ADVERTISEMENT

ಕೃತಜ್ಞತೆಯೇ ಶಿಕ್ಷಕರಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಪಿಯರ್ಸನ್ ಕಂಪೆನಿ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ, ಯಾವುದೇ ಪುರಸ್ಕಾರಕ್ಕಿಂತ ವಿದ್ಯಾರ್ಥಿಗಳು ತಮಗೆ ಸಲ್ಲಿಸುವ ಕೃತಜ್ಞತೆಯೇ ಮೌಲಿಕ ಎಂದು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ.

ದೇಶದುದ್ದಕ್ಕೂ ‘ವಾಯ್ಸ ಆಫ್ ಟೀಚರ್ ಸರ್ವೆ’ ಎಂಬ ಈ ಸಮೀಕ್ಷೆಯಲ್ಲಿ ಶೇ 76 ಮಂದಿ ಶಿಕ್ಷಕರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ 60 ಮಂದಿ ನಗದು ಪುರಸ್ಕಾರದ ಮೂಲಕ ಸೇವೆಯನ್ನು ಗುರುತಿಸುವುದು ಸೂಕ್ತ ಎಂದೂ, ಶೇ 62 ಮಂದಿ ಶಾಲಾ ಆಡಳಿತ ಮಂಡಳಿ ತಮ್ಮನ್ನು ಅಭಿನಂದಿಸಬೇಕು ಎಂದು ಹೇಳಿದ್ದಾರೆ ಎಂದು ಪಿಯರ್ಸನ್ ತಿಳಿಸಿದೆ. ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ 3,262 ಮಂದಿ ಶಿಕ್ಷಕರನ್ನು ಒಳಗೊಂಡ ಈ ಸಮೀಕ್ಷೆ ಕರ್ನಾಟಕವೂ ಸೇರಿದಂತೆ 12 ರಾಜ್ಯಗಳಲ್ಲಿ ನಡೆದಿತ್ತು.

ಶಿಕ್ಷಕರ ದಿನಾಚರಣೆಗಾಗಿ...
ಅಂದ ಹಾಗೆ, ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಕರನ್ನು ಅಭಿನಂದಿಸಲು, ಶುಭಾಶಯ ಕೋರಲು ಬಯಸುವ ವಿದ್ಯಾರ್ಥಿಗಳು ಹಾಗೂ ಹಳೆವಿದ್ಯಾರ್ಥಿಗಳು ಸಂದೇಶ ರವಾನಿಸುವ ಅಭಿಯಾನವನ್ನೂ ಪಿಯರ್ಸನ್ ಹಮ್ಮಿಕೊಂಡಿದೆ. ಆಸಕ್ತರು  www.pearsonthankyourteacher.in   ಅಥವಾ ಮೊಬೈಲ್‌ನಲ್ಲಿ Thankyou’ ಎಂಬ ಸಂದೇಶವನ್ನು 56161ಗೆ ಕಳುಹಿಸಿದರೆ ಪಿಯರ್ಸನ್ ಮೂಲಕ ಶಿಕ್ಷಕರಿಗೆ ರವಾನೆಯಾಗುತ್ತದೆ ಎಂದು ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ಬಿ. ಅಯ್ಯರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.