ADVERTISEMENT

ತೂಕ, ಅಳತೆ ಉಪಕರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2011, 19:30 IST
Last Updated 22 ಜೂನ್ 2011, 19:30 IST
ತೂಕ, ಅಳತೆ ಉಪಕರಣ ಪ್ರದರ್ಶನ
ತೂಕ, ಅಳತೆ ಉಪಕರಣ ಪ್ರದರ್ಶನ   

`ವ್ಯಾಪಾರಂ ದ್ರೋಹ ಚಿಂತನಂ~ ಎಂಬ ಮಾತು ಬಹು ಹಿಂದಿನಿಂದಲೂ ಚಾಲ್ತಿಯಲ್ಲಿದೆ. ತೂಕ ಮತ್ತು ಅಳತೆ ವಿಚಾರದಲ್ಲಿ ಗ್ರಾಹಕರು ಇಂದಿಗೂ ಸಹ ವಂಚನೆಗೊಳಗಾಗುತ್ತಿದ್ದಾರೆ. ಇವನ್ನು ಬಯಲಿಗೆಳೆದು ತೂಕ ಮತ್ತು ಅಳತೆ ಮೋಸ ತಡೆ ವಿರುದ್ಧ ಎಂಎಸ್‌ಎಲ್ (ಮೆಷರಿಂಗ್, ಸೈಂಟಿಫಿಕ್ ಅಂಡ್ ಲ್ಯಾಬೊರೇಟರಿ) ಅಭಿಯಾನ ಆರಂಭಿಸಿದೆ.

ಇದರ ಅಂಗವಾಗಿ ಆಧುನಿಕ ಹಾಗೂ ವೈಜ್ಞಾನಿಕ ತೂಕ ಮತ್ತು ಅಳತೆ ಸಾಧನಗಳು ಮತ್ತು ಅವುಗಳ ಪ್ರಯೋಜನ ಕುರಿತು ಮಾಹಿತಿ ನೀಡಲು ಗುರುವಾರ ಮತ್ತು ಶುಕ್ರವಾರ ಪ್ರದರ್ಶನ ಏರ್ಪಡಿಸಿದೆ. ಇಲ್ಲಿ ಅಂತರರಾಷ್ಟ್ರೀಯ ಮಾನದಂಡದ ಸಾಧನಗಳನ್ನು ಪ್ರದರ್ಶಿಸಲಾಗುತ್ತದೆ.

ಇಲ್ಲಿ ಆಧುನಿಕ ಅಳತೆ ಉಪಕರಣ, ತೂಕದ ಯಂತ್ರ, ಮಾಲಿನ್ಯ ನಿಯಂತ್ರಣ ಸಾಧನ, ಪರೀಕ್ಷಾ ಸಾಧನ, ಜೈವಿಕ ಅಳತೆ ಉಪಕರಣ ಮತ್ತು ಮಾಪನಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಉಪಕರಣಗಳನ್ನು ನೋಡಬಹುದು.
 
ದೇಶದಲ್ಲಿ ವಿಸ್ತಾರಗೊಳ್ಳುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ಯಮ ಕೈಗಾರಿಕೆಗಳಿಗೆಂದೇ ತಯಾರಿಸಲ್ಪಟ್ಟ ಉತ್ತಮ ಗುಣಮಟ್ಟದ ಉಪಕರಣಗಳ ಪ್ರದರ್ಶನ ವಿಶೇಷ ಆಕರ್ಷಣೆ.
ಸ್ಥಳ: ನಿಮ್ಹಾನ್ಸ್ ಸಮ್ಮೇಳನ ಸಭಾಂಗಣ, ಲಕ್ಕಸಂದ್ರ, ಹೊಸೂರು ರಸ್ತೆ. ಜೂನ್ 23ರಿಂದ 25.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.