ADVERTISEMENT

ಕಸ–ಕಲೆ

ಪಿಕ್ಚರ್‌ ಪ್ಯಾಲೆಸ್‌

ಪ್ರಜಾವಾಣಿ ಚಿತ್ರ
Published 28 ಜನವರಿ 2016, 19:45 IST
Last Updated 28 ಜನವರಿ 2016, 19:45 IST
ಕಸ–ಕಲೆ
ಕಸ–ಕಲೆ   

ಗಾರ್ಡನ್‌ ಸಿಟಿ ಎಂಬ ಬಿರುದನ್ನು ಬದಲಾಯಿಸಿ ಗಾರ್ಬೇಜ್‌ ಸಿಟಿ ಎಂಬ ಕುಖ್ಯಾತಿಯನ್ನು ಬೆಂಗಳೂರಿಗೆ ತಂದುಕೊಟ್ಟದ್ದು ಇಲ್ಲಿನ ವಿಲೇವಾರಿಯಾಗದ ಕಸಗಳು. ನಗರದ ಆರೋಗ್ಯ ಪರಿಸ್ಥಿತಿಯ ಮೇಲೆ ಕರಾಳ ಪರಿಣಾಮ ಉಂಟುಮಾಡುವ ಕಸಗಳನ್ನು ಸೃಜನಶೀಲತೆಯ ಒರೆಗೆ ಹಚ್ಚಿದರೆ ಹೇಗಿರುತ್ತದೆ?

ಅದೂ ಮಕ್ಕಳ ಮುಗ್ಧಲೋಕದಲ್ಲಿ ಕಲೆಯಾಗಿ ಅರಳಲು ಸಾಧ್ಯವಿದ್ದರೆ ಎಷ್ಟು ಚೆನ್ನ? ಇಂಥದ್ದೊಂದು ಸುಂದರ ಸಾಧ್ಯತೆ ವಾಸ್ತವಗೊಳಿಸಿದ್ದು ಕುರುಬರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು. ನಗರದ ಪ್ರೆಸ್‌ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಟಾಣಿಗಳು ತಾವು ಕಸದಿಂದ ತಯಾರಿಸಿದ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.