ADVERTISEMENT

ಕೆನಡಿಯನ್ ‘ಕಲಾ ಹಬ್ಬ’

ಪ್ರಜಾವಾಣಿ ವಿಶೇಷ
Published 5 ಮಾರ್ಚ್ 2014, 19:30 IST
Last Updated 5 ಮಾರ್ಚ್ 2014, 19:30 IST

ಬೆಂಗಳೂರಿನ ಕೆನಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಇತ್ತೀಚೆಗೆ ವಾರ್ಷಿಕ ಕಲಾಹಬ್ಬ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ದೃಶ್ಯಕಲಾ ಪ್ರಕಾರಗಳು, ಪ್ರದರ್ಶನ ಕಲೆಗಳು, ಬೊಂಬೆಯಾಟ, ನಾಟಕ, ಕಲಾ ಪ್ರದರ್ಶನ, ಭಾರತೀಯ ಸಾಂಪ್ರದಾಯಿಕ ನೃತ್ಯಕಲೆಯ ಕುರಿತ ಕಾರ್ಯಾಗಾರ, ಮರವನ್ನು ಅಪ್ಪಿಕೊಳ್ಳುವ ‘ಹಗ್ ಎ ಟ್ರೀ’ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು. 

ಖ್ಯಾತ ಗಿಟಾರ್ ವಾದಕ ಡಾ. ಬೆನ್ನಿ ಪ್ರಸಾದ್ ಅವರು ಕಲಾಹಬ್ಬದ ಮುಖ್ಯ ಅತಿಥಿಯಾಗಿದ್ದರು.

‘ಡಾ.ಬೆನ್ನಿ ಪ್ರಸಾದ್ ಅವರು ಬೆಂಟಾರ್ ಎಂಬ ೬ ತಂತಿಗಳ ಗಿಟಾರ್, ಹಾರ್ಪ್, ಹಾಗೂ ಬಾಂಗೋ ಡ್ರಮ್ಸನ್ನು ಏಕತ್ರವಾಗಿ ಒಳಗೊಂಡ ವಾದ್ಯವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅವರ ಅನುಭವ ಮತ್ತು ಸಂಗೀತ ಪ್ರತಿಭೆಯ ಅನಾವರಣ ಅತ್ಯಂತ ಕುತೂಹಲಕಾರಿಯಾಗಿತ್ತು. ವಿದ್ಯಾರ್ಥಿಗಳಲ್ಲಿ ಸಂಗೀತದ ಕುರಿತಾದ ಆಸಕ್ತಿಯನ್ನು ಮೂಡಿಸುವಲ್ಲಿ ಸಫಲವಾಯಿತು’ ಎಂದು ಶಾಲೆಯ ಮುಖ್ಯಸ್ಥ ಶೇನ್ ಕೆಲ್ಸ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.