ಒಡಿಶಾ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸಂಸ್ಥೆಯು ಒಡಿಶಾದ ಕರಕುಶಲ ವಸ್ತು ಮತ್ತು ಕೈಮಗ್ಗಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಹಮ್ಮಿಕೊಂಡಿದೆ.
ಒಡಿಶಾ ಸೀರೆ, ಒಡಿಶಾ ಕರಕುಶಲ ವಸ್ತುಗಳು, ಪೇಂಟಿಂಗ್ಸ್, ಒಡಿಶಾ ಸಾಂಪ್ರದಾಯಿಕ ಆಭರಣಗಳು, ಕಂಚಿನ ಪ್ರತಿಮೆಗಳು, ಮರದ ಕಲಾಕೃತಿಗಳು, ಕೈಮಗ್ಗಗಳು, ಡ್ರೆಸ್ ಮೆಟೀರಿಯಲ್, ಕಾಶ್ಮೀರಿ ಶಾಲುಗಳು, ಶಾಂತಿನಿಕೇತನ ಬ್ಯಾಗ್, ಕೋಲ್ಕತ್ತಾ ಸೀರೆ, ಟೆರಕೋಟಾ ಅಲಂಕಾರಿಕ ವಸ್ತುಗಳು, ಮೀನಾಕಾರಿ ಹರಳುಗಳು, ಕಣ್ಸೆಳೆಯುವ ಚೆಂದದ ಕುಶನ್ ಕವರ್, ಮಧುಬಾನಿ ಪೇಂಟಿಂಗ್ಸ್ ಇನ್ನೂ ಅನೇಕ ಸಂಗ್ರಹಗಳು ಒಂದೆಡೆಯೇ ಲಭಿಸಲಿವೆ. ಕರಕುಶಲ ವಸ್ತುಗಳ ಮೇಲೆ ಶೇ.10ರಷ್ಟು ಮತ್ತು ಕೈಮಗ್ಗದ ಮೇಲೆ ಶೇ.20ರಷ್ಟು ರಿಯಾಯಿತಿ ಇದೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೋದ ಎಸ್.ಜಿ.ರವೀಂದ್ರ ಉದ್ಘಾಟಿಸಲಿದ್ದಾರೆ.
ಪ್ರದರ್ಶನ ನಡೆಯುವ ಸ್ಥಳ: ಪ್ರೇಮಚಂದ್ರ ಕಲ್ಯಾಣ ಮಹಲ್, ಟಿ.ಮರಿಯಪ್ಪ ರಸ್ತೆ, ಅಶೋಕ್ ಪಿಲ್ಲರ್ ಹತ್ತಿರ, 2ನೇ ಬ್ಲಾಕ್, ಜಯನಗರ. ಬೆಳಿಗ್ಗೆ 10 ರಿಂದ ರಾತ್ರಿ 9ರವರೆಗೆ ಪ್ರದರ್ಶನ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.