ADVERTISEMENT

ಕೈಮಗ್ಗಕ್ಕೆ ಸಮಂತಾ ಬೆಂಬಲ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಸಮಂತಾ
ಸಮಂತಾ   

ಮುದ್ದು ಮುಖದ ಸಮಂತಾ ಫ್ಯಾಷನ್‌ ಪ್ರಯೋಗದಲ್ಲಿಯೂ ಮುಂದು. ದಕ್ಷಿಣ ಭಾರತದ ನಟಿಯರಲ್ಲಿ ಸಮಂತಾ ಹೆಚ್ಚು ಸ್ಟೈಲಿಶ್‌. ಆಧುನಿಕ, ಸಾಂಪ್ರದಾಯಿಕ ಯಾವುದೇ ಬಗೆಯ ದಿರಿಸೂ ಇವರ ದೇಹಸಿರಿಗೆ ಹೊಂದುತ್ತದೆ. ಸಮಂತಾ ಕೈಮಗ್ಗದ ಸಾಂಪ್ರದಾಯಿಕ ದಿರಿಸು ತೊಟ್ಟು ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುವುದೇ ಇದಕ್ಕೆ ಸಾಕ್ಷಿ.

ಕೈ–ಕಸೂತಿಯ ಬ್ಲೌಸ್‌ಗೆ ಹೊಂದುವ ಅಜ್ರಕ್‌ ಪ್ರಿಂಟ್‌ ಸೀರೆ ಉಟ್ಟು ಇನ್ನಷ್ಟು ಮುದ್ದಾಗಿ ಇವರು ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ನಡೆಯುವ ಕೈಮಗ್ಗದ ಪ್ರದರ್ಶನದಲ್ಲಿ ಭಾಗವಹಿಸುವಂತೆ ಅವರು ಅಭಿಮಾನಿಗಳಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಕೈಮಗ್ಗದ ಉತ್ಪನ್ನಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಪ್ರೀತಮ್ ಜುಕಾಕರ್ ಈ ಉಡುಪಿನ ವಿನ್ಯಾಸಕ. ಈ ಚಿತ್ರಕ್ಕೆ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಂದಿಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
****
ಪ್ರಸಿದ್ಧಿ: ರಣವೀರ್‌ ಸಿಂಗ್‌ ಹಿಂದಿಕ್ಕಿದ ವರುಣ್‌ ಧವನ್‌

ಸಂಭಾವನೆ ಹಾಗೂ ಪ್ರಸಿದ್ಧಿ ವಿಚಾರದಲ್ಲಿ ನಟ ವರುಣ್‌ ಧವನ್‌ ಅವರು ಸದ್ಯ ಬಾಲಿವುಡ್‌ನ ಅತೀ ಹೆಚ್ಚು ಬೇಡಿಕೆ ನಟ ರಣವೀರ್‌ ಸಿಂಗ್‌ ಅವರನ್ನು ಹಿಂದಿಕ್ಕಿದ್ದಾರೆ.

ADVERTISEMENT

ಐಪಿಎಲ್‌ 2018ರ ಆರಂಭಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ವರುಣ್‌ ಅವರು ಭಾರಿ ಮೊತ್ತದ ಸಂಭಾವನೆ ಪಡೆದಿದ್ದರು. ಆದರೆ ಇದೇ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ರಣವೀರ್‌ ಅವರು ಅವರಿಗಿಂತ ಕಡಿಮೆ ಸಂಭಾವನೆ ಪಡೆದಿದ್ದರು. ಈ ಕಾರ್ಯಕ್ರಮದಲ್ಲಿ ಪರಿಣೀತಿ ಚೋಪ್ರಾ, ಜಾಕ್ವೆಲಿನ್‌ ಫರ್ನಾಂಡೀಸ್‌ ಹಾಗೂ ಇತರ ನಟರು ಪ್ರದರ್ಶನ ನೀಡಿದ್ದರು. ಇಷ್ಟು ಮಂದಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಿದ್ದು ವರುಣ್‌. ಇವರು ₹6 ಕೋಟಿ ಸಂಭಾವನೆ ಪಡೆದಿದ್ದರೆ, ರಣವೀರ್‌ ಸಿಂಗ್‌ ಅವರು ಪಡೆದ ಸಂಭಾವನೆ ₹5 ಕೋಟಿ.


ವರುಣ್‌ ಧವನ್‌
ಖಾಸಗಿ ಕಾರ್ಯಕ್ರಮದಲ್ಲಿ ನಟ ಅಥವಾ ನಟಿಯರ ಬೇಡಿಕೆಯನ್ನು ಅನುಸರಿಸಿ ಸಂಘಟಕರು ಸಂಭಾವನೆ ನೀಡುವುದು ರೂಢಿ.  ಬಹುಶಃ ಐಪಿಎಲ್‌ ಸಂಘಟಕರು ರಣವೀರ್‌ ಸಿಂಗ್‌ಗಿಂತ ವರುಣ್‌ ಹೆಚ್ಚು ಪ್ರಸಿದ್ಧ ನಟ ಎಂದು ಭಾವಿಸಿದ್ದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.