ADVERTISEMENT

ದಾಸನಪುರದಲ್ಲಿ ಮಹಾಸುದರ್ಶನ ಯಾಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 19:59 IST
Last Updated 5 ಏಪ್ರಿಲ್ 2013, 19:59 IST

ನೆಲಮಂಗಲ ಸಮೀಪದ ದಾಸನಪುರದ ರಾಮಾನುಜ ಪೀಠಂನ ಉಭಯ ವೇದಾಂತ ವೈಷ್ಣವ ಸಭಾದ ಶ್ರೀ ಪದ್ಮಾವತಿ ಶ್ರೀನಿವಾಸ ದೇವಾಲಯದಲ್ಲಿ ಶನಿವಾರ ಮತ್ತು ಭಾನುವಾರ (ಏ.6, 7)108 ಕುಂಡಗಳಲ್ಲಿ ಶ್ರೀ ಮಹಾ ಸುದರ್ಶನ ಯಾಗ ಹಾಗೂ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ.

ಅಮೆರಿಕಾದ ಶಿವ ವಿಷ್ಣು ದೇವಾಲಯದ ಶ್ರೀ ಸವ್ಯಸಾಚಿ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ, ಶ್ರೀ ತಿರು ಸ್ವಾಮೀಜಿ ಅವರ ನೇತೃತ್ವದಲ್ಲಿ 108 ದಂಪತಿಗಳು 108 ಕುಂಡಗಳಲ್ಲಿ ಮಹಾಸುದರ್ಶನ ಯಾಗ ಮಾಡಲಿದ್ದಾರೆ.

ಶನಿವಾರ ಬೆಳಿಗ್ಗೆ 5ಕ್ಕೆ ವೇದಘೋಷ ಸಭಾ ಪ್ರಾರ್ಥನೆ, ಅನುಜ್ಞೆ, ವಿಶ್ವಕ್ಷೇನ ಪೂಜೆ, ಭಗವತ್ ವಾಸುದೇವ ಪುಣ್ಯಾಹ, ಅಂಕುರಾರ್ಪಣ, ರಕ್ಷಾಬಂಧನ, ಕಳಶಾರಾಧನೆ, 108 ದಂಪತಿಗಳ ಸಮ್ಮುಖದಲ್ಲಿ ಸತ್ಯನಾರಾಯಣ ಪೂಜೆ ವಿಷ್ಣು ಸಹಸ್ರನಾಮ ಪಾರಾಯಣ, ಕಥಾಶ್ರವಣ, ಅಷ್ಟಾವಧಾನ ಸೇವೆ, ಪದ್ಮಾವತಿ ಶ್ರೀನಿವಾಸ ಹಾಗೂ ರಾಮಾನುಜಾಚಾರ್ಯರಿಗೆ ತಿರುಮಂಜನ, ಪ್ರಬಂಧ ಪಾರಾಯಣ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ.

ಭಾನುವಾರ ಬೆಳಗ್ಗೆ 6ಕ್ಕೆ ಸುಪ್ರಭಾತ ಸೇವೆ, ಸುದರ್ಶ ಸಹಸ್ರನಾಮ ಪಾರಾಯಣ, ನಿತ್ಯಾರಾಧನೆ, ಪ್ರಬಂಧಸೇವೆ, ಅಷ್ಟಾಕ್ಷರಿ ಮಂತ್ರ ಜಪ, ಪ್ರಧಾನ ಹೋಮ, ಶ್ರೀಹಯಗ್ರೀವ ಹೋಮ, ಮಹಾಮಂಗಳಾರತಿ ನಿಗದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.