
ಪ್ರಜಾವಾಣಿ ವಾರ್ತೆ
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಾವು ಕಲಿತ ಕಲಾ ಪ್ರಕಾರಗಳನ್ನು ವಾರ್ಷಿಕ ಕಲಾ ಪ್ರದರ್ಶನ ‘ದೃಶ್ಯೋತ್ಸವ’ದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ.
ಚಿತ್ರಕಲೆ, ಗ್ರಾಫಿಕ್, ಕಲೆ, ಇತಿಹಾಸ, ಶಿಲ್ಪಕಲೆಗಳ ಮೂಲಕ ಇಂದಿನ ಪ್ರಸ್ತುತ ವಿಷಯಗಳನ್ನು ಬಿಂಬಿಸುವ ಕಲಾಕೃತಿಗಳು ಇಲ್ಲಿವೆ. ಸೈಕಲ್, ತಾಯಿ-ಮಗು, ಮನೆ, ಮಕ್ಕಳು, ಪ್ರತಿಬಿಂಬ, ಅಡುಗೆ ತಯಾರಿಯ ವಿಭಿನ್ನ ಚಿತ್ರಣದ ಕಲಾಕೃತಿಗಳು, ಹೆಣ್ಣಿನ ಚಿತ್ರಗಳು ಹೀಗೆ ಭಿನ್ನ ಕಲ್ಪನೆಯ ಚಿತ್ರಸರಣಿ ಕಣ್ಣಿಗೆ ಮುದ ನೀಡುವಂತಿವೆ.
ಪ್ರದರ್ಶನದ ಕೊನೆಯ ದಿನ ಮಾರ್ಚ್ 13. ಬೆಳಿಗ್ಗೆ 10.30ರಿಂದ ಸಂಜೆ 7ವರೆಗೆ ವೀಕ್ಷಣೆಗೆ ಅವಕಾಶವಿದೆ.
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿ, ಕುಮಾರ ಕೃಪಾ ರಸ್ತೆ.
ಪ್ರವೇಶ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.