ADVERTISEMENT

ಜಾಗೃತಿ ಮೂಡಿಸಿದ ಸೈಕ್ಲೋಥಾನ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST
ಜಾಗೃತಿ ಮೂಡಿಸಿದ ಸೈಕ್ಲೋಥಾನ್
ಜಾಗೃತಿ ಮೂಡಿಸಿದ ಸೈಕ್ಲೋಥಾನ್   

ಆರೋಗ್ಯಪೂರ್ಣ ಹಾಗೂ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡರೆ ಮಾತ್ರ ಬೆಂಗಳೂರಿಗೆ ಉಳಿಗಾಲ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಹಸಿರು ಮನೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡ `ಬಿಸಿಐಎಲ್- ಝೆಡ್ ಹೆಬಿಟ್ಯಾಟ್ಸ್~  ಆಯೋಜಿಸಿದ್ದ ಸೈಕ್ಲೋಥಾನ್ ಝೆಡ್ ಮೈಲ್ಸ್ ಯಶಸ್ವಿಯಾಯಿತು.

ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಪರಿಸರ ಪ್ರೇಮಿಗಳು ಸೇರಿದಂತೆ 1000ಕ್ಕೂ ಹೆಚ್ಚು ಉತ್ಸಾಹಿ ಸೈಕಲ್ ಸವಾರರು ಪಾಲ್ಗೊಂಡಿದ್ದರು. ವಿಧಾನಸೌಧದ ಮುಂಭಾಗದಲ್ಲಿ ಆರಂಭವಾಗಿ ಎರಡು ಗಂಟೆಗಳ ಸುದೀರ್ಘ ಸವಾರಿಯೊಂದಿಗೆ ಮಲ್ಲೆೀಶ್ವರಂ 18ನೇ ಕ್ರಾಸ್ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಮುಕ್ತಾಯವಾಯಿತು. ನಟಿ ಶಿರಿನ್ ಈಶ್ವರಿ ಸೈಕ್ಲೋಥಾನ್‌ಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಬೆಂಗಳೂರಿನ ನಾಗರಿಕರ ಸಮೂಹ ಪ್ರಜ್ಞೆಯ ಮೇಲೆ ಪರಿಣಾಮ ಉಂಟು ಮಾಡಿದ ನೆಮ್ಮದಿ ನಮಗಿದೆ. ಇದರಲ್ಲಿ ಪಾಲ್ಗೊಂಡವರು ಇನ್ನಷ್ಟು ಉಲ್ಲಸಿತರಾಗಿ ನಿರ್ಗಮಿಸಿದ್ದಾರೆ ಮತ್ತು ಸುಸ್ಥಿರ ಬೆಂಗಳೂರಿಗೆ ತಮ್ಮದೇ ಆದ ಕೊಡುಗೆ ನೀಡುವ ಪ್ರೇರಣೆ ಪಡೆದುಕೊಂಡಿದ್ದಾರೆ ಎಂಬುದು ನಮ್ಮ ಆಶಯ.

ಸೈಕಲ್ ಸವಾರಿಯಿಂದ ಸಿಗುವ ಆರೋಗ್ಯದ ಲಾಭದ ಬಗ್ಗೆ ಅನೇಕರಿಗೆ ಈಗಾಗಲೇ ಮನವರಿಕೆಯಾಗಿದೆ. ನಮ್ಮ ರಸ್ತೆಗಳನ್ನು ಹೊಗೆಗೂಡು ಮಾಡುತ್ತಿರುವ ಬಹತ್ ಸಂಖ್ಯೆಯ ವಾಹನಗಳ ವಾಯುಮಾಲಿನ್ಯಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಎಲ್ಲರ ಮೇಲಿದೆ. ನಾವೇ ಇದಕ್ಕೆ ಮುನ್ನುಡಿ ಬರೆಯೋಣ  ಎಂಬ ಘೋಷವಾಕ್ಯಕ್ಕೆ ಈ ಸೈಕ್ಲೋಥಾನ್ ನಾಂದಿ ಹಾಡಿದೆ ಎಂದವರು ಬಿಸಿಐಎಲ್- ಝೆಡ್ ಹೆಬಿಟಾಟ್ಸ್ ಅಧ್ಯಕ್ಷ ಚಂದ್ರಶೇಖರ್ ಹರಿಹರನ್, 

ಸೇಂಟ್ ಜೋಸೆಫ್ ಕಾಲೇಜ್, ಗೋ ಗ್ರೀನ್ ಕ್ಲಬ್, ಒಕ್ಕಲಿಗರ ಸೇನೆ, ರೇಡಿಯೊ ಫಿವರ್ 104, ಸ್ಪೋರ್ಟ್ಸ್ ಎಕ್ಸ್‌ಎಸ್, ಇಂಡಿಯನ್ ಸ್ಟೇಜ್ ಮುಂತಾದವರು ಈ ಕಾರ್ಯಕ್ಕೆ ಕೈಜೋಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.