ADVERTISEMENT

ಟ್ರೆಂಡಿಂಗ್ ಆಯ್ತು ಸಿಹಿಮುತ್ತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 13:28 IST
Last Updated 12 ಮಾರ್ಚ್ 2018, 13:28 IST
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ   

ಇತ್ತೀಚೆಗಷ್ಟೇ ‘ಪರಿ’ ಸಿನಿಮಾದ ವಿವಾದದಿಂದ ಸುದ್ದಿಯಾಗಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ಸಲ ಸುದ್ದಿಯಲ್ಲಿರುವುದು ವಿವಾದದ ಕಾರಣಕ್ಕಲ್ಲ. ಮುತ್ತಿನ ಕಾರಣಕ್ಕೆ.

ವಿಷಯ ಏನಪ್ಪಾ ಆಂದ್ರೆ, ಬ್ಯುಸಿ ಶೆಡ್ಯೂಲ್ ನಡುವೆಯೂ ತುಸು ಬಿಡುವು ಮಾಡಿಕೊಂಡಿರುವ ಈ ಜೋಡಿ ಇತ್ತೀಚೆಗೆ ತೆಗೆದುಕೊಂಡ ಸೆಲ್ಫಿಯೊಂದು ಇನ್‌ಸ್ಟಾಗ್ರಾಂನಲ್ಲಿ ಭಾರಿ ಸದ್ದುಮಾಡುತ್ತಿದ್ದೆ. ಇನಿಯನ ಕೆನ್ನೆಗೆ ಅನುಷ್ಕಾ ಮುತ್ತು ನೀಡುತ್ತಿರುವ ಈ ಚಿತ್ರಕ್ಕೆ ಅನುಷ್ಕಾ ಶರ್ಮಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ 23 ಲಕ್ಷ ಲೈಕ್‌ಗಳು ಬಂದಿವೆ.

ಮದುವೆಗೆ ಮುನ್ನ, ಮದುವೆಯ ನಂತರ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಈ ಜೋಡಿ, ಸಮುದ್ರತೀರದಲ್ಲೊಂದು ಬೃಹತ್ ಬಂಗಲೆ ಖರೀದಿಸಿದೆಯಂತೆ. ಮುಳುಗುತ್ತಿರುವ ಸೂರ್ಯನನ್ನು ಮನೆಯ ಟೆರೆಸ್ ಮೇಲೆ ಕಣ್ತುಂಬಿಕೊಳ್ಳುತ್ತಿರುವ ಅನುಷ್ಕಾ ಚಿತ್ರ ನೆಟ್ಟಿಗರ ಮನಗೆದ್ದಿದ್ದರೆ, ಮನೆಯ ತೆರೆದ ಬಾಲ್ಕನಿಯಲ್ಲಿ ವಿರಾಟ್ ತೆಗೆದುಕೊಂಡಿದ್ದ ಸೆಲ್ಫಿಗೆ ವಿರಾಟ್ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ದೊರೆತಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.