ADVERTISEMENT

ನಗರದಲ್ಲಿ ಇಂದು - ಮೇ 15, ಮಂಗಳವಾರ

​ಪ್ರಜಾವಾಣಿ ವಾರ್ತೆ
Published 14 ಮೇ 2012, 19:30 IST
Last Updated 14 ಮೇ 2012, 19:30 IST
ನಗರದಲ್ಲಿ  ಇಂದು - ಮೇ 15, ಮಂಗಳವಾರ
ನಗರದಲ್ಲಿ ಇಂದು - ಮೇ 15, ಮಂಗಳವಾರ   

ಮೇ 15, ಮಂಗಳವಾರ
ವಾರ್ತಾ ಇಲಾಖೆ: ಜ್ಞಾನಜ್ಯೋತಿ ಸಂಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ. ಉದ್ಘಾಟನೆ- ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ, ಅಧ್ಯಕ್ಷತೆ- ಶಾಸಕ ರೋಷನ್ ಬೇಗ್, ಸಾರಿಗೆ ಸಚಿವ ಆರ್. ಅಶೋಕ್, ಚಲನಚಿತ್ರ ಅಕಾಡಮಿ ಅಧ್ಯಕ್ಷೆ ತಾರಾ ಅನುರಾಧ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ವಿ. ಚಂದ್ರಶೇಖರ್. ಸಂಜೆ 5.30.

ರಾಜ್ಯ ನೌಕರರ ಮತ್ತು ಕಾರ್ಮಿಕರ ಕೇಂದ್ರ ಕನಕ ಸಮಿತಿ, ಕನಕಶ್ರೀ ಗೃಹ ನಿರ್ಮಾಣ ಸಹಕಾರ ಸಂಘ:  ಸರ್ ಪುಟ್ಟಣ ಚೆಟ್ಟಿ ಪುರಭವನ, ಜೆ. ಸಿ. ರಸ್ತೆ. ಅಭಿನಂದನಾ ಸಮಾರಂಭ. ಸಾನ್ನಿಧ್ಯ- ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಉದ್ಘಾಟನೆ- ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಅಧ್ಯಕ್ಷತೆ- ಸಮಿತಿಯ ಮುಖ್ಯಸ್ಥ ಟಿ. ಬಿ. ಬಳಗಾವಿ, ಅಭಿನಂದನೆ- ಡಿ. ವೆಂಕಟೇಶ ಮೂರ್ತಿ, ಸನ್ಮಾನ- ನಿವೃತ್ತ ಐಎಎಸ್ ಅಧಿಕಾರಿಗಳಾದ ಎಸ್. ಪುಟ್ಟಸ್ವಾಮಿ, ಜಿ. ಎಚ್. ಪುಟ್ಟಹಲಗಯ್ಯ, ಅತಿಥಿಗಳು- ಮಾಜಿ ಸಚಿವ ಎಚ್. ಎಂ. ರೇವಣ್ಣ, ಎಂ. ನಾಗರಾಜ್, ಕೆ. ಎಂ. ರಾಮಚಂದ್ರಪ್ಪ, ಸಂಜೆ 5.30.

ಮಕ್ಕಳ ಮಂಟಪ: ಗಂಗಮ್ಮ ಹೊಂಬೇಗೌಡ ಬಾಲಕಿಯರ ಪ್ರೌಢಶಾಲೆ ಆವರಣ, ಹೊಂಬೇಗೌಡ ನಗರ. ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ. ಅಧ್ಯಕ್ಷತೆ- ಹೊಂಬೇಗೌಡ ಶಿಕ್ಷಣ ಸಂಸ್ಥೆಯ ಖಜಾಂಚಿ ಜಗದೀಶ ರೆಡ್ಡಿ, ಅತಿಥಿಗಳು- ಹರಿದಾಸ ಸಾಹಿತ್ಯ ತಜ್ಞೆ ಡಾ. ಅನಸೂಯ ದೇವಿ, ಹಿನ್ನಲೆ ಗಾಯಕಿ ರಮಾ ಅರವಿಂದ, ಮುಖ್ಯೋಪಾಧ್ಯಾಯ ಕೆ. ರಾಮಯ್ಯ, ಸಿ. ಎಂ. ಕೃಷ್ಣಾರೆಡ್ಡಿ. ಸಂಜೆ 5.30.

ಇಂಟರ್‌ನ್ಯಾಶನಲ್ ಇಂಟಿಗ್ರಿಟಿ, ಸ್ಪೇಸ್ ಅಂಡ್ ಫ್ರೆಂಡ್‌ಶಿಪ್ ಸೊಸೈಟಿ: ಡ್ಯೂ ಡ್ರಾಪ್ಸ್ ಹೋಟೆಲ್, ಪ್ಲಾಟ್‌ಫಾರ್ಮ್‌ ರೋಡ್, ಶೇಷಾದ್ರಿಪುರ. ಕಾರ್ಮಿಕ ದಿನಾಚರಣೆ ಅಂಗವಾಗಿ `ಜಾಗತಿಕ ಹಣಕಾಸು ಹಿಂಜರಿತದಿಂದ ಭಾರತೀಯ ಕೈಗಾರಿಕೆಗಳ ಮೇಲಾದ ಪರಿಣಾಮ~ ಕುರಿತು ಚರ್ಚಾಕೂಟ. ಅತಿಥಿಗಳು- ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್, ಸಚಿವ ವಿ. ಸೋಮಣ್ಣ, ಸಚಿವ ಬಾಲಚಂದ್ರ ಎಲ್. ಜಾರಕಿಹೊಳಿ. ಸಂಜೆ 5.

ಸಾಂಸ್ಕೃತಿಕ ಕಾರ್ಯಕ್ರಮಗಳು
ಹಳ್ಳಿ ಜನಪದ ಸಹೃದಯ ಕಲಾವೇದಿಕೆ: ಕನ್ನಡ ಭವನ, ಜೆ.ಸಿ.ರಸ್ತೆ. ವೇದಿಕೆ ಉದ್ಘಾಟನೆ ಹಾಗೂ ಜನಪದ ಕ್ಷೇತ್ರಕ್ಕೆ ಕಾಲಿರಿಸಿದ ಕಲಾವಿದರ ಬೆಳ್ಳಿಹೆಜ್ಜೆ ನೆನಪಿನ ಸಾಂಸ್ಕೃತಿಕ ಸಮಾರಂಭ. ಉದ್ಘಾಟನೆ: ಶಾಸಕ ಜೆ.ನರಸಿಂಹಯ್ಯ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಬೆಂಗಳೂರು ನಗರ ಕಸಾಪ ಅಧ್ಯಕ್ಷ ಟಿ.ತಿಮ್ಮೇಶ್, ಬೆಂಗಳೂರು ಗ್ರಾಮಾಂತರ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ಅವರಿಗೆ ಸನ್ಮಾನ. ಪ್ರಾಸ್ತಾವಿಕ ನುಡಿ: ಕೆ.ಆರ್. ಅಶ್ವತ್ಥನಾರಾಯಣ್. ಅಧ್ಯಕ್ಷತೆ: ಸಚಿವ ವರ್ತೂರು ಪ್ರಕಾಶ್.
ನಂತರ ಎಂ.ಸಿ. ಪ್ರಭುಸ್ವಾಮಿ ತಂಡದಿಂದ ಕಂಸಾಳೆ, ವಿನುತಾ ಸುರೇಶ್ ತಂಡದಿಂದ ಜನಪದ, ಎಚ್.ಎಲ್. ದೇವರಾಜು ತಂಡದಿಂದ ಕ್ರಾಂತಿಗೀತೆಗಳು, ಮೈಲಾರಪ್ಪ ತಂಡದಿಂದ ತಮಟೆ ವಾದನ, ಸಾದಿಕ್ ಬಾಗಲೂರು ಮತ್ತು ಹಾಡೋನಹಳ್ಳಿ ಗೋವಿಂದರಾಜು ತಂಡದಿಂದ ಜಾನಪದ ನೃತ್ಯ ಗಾಯನ. ಸಂಜೆ 5.

ರಂಗಶಂಕರ: ಜೆ.ಪಿ.ನಗರ, 2ನೇ ಹಂತ. ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ತಂಡದಿಂದ `ಬುಡ್ಗ ನಾದ~ ನಾಟಕ ಪ್ರದರ್ಶನ. (ರಚನೆ; ಬಾಲಗುರುಮೂರ್ತಿ, ನಿರ್ದೇಶನ; ಸುರೇಶ್ ವರ್ತೂರು, ಸಂಗೀತ: ರಾಜಪ್ಪ ಕೋಲಾರ). ಸಂಜೆ 7.30.
ಬೆಂಗಳೂರು ಮೋಹನ್ ವಾದ್ಯಗೋಷ್ಠಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಕನ್ನಡದ ಹಬ್ಬ. ರಂಗಭೂಮಿ, ಸಮಾಜ ಸೇವಕರಿಗೆ ಅಭಿನಂದನಾ ಸಮಾರಂಭ. ನಂತರ ಕನ್ನಡದ ಹಳೆಯ ಚಲನಚಿತ್ರಗೀತೆಗಳ ಗಾಯನ. ಸಂಜೆ 6.30.

ಧಾರ್ಮಿಕ ಕಾರ್ಯಕ್ರಮಗಳು
ಕದಿರೇನಹಳ್ಳಿ ಗ್ರಾಮದೇವತೆಗಳ ಅಭಿವೃದ್ಧಿ ಸಂಘ: ಕದಿರೇನಹಳ್ಳಿ, ಬನಶಂಕರಿ 2ನೇ ಹಂತ. ಗ್ರಾಮದೇವತೆಗಳ ಜಾತ್ರಾ ಮಹೋತ್ಸವ (ಊರಹಬ್ಬ). ಬೆಳಿಗ್ಗೆ 10ಕ್ಕೆ ಖಾನೆ ಮುನೇಶ್ವರಸ್ವಾಮಿಗೆ ತಂಬಿಟ್ಟಿನ ಆರತಿ, ಸಪ್ಲಮ್ಮದೇವಿ, ಕದಿರೇನಹಳ್ಳಿ ಮುಖ್ಯರಸ್ತೆ ರಣಧೀರ ಕಂಠೀರವ ರಸ್ತೆಯ ಗುಂಡು ಮನೇಶ್ವರ ಸ್ವಾಮಿ ಮತ್ತು ಕಾಟೇರಮ್ಮದೇವಿ ಮತ್ತು ಹಟ್ಟಿಲಕ್ಕಮ್ಮದೇವಿ ಹಾಗೂ ಜಲದಿಗೆರೆ ಅಮ್ಮ, ಅವಲಮ್ಮ ಮತ್ತು ಮಹದೇಶ್ವರಮ್ಮ ದೇವಿಗೆ ತಂಬಿಟ್ಟಿನ ಆರತಿ ಹಾಗೂ ಕೊಂಡ ಹಾಯುವ ಕಾರ್ಯಕ್ರಮ.
ಪರಮಾರ್ಥ ವಿಚಾರ ಸಂಘ ಟ್ರಸ್ಟ್: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ, ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಸಮನ್ವಯ ಶಾಂಕರ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 7.45.

ಶಂಕರ ಜಯಂತಿ ಮಂಡಳಿ: ಶಂಕರ ಕೃಪಾ, ಶಂಕರಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಕೆ.ಜಿ.ಸುಬ್ರಾಯ ಶರ್ಮಾ ಅವರಿಂದ `ಮಾಂಡೂಕ್ಯೋಪನಿಷತ್~ ಕುರಿತು ಪ್ರವಚನ. ಸಂಜೆ 6.

ಸಾಯಿ ಸತ್ಸಂಗ ಸೇವಾಸಮಿತಿ: ಶಿವಂ ಸಭಾಂಗಣ, 10ನೇ ಕ್ರಾಸ್, 16ನೇ ಮುಖ್ಯ ರಸ್ತೆ, ಪದ್ಮನಾಭ ನಗರ. ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಂದ `ಭಾಗವತ ಸಪ್ತಾಹ~ ಕುರಿತು ಪ್ರವಚನ. ಸಂಜೆ 6.

ಹರಿದಾಸ ಸಂಪದ ಟ್ರಸ್ಟ್: ಗಾಯನ ಸಮಾಜ, ಕೆ.ಆರ್.ರಸ್ತೆ, ಹರಿದಾಸ ಹಬ್ಬ ಕಾರ್ಯಕ್ರಮದಲ್ಲಿ ಸಂಜೆ 5ಕ್ಕೆ ರಘೋತ್ತಮಾಚಾರ್ ನಾಗಸಂಪಿಗೆ ಅವರಿಂದ ಉಪನ್ಯಾಸ, ಸಂಜೆ 6.30ಕ್ಕೆ ವಾಣಿಶ್ರೀ ಕುಲಕರ್ಣಿ ಅವರಿಂದ ದಾಸವಾಣಿ.

ದೇವಗಿರಿ ಶ್ರೀ ಗುರು ಸೇವಾ ಸಮಿತಿ: 24ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಅಶೋಕಾಚಾರ್ಯ ಅವರಿಂದ `ಶ್ರೀ ಕೃಷ್ಣಾಮೃತ ಮಹಾರ್ಣವ~ ವಿಷಯದ ಕುರಿತು ಪ್ರವಚನ. ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.