ADVERTISEMENT

ಡೋಂಟ್‌ಕೇರ್ ಸ್ವರಾಭಾಸ್ಕರ್!

​ಪ್ರಜಾವಾಣಿ ವಾರ್ತೆ
Published 8 ಜೂನ್ 2018, 19:30 IST
Last Updated 8 ಜೂನ್ 2018, 19:30 IST
ಡೋಂಟ್‌ಕೇರ್ ಸ್ವರಾಭಾಸ್ಕರ್!
ಡೋಂಟ್‌ಕೇರ್ ಸ್ವರಾಭಾಸ್ಕರ್!   

ಇತ್ತೀಚೆಗಷ್ಟೇ ಬಿಡುಗಡೆಯಾದ ‘ವೀರೆ ದಿ ವೆಡ್ಡಿಂಗ್’ ಚಿತ್ರದ ಪಾತ್ರದಲ್ಲಿ ಬೋಲ್ಡ್ ಆಗಿರುವ ನಟಿಸಿರುವ ನಟಿ ಸ್ವರಾ ಭಾಸ್ಕರ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳ ಸುರಿಮಳೆಯಾಗುತ್ತಿದೆ. ಆದರೆ, ಸ್ವರಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಆರಾಮವಾಗಿದ್ದಾರಂತೆ.

ಈ ಚಿತ್ರದಲ್ಲಿ ಸ್ವರಾ ಪಕ್ಕಾ ಬೋಲ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಂದರ್ಥದಲ್ಲಿ ಸ್ವರಾಗೆ ವೃತ್ತಿ ಜೀವನದಲ್ಲಿ ದೊರೆತ ಅಪರೂಪದ ಪಾತ್ರವಿದು.

‘ಪಾತ್ರವೊಂದರಲ್ಲಿ ತನ್ಮಯವಾಗಿ ನಟಿಸಿದ ಮೇಲೆ ನಟರು ತಮ್ಮ ಪಾತ್ರಕ್ಕೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳಬಾರದು. ಇದರಿಂದ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ’ ಎಂಬುದು ಅವರ ಅಭಿಪ್ರಾಯ.

ADVERTISEMENT

‘ನಮ್ಮದು ಹಿಪೊಕ್ರಿಸಿಯಿಂದ ಕೂಡಿದ ಸಮಾಜ. ಇಲ್ಲಿ ಪುರುಷರು ಏನು ಮಾಡಿದರೂ ನಡೆಯುತ್ತದೆ. ಅದೇ ಕೆಲಸವನ್ನು ಮಹಿಳೆ ಮಾಡಿದಾಗ ಟೀಕೆಗಳ ಸುರಿಮಳೆಯೇ ಆಗುತ್ತದೆ. ಇದು ಆರೋಗ್ಯವಂತ ಸಮಾಜದ ಲಕ್ಷಣವಲ್ಲ’ ಎಂದು ಸ್ವರಾ ಅವರು ತುಸು ಖಾರವಾಗಿಯೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.