ADVERTISEMENT

ಡೆಕ್ಕನ್ ನೃತ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2012, 19:30 IST
Last Updated 21 ಫೆಬ್ರುವರಿ 2012, 19:30 IST
ಡೆಕ್ಕನ್ ನೃತ್ಯ ಸ್ಪರ್ಧೆ
ಡೆಕ್ಕನ್ ನೃತ್ಯ ಸ್ಪರ್ಧೆ   

`ಡೆಕ್ಕನ್ ಹೆರಾಲ್ಡ್~ ಇದೇ 24 ಹಾಗೂ 25ರಂದು ಅಂತರಕಾಲೇಜು ರಸಪ್ರಶ್ನೆ ಹಾಗೂ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಿದೆ. ಪದವಿ ತರಗತಿಗಳ (ಕಲಾ, ವಿಜ್ಞಾನ, ವಾಣಿಜ್ಯ, ವೈದ್ಯಕೀಯ ಹಾಗೂ ಎಂಜಿನಿಯರ್) ವಿದ್ಯಾರ್ಥಿಗಳು ವಿಠ್ಠಲ ಮಲ್ಯ ರಸ್ತೆಯ ಸಂತ ಜೋಸೆಫ್ ಇಂಡಿಯನ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ರಸಪ್ರಶ್ನೆ ಸ್ಪರ್ಧೆಗೆ ಪ್ರತಿ ಕಾಲೇಜಿನಿಂದ ಗರಿಷ್ಠ ಮೂರು ತಂಡಗಳು (ಪ್ರತಿ ತಂಡದಲ್ಲಿ ಮೂರು ಜನರಂತೆ) ಭಾಗವಹಿಸಬಹುದು. ಹೆಚ್ಚು ಅಂಕ ಗಳಿಸಿದ ತಂಡ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲಿದೆ.

ಸಮೂಹ ನೃತ್ಯ ಸ್ಪರ್ಧೆಯು `ಸೆಮಿ ಕ್ಲಾಸಿಕಲ್~ (ಪೌರಾಣಿಕ, ಜಾನಪದ )ಹಾಗೂ `ಮಾಡ್ರನ್ ಡಾನ್ಸ್~ ಎಂಬ ಎರಡು ವಿಭಾಗಗಳಲ್ಲಿ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಒಂದು ತಂಡಕ್ಕೆ ಮಾತ್ರ ಅವಕಾಶವಿದ್ದು, ತಂಡದಲ್ಲಿ 6 ಸ್ಪರ್ಧಿಗಳು ಭಾಗವಹಿಸಬಹುದು. ಪ್ರತಿ ತಂಡಕ್ಕೆ 5 ನಿಮಿಷ ನಿಗದಿಪಡಿಸಲಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನವಿದೆ. ಪ್ರವೇಶ ಹಾಗೂ ನೋಂದಣಿ ಉಚಿತ. ಆಸಕ್ತರು ಇದೇ 23ರೊಳಗೆ  dhcolleges@deccanherald.co.in   ಸಂಪರ್ಕಿಸಬಹುದು. ಮೊ: 98807 13943.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.