ADVERTISEMENT

ಟಾಟಾ ಮೇಳ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಕರ್ನಾಟಕದ ಪ್ರಾಚೀನ ಕಲೆ, ಕಸೂತಿ, ರಾಜಸ್ತಾನದ ಮೊಘಲ್ ಬ್ಲಾಕ್ ಪ್ರಿಟಿಂಗ್, ಗುಜರಾತ್‌ನ ಶಾಡೊ ವರ್ಕ್, ಜರ್ಡೊಸಿ ವರ್ಕ್, ಬಂಗಾಳಿ ಎಂಬ್ರಾಯಡರಿ, ಕ್ರೊಶಟ್ ಮತ್ತು ಹ್ಯಾಂಡ್ ವೇವ್, ಮಿಜಾಪುರ್ ಸಾಂಪ್ರದಾಯಿಕ ಕ್ಲಿಮ್ ದುರಿಸ್, ಗೃಹ ಉತ್ಪನ್ನಗಳೆಲ್ಲವೂ ಈಗ  ಒಂದೇ ಸೂರಿನಡಿಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಗ್ರಾಹಕರದ್ದು. ಇಲ್ಲಿರುವ ಆಹಾರ ಮಳಿಗೆಗಳಲ್ಲಿ ನಾನಾ ನಮೂನೆಯ ರುಚಿ ಸವಿಯುವುದು ಇಲ್ಲಿಗೆ ಬಂದವರಿಗೆ ಸಿಕ್ಕುವ ಬೋನಸ್ಸು.

ಟಾಟಾ ಕಾಫಿ ಆಯೋಜಿಸಿರುವ ಹ್ಯಾಂಡ್‌ಮೇಡ್ ಕಲೆಕ್ಟಿವ್‌ನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನದ ಜತೆಗೆ ಪ್ರಾತ್ಯಕ್ಷತೆ, ಪ್ರದರ್ಶನ, ಮಾರಾಟ, ಕಾರ್ಯಾಗಾರ, ಮಾತು, ಸಂವಾದಗಳು ನಡೆಯುತ್ತವೆ.

ಟಾಟಾ ಕಾಫಿ ಹ್ಯಾಂಡ್‌ಮೇಡ್ ಕಲೆಕ್ಟಿವ್-3ನೇ ಆವೃತ್ತಿಗಾಗಿ ಎ ಹಂಡ್ರೆಡ್ ಹ್ಯಾಂಡ್ಸ್ ಜೊತೆ ಕೈಜೋಡಿಸಿದೆ. ಸಣ್ಣ ಗಾರ್ಡನ್ ಬಜಾರ್‌ನಿಂದ ಆರಂಭಗೊಂಡ ಈ ಪ್ರದರ್ಶನ ಇಂದು ಕಸೂತಿ ಉತ್ಪನ್ನಗಳ ದೊಡ್ಡ ಉತ್ಸವವಾಗಿ ಬೆಳೆದಿದೆ. ಇದು ಕಸೂತಿ ಉತ್ಪನ್ನಗಳ ತಯಾರಿಕರನ್ನು ಉತ್ತೇಜಿಸುವ ಸಲುವಾಗಿ ನಡೆಸಲಾಗುತ್ತದೆ.

ಪ್ರದರ್ಶನ ಭಾನುವಾರದವರೆಗೆ ನಡೆಯಲಿದ್ದು (ನ. 4) ಬೆಳಿಗ್ಗೆ 11ರಿಂದ ಸಂಜೆ 7.30ರವರೆಗೆ ಇರುತ್ತದೆ. ಸ್ಥಳ: ನಂ.4, ಆಶ್ಲೆ ರಸ್ತೆ, ಅಂಜತಾ ಹೋಟೆಲ್ ಹಿಂಭಾಗ.
 ್ಢ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.