ADVERTISEMENT

ನತ್ತು ಇಷ್ಟವೆಂದ ರಾಣಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಯಶ್ ಚೋಪ್ರಾ ನಿವೃತ್ತಿಯಿಂದ ನಟನಟಿಯರಿಗೆ ತುಂಬಲಾರದ ಹಾನಿಯಾಗಲಿದೆ. ಅವರ ನಿರ್ದೇಶನದಲ್ಲಿ ಅವರ ಮಮತೆ ಹಾಗೂ ವಾತ್ಸಲ್ಯ ಉಣ್ಣದವರು ಜೀವನದಲ್ಲಿ ಬಹು ಅಮೂಲ್ಯವಾದುದನ್ನು ಕಳೆದುಕೊಳ್ಳುತ್ತಾರೆ ಎಂದೆಲ್ಲ ರಾಣಿ ಮುಖರ್ಜಿ ಹೇಳಿದ್ದಾರೆ.

ಯಶ್ ಚೋಪ್ರಾ ನಿರ್ಮಾಣದ ಹಲವಾರು ಚಿತ್ರಗಳಲ್ಲಿ ನಟಿಸಿರುವ ರಾಣಿ, ಅವರ ನಿರ್ದೇಶನದ `ವೀರ್ ಝಾರಾ~ ಚಿತ್ರದಲ್ಲಿಯೂ ನಟಿಸಿದ್ದರು.

`ಯಶ್‌ಜಿ ಸೆಟ್‌ನಲ್ಲಿ ಎಲ್ಲ ನಟನಟಿಯರನ್ನು ಪ್ರೋತ್ಸಾಹಿಸುತ್ತಾರೆ. ತಮಗೇನು ಬೇಕು ಎನ್ನುವುದನ್ನು ಯಾವತ್ತಿಗೂ ಸ್ಪಷ್ಟಪಡಿಸುವುದಿಲ್ಲ. ಆದರೆ ನಾವು ಏನು ಕೊಡಬಲ್ಲೆವು ಎಂಬುದನ್ನು ಮಾತ್ರ ಇಡೀ ಸನ್ನಿವೇಶ ವಿವರಿಸಿ ಹೇಳುತ್ತಿದ್ದರು. ನಮ್ಮಳಗೆ ಆ ಪಾತ್ರ ಹುಟ್ಟುವಂತೆ ಮಾಡುತ್ತಿದ್ದರು. ಯಶ್ ನಿರ್ದೇಶನವೆಂದರೆ ಸಹಜವಾದ ನಟನೆಯನ್ನು ಕಲಿಯುವ ಸಂಸ್ಥೆ ಇದ್ದಂತೆ~ ಎಂದು ರಾಣಿ ಮುಖರ್ಜಿ ಮೆಚ್ಚುಗೆಯ ಮಾತುಗಳಿಗೆ ಪೂರ್ಣವಿರಾಮವಿರದಂತೆ ಮಾತನಾಡಿದ್ದಾರೆ.

`ಜಬ್ ತಕ್ ಹೈ ಜಾನ್~ ಚಿತ್ರದ ನಂತರ ನಿರ್ದೇಶಿಸುವುದಿಲ್ಲ ಎಂಬ ಯಶ್‌ಜಿ ಅವರ ತೀರ್ಮಾನ ಕೇಳಿ ರಾಣಿಗೆ ಬೇಸರವಾಗಿದೆಯಂತೆ. 

“ಯಶ್ ನಮ್ಮನ್ನು ಯಾವತ್ತಿಗೂ ಮಾನಿಟರ್ ಮೇಲೆ ನೋಡುತ್ತಿರಲಿಲ್ಲ. ನಮ್ಮ ಮುಖಭಾವವನ್ನು ಕ್ಯಾಮೆರಾ ಹಿಂದೆ ನಿಂತು ನಿರುಕಿಸುತ್ತಿದ್ದರು. ಕೆಲವೊಮ್ಮೆ ನಮಗೆ ಸಮಾಧಾನವಾಗದಿದ್ದರೂ ಅವರು ಮಾತ್ರ `ಬಡಿಯಾ ಬೇಟೆ~ ಎಂದೇ ಪ್ರೋತ್ಸಾಹಿಸುತ್ತಿದ್ದರು. ಆ ವಾತ್ಸಲ್ಯಮಯ ನಿರ್ದೇಶನದ ಬಾಂಧವ್ಯ ಎಲ್ಲರೊಂದಿಗೆ ಬೆಳೆಯುವುದಿಲ್ಲ” ಎಂದೆಲ್ಲ ರಾಣಿ ಹೇಳಿದ್ದಾರೆ.

ಲಾವಣಿ ಲುಕ್‌ನ ಐಟಂ ನೃತ್ಯಗಳಲ್ಲಿ ಮಿಂಚುತ್ತಿರುವ ರಾಣಿಗೆ ಮರಾಠಿಗರ ಲಾವಣಿ, ನತ್ತು, ಭೊರಮಾಳದ ಸರ ಇಷ್ಟವಾಯಿತಂತೆ. ಸಾಂಪ್ರದಾಯಿಕ ಹಾಗೂ ಜಾನಪದ ನೃತ್ಯವೊಂದರಲ್ಲಿ ಇಷ್ಟೊಂದು ಗ್ಲಾಮರ್ ಹಾಗೂ ಶೃಂಗಾರ ಅಡಗಿದೆ ಎಂಬುದು `ಅಯ್ಯಾ~ ಚಿತ್ರದಲ್ಲಿ ನಟಿಸಿದ ನಂತರವೇ ತಿಳಿದು ಬಂದಿದೆಯಂತೆ ರಾಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.