ADVERTISEMENT

ಕಾರ್ಯಾಗಾರ - ತರಬೇತಿ - ಶಿಬಿರ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ವಿಭಾ ಧ್ವನಿಯಲ್ಲಿ ರಘು, ಆಗಮ ರಾಕ್
ಬಡ ಮಕ್ಕಳ ಶಿಕ್ಷಣ, ಸರ್ವಾಂಗೀಣ ಪ್ರಗತಿಯಲ್ಲಿ ತೊಡಗಿಸಿಕೊಂಡ ಸ್ವಯಂಸೇವಾ ಸಂಸ್ಥೆ ವಿಭಾ, ತನ್ನ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಶನಿವಾರ `ವಿಭಾ ಧ್ವನಿ: ಬಾಲ್ಯದ ಸಂಭ್ರಮ~ ಹಮ್ಮಿಕೊಂಡಿದೆ.

ಇಲ್ಲಿ ಹೆಸರಾಂತ ಗಾಯಕ ರಘು ದೀಕ್ಷಿತ್, ಆಗಮ ಮತ್ತು ಲಾ ಪೊಂಗಲ್ ತಂಡಗಳಿಂದ ಸಮಕಾಲೀನ ರಾಕ್ ಸಂಗೀತ ಆಲಿಸಬಹುದು.

ಸ್ಥಳ: ಸೆಂಟ್ ಜಾನ್ಸ್ ಸಭಾಂಗಣ, ಕೋರಮಂಗಲ. ಸಂಜೆ 7. ಟಿಕೆಟ್‌ಗಳಿಗೆ: ಇಂದಿರಾನಗರ, ಆರ್‌ಟಿ ನಗರ, ಹಳೆ ಮದ್ರಾಸ್ ರಸ್ತೆ ಆರ್‌ಎಂಝಡ್ ಇನ್ಫಿನಿಟಿಯಲ್ಲಿನ `ಒಡಿಸ್ಸಿ~ ಶಾಪ್, ಇಂದಿರಾನಗರ 100 ಅಡಿ ರಸ್ತೆಯ `ಚಾಯ್‌ಪತ್ತಿ~.

ಕೌಂಟರ್ ಕಲ್ಚರ್‌ನಲ್ಲಿ ಆರೆಂಜ್ ಫೈರ್‌ವರ್ಕ್ಸ್
ಪರ್ಯಾಯ ಕಲೆಗಳನ್ನು ಪ್ರೋತ್ಸಾಹಿಸುತ್ತಿರುವ ಕೌಂಟರ್ ಕಲ್ಚರ್ ರೆಸ್ಟೊರೆಂಟ್‌ನಲ್ಲಿ `ಗಾಯಕ, ಗೀತ ರಚನೆಕಾರ~ ಸರಣಿಯಲ್ಲಿ ಶನಿವಾರದ ಅತಿಥಿ ಮೈಕೆಲ್ ಆಂಟನಿ ದಾಸ್.

ಇವರು ಮ್ಯಾಡ್ ಆರೆಂಜ್ ಫೈರ್‌ವರ್ಕ್ಸ್ ಬ್ಯಾಂಡ್‌ನ ಪ್ರಮುಖ ಕಲಾವಿದ, ರೆಕ್ಸ್ ರೊಜಾರಿಯೊ ಕ್ವಿಂಟೆಟ್ ತಂಡದ ಗಿಟಾರ್ ವಾದಕ ಮತ್ತು ಟಾಕ್‌ಡೆಮಿಯ ಗಿಟಾರ್ ಶಿಕ್ಷಕ. ಕಳೆದ 7 ವರ್ಷಗಳಿಂದ ಅನೇಕ ಇಂಗ್ಲಿಷ್ ಕವಿತೆಗಳನ್ನು ರಚಿಸಿದ್ದಾರೆ. ಸಂಗೀತ, ಕವನದ ಮೇಲೆ ಇಲ್ಲಿ ಬೆಳಕು ಚೆಲ್ಲಲಿದ್ದಾರೆ.

ಸ್ಥಳ: 2ಡಿ2, 4ನೇ ಕ್ರಾಸ್, ದ್ಯಾವಸಂದ್ರ ಕೈಗಾರಿಕಾ ಪ್ರದೇಶ, ಝೈಲೆಂ ಕಟ್ಟಡದ ಸಮೀಪ, ವೈಟ್‌ಫೀಲ್ಡ್ ರಸ್ತೆ. ರಾತ್ರಿ 8. ಪ್ರವೇಶ ಉಚಿತ. ಮಾಹಿತಿಗೆ: 4140 0793.

ಮ್ಯಾಜಿಕ್ ಮೂಲಕ ವಿದ್ಯೆ
ಇನ್‌ಸ್ಟಿಟ್ಯೂಟ್ ಆಫ್ ಮ್ಯಾಜಿಕ್ ಅಂಡ್ ಅಲೈಡ್ ಆರ್ಟ್ಸ್ (ಐಒಮಾ) 8 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಬ್ರೇನಿಯಮ್ ಸಹಯೋಗದಲ್ಲಿ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಮ್ಯಾಜಿಕ್ ಕಲಿಕಾ ಕಾರ್ಯಾಗಾರ ನಡೆಸಲಿದೆ.

ಜಾದೂ ಮಾಧ್ಯಮದ ಮೂಲಕ ಮಕ್ಕಳಲ್ಲಿ ಆಲೋಚನಾ ಶಕ್ತಿ ಮತ್ತು ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಬೆಳೆಸುವುದು, ಗಣಿತ, ವಿಜ್ಞಾನ ಮತ್ತು ಸಂವಹನ ಜ್ಞಾನ ಹೆಚ್ಚಿಸವುದು ಇದರ ಉದ್ದೇಶ.
 
ಇಲ್ಲಿ ಮ್ಯಾಜಿಕ್, ಕಾಗದದ ಕಲೆ, ಜೇಡಿ ಮಣ್ಣಿನಲ್ಲಿ ಮಾದರಿಗಳ ತಯಾರಿಕೆ, ಕಥೆ ಹೇಳುವುದು ಮುಂತಾದ ಚಟುವಟಿಕೆಗಳನ್ನು ಜಾದೂ ತಜ್ಞ ಪ್ರೊ. ರಾಜ್, ವಿ.ಎಸ್.ಎಸ್ ಶಾಸ್ತ್ರಿ, ಗೌತಮ್, ಸುನೀತಾ ಅವರು ಕಲಿಸಿ ಕೊಡುತ್ತಾರೆ.
ಸ್ಥಳ: 52, ಬ್ರೇನಿಯಮ್, 5ನೇ ಕ್ರಾಸ್, ಪಿಎಫ್ ಲೇಔಟ್, ವಿಜಯನಗರ. ಪ್ರವೇಶ ಶುಲ್ಕ ಇಲ್ಲ. ಮೊದಲು ಬಂದವರಿಗೆ ಆದ್ಯತೆ. ಮಾಹಿತಿಗೆ: 99000 11520.

ಕ್ರೈಸ್ಟ್ ಇಂಜೀಯಾಂ
ಕ್ರೈಸ್ಟ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶನಿವಾರ `ಇಂಜೀಯಾಂ~ ಎಂಬ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ ಹಮ್ಮಿಕೊಂಡಿದೆ.

ಇಲ್ಲಿ ಮಾರ್ಕೆಟಿಂಗ್, ರಿಟೈಲ್, ಫೈನಾನ್ಸ್, ಬೆಸ್ಟ್ ಸಿಇಒ, ಆಪರೇಷನ್, ಮಾನವ ಸಂಪನ್ಮೂಲ, ಟೀಮ್‌ಬಿಲ್ಡಿಂಗ್, ಬಿಸಿನೆಸ್ ಪ್ಲಾನ್, ಬೆಸ್ಟ್ ಮ್ಯಾನೇಜರ್, ಕ್ವಿಜ್, ಕ್ರಾಸ್ ಫಂಕ್ಷನಲ್, ಸಿಎಸ್‌ಆರ್ ಮತ್ತಿತರ ಚಟುವಟಿಕೆ, ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ನೃತ್ಯ ಮತ್ತು ಸಂಗೀತ ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುತ್ತವೆ.
ಸ್ಥಳ: ಕೆಂಗೇರಿ ಉಪನಗರ.

ಅವಿಜ್ಞಾ ಕಿಡ್‌ಸ್ಟಾರ್
ಅವಿಜ್ಞಾ ಪ್ರೊಡಕ್ಷನ್ಸ್ ಮತ್ತು ಆಸ್ಪ್‌ವುಡ್ ಫೈರ್ ಜೊತೆಗೂಡಿ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಶನಿವಾರ ಮತ್ತುಭಾನುವಾರ `ಸೂಪರ್ ಸ್ಟಾರ್ ಕಿಡ್~ ಸ್ಪರ್ಧೆ ನಡೆಸಲಿವೆ.
ಆಸಕ್ತ ಮಕ್ಕಳು ಸಂಗೀತ, ನೃತ್ಯ, ಕಿರು ನಾಟಕ, ಫ್ಯಾಷನ್ ಹೀಗೆ ತಮ್ಮ ಇಷ್ಟದ ವಿಭಾಗದಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲಬಹುದು. ಪ್ರವೇಶ ಶುಲ್ಕ ಇಲ್ಲ ಎಂದು ಅವಿಜ್ಞಾ ನಿರ್ದೇಶಕ ಕಾರ್ತಿಕ್ ತಿಳಿಸಿದ್ದಾರೆ.

ಸ್ಥಳ: ಗೋಪಾಲನ್ ಮಾಲ್, ರಾಜರಾಜೇಶ್ವರಿ ನಗರ. ಮಾಹಿತಿಗೆ: 98866 33330, www.superstarkid2011.com

ಕರೋಕೆ ಜೋಡಿ
ಸಿಂಚನ ಸಾಂಸ್ಕೃತಿಕ ವೇದಿಕೆ ಭಾನುವಾರ ಕರೋಕೆಯಲ್ಲಿ ಕನ್ನಡ ಚಿತ್ರಗೀತೆ (ಜೋಡಿ) ಹಾಡುವ ಸ್ಪರ್ಧೆ ಆಯೋಜಿಸಿದೆ. ಪುಟಾಣಿಗಳು, ಕಿರಿಯರು ಮತ್ತು ಹಿರಿಯರು ಎಂಬ ಮೂರು ವಿಭಾಗಗಳಿವೆ.
ಶುಲ್ಕ ಮತ್ತಿತರ ವಿವರಕ್ಕೆ: ಎಚ್.ಕೆ. ನಟರಾಜ್ 91417 08656, 91416 02518.

ನಾಳೆ ಗರುಡಾದಲ್ಲಿ `ವಾಯ್ಸ~ ಫೈನಲ್ಸ್

ಗರುಡಾ ಮಾಲ್ ಪ್ರಾಯೋಜಿತ ವಾಯ್ಸ ಆಫ್ ಬೆಂಗಳೂರು ಸೀಜನ್- 5ರ ಫೈನಲ್ಸ್ ಭಾನುವಾರ ಸಂಜೆ 6ಕ್ಕೆ ಗರುಡಾ ಮಾಲ್‌ನಲ್ಲಿ ಆರಂಭವಾಗಲಿದೆ.

ಸುಮಾರು 7 ಸಾವಿರ ಸ್ಪರ್ಧಿಗಳ ಪೈಕಿ ವಿವಿಧ ಹಂತಗಳನ್ನು ದಾಟಿಕೊಂಡು ಬಂದಿರುವ ಕೃಷ್ಣ ಮುಖಡೇಕರ್, ಸುಚಿತ್ರಾ ಗಿರಿಧರನ್, ಶ್ರಿರಕ್ಷಾ ಕೃಷ್ಣಮೂರ್ತಿ, ಮಧು ಕಶ್ಯಪ್, ಡಾ.ನಿತಿನ್ ಆಚಾರ್ಯ, ಪ್ರಗ್ಯಾ ಪಾತ್ರಾ ಅವರ ಗಾನ ಪ್ರತಿಭೆಯನ್ನು ಇಲ್ಲಿ ಒರೆಗೆ ಹಚ್ಚಲಾಗುತ್ತದೆ. ಗೆದ್ದ ತಲಾ ಒಬ್ಬ ಪುರುಷ ಮತ್ತು ಮಹಿಳಾ ಗಾಯಕರಿಗೆ `ಶ್ರೇಷ್ಠ ಗಾನ ಪ್ರತಿಭೆ~ ಪ್ರಶಸ್ತಿ, ಮಾರುತಿ ಎ ಸ್ಟಾರ್ ಕಾರ್ ಮತ್ತು ಅನೇಕ ಉಡುಗೊರೆಗಳು ದೊರೆಯಲಿವೆ.

ನಟ ಶಿವರಾಜಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ಬಾಲಿವುಡ್ ಸಂಗೀತ ನಿರ್ದೇಶಕ ಅನು ಮಲ್ಲಿಕ್ ತೀರ್ಪುಗಾರರು.

ಐರಿಬೂಟ್
ಒಂದು ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿರುವ ವ್ಯಕ್ತಿಗಳು ಅನಿವಾರ್ಯವಾಗಿ ತಮ್ಮನ್ನು ಬೇರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಂಖ್ಯೆ ಅಪಾರವಿದೆ. ಇಂತಹ ಅತೃಪ್ತ ಮನೋಭಾವದವರ ಆಸೆಯನ್ನು ಪೂರೈಸುವ ಸಲುವಾಗಿ ಹುಟ್ಟಿಕೊಂಡ ಸಂಸ್ಥೆ @ ಐರಿಬೂಟ್. ಇದು ವ್ಯಕ್ತಿಗಳ ಆಸಕ್ತಿಗೆ ಅನುಗುಣವಾಗಿ ತರಬೇತಿ ನೀಡುತ್ತಿದೆ. ಆ ಮೂಲಕ ಅವರ ಅಭಿರುಚಿಗೆ ನೀರೆರೆಯುತ್ತಿದೆ.

@ ಐರಿಬೂಟ್ ಶನಿವಾರ ಮತ್ತು ಭಾನುವಾರ ಇವೆಂಟ್ ಮ್ಯಾನೇಜ್‌ಮೆಂಟ್ ಕುರಿತ ಕಾರ್ಯಾಗಾರ ಏರ್ಪಡಿಸಿದೆ.

ಇದರಲ್ಲಿ ರಾಕ್‌ಶೊ, ಸಂಗೀತ ಗೋಷ್ಠಿ, ಗಝಲ್ ಮೊದಲಾದವುಗಳನ್ನು ನೀಡುವಾಗ ಅನುಸರಿಸಬೇಕಾದ ತಂತ್ರ, ತಾಂತ್ರಿಕ ಜ್ಞಾನ ಮೊದಲಾದವುಗಳನ್ನು ಅನುಭವಿಗಳು ತಿಳಿಸಿಕೊಡಲಿದ್ದಾರೆ.
 ಮಾಹಿತಿಗೆ: 96638 57828.

ಉದ್ಯಮಶೀಲತೆ
ಟಾಟಾ ಫಸ್ಟ್ ಡಾಟ್, ನೆನ್ ಜಾನ್ ಸಹಯೋಗದಲ್ಲಿ ಮಕ್ಕಳಲ್ಲಿ ಉದ್ಯಮಶೀಲತೆ ಬೆಳೆಸಲು ಏರ್ಪಡಿಸಿರುವ ಉಪನ್ಯಾಸ ಕಾರ್ಯಕ್ರಮ ಶನಿವಾರ ನಡೆಯಲಿದೆ.
ಐವೇರ್ ಡಿವಿಷನ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಎಸ್.ರವಿಕಾಂತ್ ಉಪನ್ಯಾಸ ನೀಡಲಿದ್ದಾರೆ.
ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (ಐಐಎಂಬಿ), ಬನ್ನೇರುಘಟ್ಟ ರಸ್ತೆ. ಬೆಳಿಗ್ಗೆ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.