ADVERTISEMENT

ದೇಶಿ, ವಿದೇಶಿ ಕ್ಷಣಿಕ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2011, 19:30 IST
Last Updated 7 ನವೆಂಬರ್ 2011, 19:30 IST
ದೇಶಿ, ವಿದೇಶಿ ಕ್ಷಣಿಕ ಸಮಾವೇಶ
ದೇಶಿ, ವಿದೇಶಿ ಕ್ಷಣಿಕ ಸಮಾವೇಶ   

ಭಾರತದಲ್ಲಿ ಉನ್ನತ ಶಿಕ್ಷಣದ ಉತ್ತೇಜನಕ್ಕಾಗಿ ಸ್ಥಾಪಿತವಾಗಿರುವ ಲಾಭರಹಿತ ಸಂಸ್ಥೆ ಇಂಡಸ್ ಫೌಂಡೇಷನ್ ಬೆಂಗಳೂರಲ್ಲಿ ಮಂಗಳವಾರ, ಬುಧವಾರ (ನ. 8,9) ಮೂರನೆ `ಇಂಡೋ ಗ್ಲೋಬಲ್ ಶೈಕ್ಷಣಿಕ ಸಮಾವೇಶ~ ನಡೆಸುತ್ತಿದೆ.

ಇದರಲ್ಲಿ ಅಮೆರಿಕ, ಕೆನಡಾ, ಸ್ವೀಡನ್ ಸೇರಿದಂತೆ ವಿವಿಧ ದೇಶಗಳ 200ಕ್ಕಿಂತ ಹೆಚ್ಚು ವಿವಿಗಳು ಮತ್ತು ಭಾರತದ ನೂರಾರು ವಿವಿಗಳು ಪಾಲ್ಗೊಳ್ಳಲಿದ್ದು, ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ಜೈವಿಕ ತಂತ್ರಜ್ಞಾನ, ಪರಿಸರ, ನಿರ್ವಹಣೆ, ಕಲೆ ಮತ್ತಿತರ ಕ್ಷೇತ್ರಗಳಲ್ಲಿ ಪರಸ್ಪರ ಶೈಕ್ಷಣಿಕ ಸಹಯೋಗದ ಸಾಧ್ಯತೆಗಳನ್ನು ಶೋಧಿಸಲಿವೆ.

ಬ್ರಿಟನ್‌ನ ಆ್ಯಸ್ಟನ್, ಬ್ಯಾಂಗೋರ್, ಕೀಲ್, ಕೆನಡಾದ ಕಾರ್ಲ್‌ಟನ್, ಸ್ವೀಡನ್‌ನ ಚಾಲ್ಮರ್ಸ್, ಅಮೆರಿಕದ ಕೆಕ್ ಸ್ಕೂಲ್ ಆಫ್ ಮೆಡಿಸಿನ್, ಹವಾಯಿ, ವರ್ಜೀನಿಯಾ, ವ್ಯೋಮಿಂಗ್, ವೆಸ್ಟ್ ಟೆಕ್ಸಾಸ್, ನ್ಯೂ ಮೆಕ್ಸಿಕೊ ಸ್ಟೇಟ್, ಮಾಲ್ಡೋವಾ ಸ್ಟೇಟ್ ಯುನಿವರ್ಸಿಟಿ ಆಫ್ ಮೆಡಿಸಿನ್ ಅಂಡ್ ಫಾರ್ಮಸಿ, ನೆದರ್‌ಲ್ಯಾಂಡ್‌ನ ಟಿಲ್‌ಬರ್ಗ್ ವಿವಿ ಮುಂತಾದವು ಭಾಗವಹಿಸುತ್ತಿವೆ.

ಭಾರತದಲ್ಲಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದಕ್ಕೆ ಭಾರತೀಯ ಸಂಸ್ಥೆಗಳು ಹಾಗೂ ವಿದೇಶಿ ವಿವಿಗಳ ನಡುವೆ ಸಂಶೋಧನೆ, ಪದವಿ ಹಾಗು ಸ್ನಾತಕೋತ್ತರ ಶಿಕ್ಷಣ, ಶಿಕ್ಷಕ ಮತ್ತು ವಿದ್ಯಾರ್ಥಿ ವಿನಿಮಯ, ದೂರ ಶಿಕ್ಷಣ ಮುಂತಾದ ವಿಷಯಗಳಲ್ಲಿ ಸಹಯೋಗ ಅಗತ್ಯ. ಆ ನಿಟ್ಟಿನಲ್ಲಿ ಸಮಾವೇಶ ನೆರವಾಗುತ್ತದೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ಎಸ್ ಬಿ ಅನುಮೋಲು.

ಮಾಹಿತಿಗೆ: 98440 06736, http: www.indus.org
 

ಇಂದು ಉದ್ಘಾಟನೆ
ಇಂಡಸ್ ಫೌಂಡೇಷನ್:
ಮಂಗಳವಾರ  ಇಂಡೋ ಗ್ಲೋಬಲ್ ಶೈಕ್ಷಣಿಕ ಸಮಾವೇಶ. ಅತಿಥಿಗಳು: ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ, ಕೆನಡಾ ವಿವಿಯ ಜಾಕ್ವಿಸ್ ಕೆ ಎಂ ಶೋರ್, ಇಂಡೋನೇಷ್ಯದ ಸುಲ್ತಾನ್ ಅಗಂಗ್ ಇಸ್ಲಾಮಿಕ್ ವಿವಿ ಅಧ್ಯಕ್ಷ ಲೋಡೆ ಮಸಿಹು ಕಮಾಲುದ್ದೀನ್, ಬೆಂಗಳೂರು ವಿವಿ ಕುಲಪತಿ ಡಾ. ಎನ್. ಪ್ರಭುದೇವ್, ವಿಟಿಯು ಕುಲಪತಿ ಎಚ್. ಮಹೇಶಪ್ಪ, ಸಿ.ಡಿ. ಅರಾ.
ಸ್ಥಳ: ಹೊಸೂರು ರಸ್ತೆ ನಿಮ್ಹಾನ್ಸ್ ಸಭಾಂಗಣ, ಬೆಳಿಗ್ಗೆ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT