ಹಾಡು ಬರೆಯುವ ಸ್ಪರ್ಧೆ (ಪುರುಷ ಮತ್ತು ಮಹಿಳೆ) ಆರಂಭಿಸುತ್ತಿದೆ.

ಆರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತರಾದ ಫೇರಗಿ, ಡೆವಿಡ್ ಪೀಕ್, ಖ್ಯಾತ ಗೀತ ರಚನೆಕಾರ್ತಿ ಡಿಯಾನೆ ವಾರೆನ್, ಗ್ರಾಮಿ ಪ್ರಶಸ್ತಿಗೆ ನಾಮಕರಣಗೊಂಡ ವಾದ್ಯ ವಾದಕಿ ಶೈಲಾ ಮತ್ತು ಗಾಯಕಿ ನತಾಶಾ ಬೆಡಿಂಗ್ ಫೀಲ್ಡ್, ಫಿಲಿಫೀನ್ಸ್ ಗಾಯಕಿ ಮತ್ತು ನಟಿ ಲೆಯಾ ಸಲೊಂಗ, ಆಸ್ಟ್ರೇಲಿಯಾದ ಕಲಾವಿದೆ ಡೆಲ್ಟಾ ಗುಡ್‌ರೆಮ್, ಬ್ರೆಜಿಲ್‌ನ ಜನಪ್ರಿಯ ಪಾಪ್ ಗಾಯಕ ಇವೆಟ್ ಸಂಗಾಲೊ, ಕೊಲಂಬಿಯದ ಗಾನಪ್ರತಿಭೆ ಮೈಯ ಅವರು ಸ್ಪರ್ಧೆಯ ತೀರ್ಪುಗಾರರಲ್ಲಿ ಸೇರಿದ್ದಾರೆ.  ಇಬ್ಬರು ಪ್ರತಿಭಾವಂತ ಗಾಯಕರನ್ನು ಆಯ್ಕೆ ಮಾಡುವುದು ಈ ಪ್ರತಿಭಾನ್ವೇಷಣೆಯ ಗುರಿ. ವಿಜೇತರು ವೃತ್ತಿಪರ ಆಲ್ಬಮ್‌ನಲ್ಲಿ ಹಾಡುವ ಅವಕಾಶ ಪಡೆಯಲಿದ್ದಾರೆ.

ಗಾಯನ ವಿಭಾಗದ ಸ್ಪರ್ಧಿಗಳು AvonVoices.com  ವೆಬ್‌ಸೈಟ್‌ನಿಂದ ಒಂದು ಹಾಡು ಆಯ್ಕೆ ಮಾಡಿ ಅದನ್ನು ಹಾಡಿದ ವಿಡಿಯೊವನ್ನು ಫೇ. 13ರ ಒಳಗಾಗಿ ಅಪ್‌ಲೋಡ್ ಮಾಡಬೇಕು. ಮುಂದೆ ಇದರ ಮೇಲೆ ವೋಟಿಂಗ್ ನಡೆಯಲಿದೆ. ಹಾಡು ಬರೆಯುವ ಸ್ಪರ್ಧಿಗಳು ಜಗತ್ತಿನೊಂದಿಗೆ ವಿಶ್ವಾಸ ಮತ್ತು ಆಶಾವಾದ ಹಂಚಿಕೊಳುವ ಭಾವನೆಯ ಗೀತೆ ಬರೆದು ಅದರ ಡಿಜಿಟಲ್ ಫೈಲ್ ಮತ್ತು ಲಿರಿಕ್ ಶೀಟ್ ಅಪ್‌ಲೋಡ್ ಮಾಡಬೇಕು.
ಮಾಹಿತಿಗೆ: www.avonvoices.com                           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.