ADVERTISEMENT

ಕಾಫಿಅಂಡ್ ಯು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಒಂದಲ್ಲ, ಎರಡಲ್ಲ ನಲ್ವತ್ತಕ್ಕೂ ಅಧಿಕ ಕಾಫಿ ವೈವಿಧ್ಯಗಳು, 12 ಬಗೆಯ ಚಹಾಗಳು. ಅದೂ ಒಂದೇ ಸೂರಿನಡಿಯಲ್ಲಿ. ನಗರದಲ್ಲಿ ಈಚೆಗೆ ಆರಂಭವಾದ `ಕಾಫಿ ಅಂಡ್ ಯು~ ಕೇಂದ್ರದಲ್ಲಿ  ಈ ಎಲ್ಲ ವೈವಿಧ್ಯ ಸವಿಯಬಹುದು.

ಕಪುಚಿನೊ, ಕೆಫೆ ಮೋಚಾ, ಐರಿಷ್ ಕಾಫಿ, ಡಾರ್ಕ್ ಡಿಸೈರ್, ಚಾಕೋ ಸೆಡಕ್ಷನ್ ಹೀಗೆ ಬಗೆಬಗೆಯ ಕಾಫಿ ವೈವಿಧ್ಯಗಳು ಕಾಫಿಪ್ರಿಯರ ಮನ ತಣಿಸಲಿವೆ. ಕಪುಚಿನೊ ಬೆಲೆ ಬರೀ 15 ರೂ.

ಕಾಫಿ ಕುಡಿಯುವುದು ಕೇವಲ ಫ್ಯಾಷನ್ ಅಷ್ಟೇ ಅಲ್ಲ, ಅದು ಬಹುತೇಕರ ಜೀವನದ ಅವಿಭಾಜ್ಯ ಅಂಗ. ಹೀಗಾಗಿಯೇ ಇದಕ್ಕೆ ಕಾಫಿ ಎಂಡ್ ಯು ಎಂಬ ಹೆಸರಿಟ್ಟಿದ್ದೇವೆ ಎನ್ನುತ್ತಾರೆ ಸಂಸ್ಥೆ ವಕ್ತಾರ ಮನ್‌ಜೀತ್ ಸಿಂಗ್.

ಇಲ್ಲಿ ಕಾಫಿಯಷ್ಟೇ ಅಲ್ಲ, ಹೊಸ ಹೊಸ ರುಚಿಯ ತಂಪು ಪಾನೀಯಗಳು, ಇತರ ಸ್ವಾದಿಷ್ಟ ತಿನಿಸುಗಳು ಲಭ್ಯ. ಅಲ್ಲದೆ ಗ್ರಾಹಕರಿಗೆ ವೈ-ಫೈ ಜೊತೆಗೆ ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಕಾಫಿ ಹೀರುತ್ತ ಏನನ್ನಾದರೂ ಓದಬಯಸಿದರೆ ಉತ್ತಮ ಪುಸ್ತಕಗಳ ಸಂಗ್ರಹದ ಗ್ರಂಥಾಲಯವೂ ಇದೆ.
ಸ್ಥಳ: ಕೋರಮಂಗಲದ ಜ್ಯೋತಿ ನಿವಾಸ್,  ಹೊಸೂರು ರಸ್ತೆ ಕ್ರೈಸ್ಟ್ ಕಾಲೇಜು ಸಮೀಪ ಮತ್ತು ಜೆ.ಪಿ.ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.