ADVERTISEMENT

ಕ್ರಿಸ್ಮಸ್ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಭೂರಿ ಭೋಜನ
ಲಿ ಮೆರಿಡಿಯನ್ ಹೋಟೆಲ್‌ನಲ್ಲಿರುವ ಲಾ ಬ್ರಾಸ್ಸೆರೀ ಕ್ರಿಸ್‌ಮಸ್ ಸಡಗರವನ್ನು ಆಚರಿಸಿಕೊಳ್ಳುತ್ತಿದೆ. ಕ್ರಿಸ್‌ಮಸ್ ಹಬ್ಬದ ದಿನದಂದು ಮಧ್ಯಾಹ್ನದ ಭೂರಿ ಭೋಜನವನ್ನು ಆಯೋಜಿಸಿದೆ. ಟರ್ಕಿ, ಸಮುದ್ರ ಖಾದ್ಯ, ಬಗೆಬಗೆಯ ಶಾಖಾಹಾರಿ ತಿನಿಸುಗಳು, ಪ್ಲಮ್ ಪುಡ್ಡಿಂಗ್ ಇತ್ಯಾದಿ ತಿನಿಸುಗಳನ್ನು ಹಬ್ಬದ ಸಂಭ್ರಮಕ್ಕಾಗಿ ಆಯ್ಕೆ ಮಾಡಿ ಲಾ ಬ್ರಾಸ್ಸೆರೀ ಉಣಬಡಿಸುತ್ತಿದೆ. ಸಂಪರ್ಕ: 22282828.

ಶಾಪಿಂಗ್‌ಗೆ ಈಸಿಡೇ
ಈಸಿಡೇ ಸ್ಟೋರ್ಸ್‌ ಕ್ರಿಸ್‌ಮಸ್ ಆಚರಣೆಯ ಸಂದರ್ಭದಲ್ಲಿ ಹಬ್ಬದ ಉಡುಗೊರೆಗಳನ್ನು ಘೋಷಿಸಿದೆ. ಕ್ರಿಸ್‌ಮಸ್ ಟ್ರೀ, ಮನೆ ಸಿಂಗರಿಸಲು ಬೇಕಾದ ಪರಿಕರಗಳು, ಬೆಲ್‌ಗಳು, ಆಟಿಕೆ ಹಾಗೂ ಸಾಂತಾಕ್ಲಾಸ್ ಬೊಂಬೆಯಂಥ ವಿಶೇಷ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಪುರುಷರ ಉಡುಗೆಗಳು ರೂ. 200ಕ್ಕೆ, 250 ಗ್ರಾಂ ಪ್ಲಮ್ ಕೇಕ್‌ಗೆ ರೂ. 90 ಇತ್ಯಾದಿಗಳ ಜತೆಗೆ ಬಗೆಬಗೆಯ ವಸ್ತ್ರಗಳು, ಡಿನ್ನರ್ ಸೆಟ್, ಉಡುಗೊರೆ ಇತ್ಯಾದಿ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಿದೆ. ಜತೆಗೆ ಹಬ್ಬದ ಸಂದರ್ಭದಲ್ಲಿ ಹಸಿ ಹಾಗೂ ರೋಸ್ಟ್ ಮಾಡಿದ ಟರ್ಕಿ ಮಾಂಸ ಲಭ್ಯ. ಇದಕ್ಕಾಗಿ ಮುಂಚಿತವಾಗಿ ಈಸಿಡೇ ಸ್ಟೋರ್ಸ್‌ಗೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು.

ದೋ ಬಂದರ್
ಹಬ್ಬದ ಸಂದರ್ಭದಲ್ಲಿ `ದೋ ಬಂದರ್' ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನಗಳನ್ನು ಉಡುಗೊರೆ ರೂಪದಲ್ಲಿ ತಮ್ಮ ಪ್ರೀತಿಪಾತ್ರರಿಗೆ ನೀಡಬಹುದಾಗಿದೆ. ಮಹಾ ಉಡುಗೊರೆಯಲ್ಲಿ ಒಂದು ದೊಡ್ಡ ಸೋಪ್, 2 ಸಾಧಾರಣ ಅಳತೆಯ ಸಾಬೂನು ಹಾಗೂ ಎರಡು ಪ್ರಯಾಣದ ಸಂದರ್ಭದಲ್ಲಿ ಬಳಸಬಹುದಾದ ಸಾಬೂನು ಸೇರಿ ಒಟ್ಟು ಐದು ಸಾಬೂನುಗಳ ಒಂದು ಪೊಟ್ಟಣಕ್ಕೆ ರೂ. 500. ಸಾಮಾನ್ಯ ಉಡುಗೊರೆ ಪೊಟ್ಟಣದಲ್ಲಿ ಮೂರು ಸಾಬೂನುಗಳಿರುತ್ತವೆ. ಇದರ ಬೆಲೆ ರೂ. 200. ಎರಡು ಸಾಬೂನುಗಳ ಪುಟ್ಟ ಉಡುಗೊರೆಯ ಬೆಲೆ ರೂ. 150.  

ಕ್ರಿಸ್‌ಮಸ್ ಊಟ
ರಾಯಲ್ ಆರ್ಕಿಡ್ ಹೋಟೆಲ್ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ವಿಶೇಷ ಖಾದ್ಯಗಳನ್ನೊಳಗೊಂಡ ಮಧ್ಯಾಹ್ನದ ಭೋಜನವನ್ನು ಸಾದರಪಡಿಸುತ್ತಿದೆ. ಕ್ರಿಸ್‌ಮಸ್ ಹಬ್ಬದ ವಿಶೇಷ ಪ್ಲಮ್ ಕೇಕ್‌ನ ಜತೆಯಲ್ಲಿ ಬಗೆಬಗೆಯ ತಿನಿಸುಗಳನ್ನು ಬಫೆ ರೂಪದಲ್ಲಿ ಸವಿಯಬಹುದಾಗಿದೆ. ಒಬ್ಬರಿಗೆ ರೂ. 600, ಜೋಡಿಗೆ ರೂ. 1299 ಹಾಗೂ ಮಕ್ಕಳಿಗೆ ರೂ. 499 ರೂಪಾಯಿಗೆ ರಾಯಲ್ ಆರ್ಕಿಡ್‌ನ ಈ ವಿಶೇಷ ಕ್ರಿಸ್‌ಮಸ್ ಊಟ ಲಭ್ಯ. ಮಾಹಿತಿಗೆ: 4251 2345.

ಬಿಯರ್ ಬೇಕೆ?
ಕಿಂಗ್‌ಫಿಷರ್ ಅವರ ಬ್ರ್ಯೂಡಾಲ್ಫ್  ರೀನ್‌ಬೀರ್ ಎಂಬ ಕಾರ್ಯಕ್ರಮದಡಿ ಬಿಯರ್ ಕುಡಿಯಲಿಚ್ಛಿಸುವವರು www.kingfisherworld.com/brewdolph ಜಾಲತಾಣ ಪುಟಕ್ಕೆ ಭೇಟಿ ನೀಡಿ ಕ್ರಿಸ್‌ಮಸ್ ಹಬ್ಬಕ್ಕಾಗಿ ತಮ್ಮ ಕೋರಿಕೆಯನ್ನು ಸಲ್ಲಿಸಿದರಾಯಿತು. ಆಯ್ಕೆಯಾಗುವ ಅದೃಷ್ಟಶಾಲಿಗೆ ಉಚಿತವಾಗಿ ಬಿಯರ್ ಸಿಗಲಿದೆ.

ಕ್ಯಾನ್‌ಬೆರಾದಲ್ಲಿ...
ಸ್ಕೈ ಎಂಬ ಸ್ವಯಂಸೇವಾ ಸಂಸ್ಥೆಯು ಅವಕಾಶ ವಂಚಿತ 50 ಮಕ್ಕಳೊಂದಿಗೆ ಕ್ರಿಸ್‌ಮಸ್ ಆಚರಿಸಲು ತೀರ್ಮಾನಿಸಿದೆ. ಅದಕ್ಕಾಗಿ ಯುಬಿ ಸಿಟಿಯ 16ನೇ ಅಂತಸ್ಥಿನಲ್ಲಿರುವ ಕ್ಯಾನ್‌ಬೆರಾ ಬ್ಲಾಕ್ ಸಜ್ಜಾಗಿದೆ. ಅಲಂಕೃತ ಕ್ರಿಸ್‌ಮಸ್ ಮರ, ಮಕ್ಕಳಿಗೆ ಆಟಿಕೆಗಳು, ಸಂಗೀತ, ತಿಂಡಿ ತಿನಿಸುಗಳು ಎಲ್ಲವೂ ಹಬ್ಬದ ಸಡಗರವನ್ನು ಸೃಷ್ಟಿಸಲಿವೆ. ಸಂಜೆ 4-6ರ ಸಮಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಿನಿಸು ಆಟಿಕೆಗಳನ್ನು ನೀಡಲು ಸ್ಕೈ ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.