ADVERTISEMENT

ಒಂದಿಷ್ಟು ವಾರಾಂತ್ಯದ ವಿಶೇಷ...

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ರಿದ್ದಿ ಫೌಂಡೇಶನ್: ಆಟಾಗಲಾಟ, 5ನೇ ಬ್ಲಾಕ್, ಕೆ.ಎಚ್.ಬಿ. ಕಾಲೋನಿ, ಕೋರಮಂಗಲ. ಡಿ. 7ರ ಶನಿವಾರ ಬೆಂಗಾಲಿ ಬರಹಗಾರ, ಕೋಲ್ಕತ್ತದ ಬರುಣ್ ಚಂದ್ರ ಅವರಿಂದ ತಮ್ಮ ಇತ್ತೀಚಿನ ಕೃತಿ ‘ರಬೀಬರ್’ನ ಆಯ್ದ ಅಧ್ಯಾಯಗಳ ಓದು. ನಂತರ ಲೇಖಕರೊಂದಿಗೆ ಸಂವಾದ.

ಬರುಣ್ ಚಂದ್ರ ಅವರ ಕೃತಿಯನ್ನು ಆಧರಿಸಿದ ಸಿನಿಮಾಗಳಾದ ಸತ್ಯಜಿತ್ ರೇ ಅವರ ‘ಸೀಮಾಬದ್ಧ’ದಿಂದ ಹಿಡಿದು ಇತ್ತೀಚಿನ ಕೃತಿ ಆಧರಿತ ವಿಕ್ರಮಾದಿತ್ಯ ಮೋಟ್ವಾನೆ ಅವರ ‘ಲೂಟೇರಾ’ದವರೆಗಿನ ಕೃತಿ ರಚನೆಯ ಸಂದರ್ಭ, ಅನುಭವಗಳ ಬಗ್ಗೆ ಉತ್ಕಲ್ ಮೊಹಾಂತಿ, ಅವರೊಂದಿಗೆ ಬರುಣ್ ಚಂದ್ರ ಸಂವಾದವಿರುತ್ತದೆ. ಸಂಜೆ 6.30. ಮಾಹಿತಿಗೆ: 96325 10126.

ಭಾನುವಾರ (ಡಿ.8) ಕವಯಿತ್ರಿ ಶಿಖಾ ಮಾಳವಿಯ ಅವರ ಮೊದಲ ಕವನ ಸಂಕಲನ ‘ಜಿಯಾಗ್ರಫಿ ಆಫ್ ಟಂಗ್ಸ್’ ಬಿಡುಗಡೆ, ಓದು ಮತ್ತು ಸಂವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.