ADVERTISEMENT

ಚಾಲಕ ತೋರಿದ ಕರುಣೆ

ವಿಶಾಲಾಕ್ಷಿ ರಾವ್‌
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಇದು 30 ವರ್ಷಗಳ ಹಿಂದೆ ಬಸ್‌ನಲ್ಲಿ ನಡೆದ ಘಟನೆ. ಅದರ ಸವಿನೆನಪು ಹಸಿಯಾಗಿದೆ. ನನ್ನ ಮೊದಲನೆ ಮಗುವನ್ನು ಕರೆದುಕೊಂಡು, 2ನೇ ಮಗುವಿಗಾಗಿ ತುಂಬು ಗರ್ಭಿಣಿಯಾದ ನಾನು ‘ಅನಿವಾರ್ಯ ಕಾರಣದಿಂದ’, ‘ಚಿತ್ರದುರ್ಗದಿಂದ ತುರುವೇಕೆರೆಗೆ’ ಹೋಗಬೇಕೆಂದು ಒಬ್ಬಳೇ ಪ್ರಯಾಣಿಸುತ್ತಿದ್ದೆ.

ಆ ಬಸ್ಸಿನ ಚಾಲಕರು ಮುಂದೆ ಕೂತಿದ್ದ ನನ್ನನ್ನು ನೋಡಿ ಯಾಕಮ್ಮ ಈ ಸಮಯದಲ್ಲಿ ಒಬ್ಬರೇ ಬಂದಿದ್ದೀರಾ ಅಂದರು. ನಾನು ಮೌನವಾಗಿ  ಕುಳಿತಿದ್ದೆ. ನಾನೂ ಸಹ ನನ್ನ ಮಗಳನ್ನು ಬಾಣಂತನಕ್ಕೆ ಕರೆತರಬೇಕೆಂದರು. ಅಷ್ಟರಲ್ಲಿ ನಿರ್ವಾಹಕರು ಬಂದಿದ್ದರಿಂದ ಬಸ್‌ ಮುಂದೆ ಚಲಿಸಿತು.

ಬಸ್‌ ಹುಳಿಯಾರಿಗೆ ಬರುವ ಹೊತ್ತಿಗೆ ನನಗೂ ಸುಸ್ತಾಗಿತ್ತು. ಚಾಲಕರು ಅಲ್ಲಿ ಕಾಫಿ ಕುಡಿಯಲು ಇಳಿದಿದ್ದರು ಅನ್ನಿಸುತ್ತೆ. ಪುನಃ ಬಸ್‌ ಹತ್ತುವಾಗ  ನನಗಾಗಿ, ಎಳನೀರು, ಮಗುವಿಗಾಗಿ ಬಿಸ್ಕತ್ತು ತಂದು ಬಲವಂತವಾಗಿ ಕೊಟ್ಟರು. ಹಣ ಕೊಡಲು ಹೋದರೆ ನಿರಾಕರಿಸಿದರು.

ತುರುವೇಕೆರೆ ಬಂದ ಮೇಲೆ ಅಲ್ಲಿ ಇಳಿದೆ. ಆ ಕಾಲದಲ್ಲಿ ‘ಆಟೊ ರಿಕ್ಷಾ’ ಇರಲಿಲ್ಲ. ಜಟಕಾ ಇತ್ತು. ಅದನ್ನು ಹತ್ತುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಬಸ್ ಚಾಲಕರು ಅವರಿಗೆ ಗೊತ್ತಿದ್ದ ಹುಡುಗನನ್ನು ಕರೆದು ಇವರನ್ನು ಅವರ ಮನೆ ತಲುಪಿಸಿ ಬಾ ಎಂದು ಕಳುಹಿಸಿದರು.
ಅವರ ನಿಸ್ವಾರ್ಥ ಸಹಾಯ ಇಂದಿಗೂ ಸವಿನೆನಪಾಗಿ ಉಳಿದಿದೆ.
– ವಿಶಾಲಾಕ್ಷಿ ರಾವ್‌,
ಕುಮಾರಸ್ವಾಮಿ ಲೇ ಔಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.