ADVERTISEMENT

ನರ್ಗಿಸ್‌ ಫಕ್ರಿ ಸ್ವಂತ ಬಿಕಿನಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ಬಿಂದಾಸ್‌ ನಟನೆಯಿಂದ ಹದಿಹರೆಯಗಳಿಗೆ ಕಿಚ್ಚು ಹಚ್ಚಿರುವ ಬಾಲಿವುಡ್‌ ನಟಿ ನರ್ಗಿಸ್‌ ಫಕ್ರಿ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ ‘ಮೈ ತೇರಾ ಹೀರೊ’ ಚಿತ್ರದಲ್ಲಿ ಬಿಕಿನಿ ತೊಟ್ಟಿದ್ದಾರೆ.ಆದರೆ ಈ ಬಿಕಿನಿ ಅವರದೇ ವಾರ್ಡ್‌ರೋಬ್‌ ಸಂಗ್ರಹದಿಂದ ಖುದ್ದು ಅವರೇ ಆರಿಸಿಕೊಂಡಿದ್ದು ಅನ್ನೋದು ಸುದ್ದಿ.

ಈ ಚಿತ್ರದ ಒಂದು ಹಾಡಿಗೆ ಬಿಕಿನಿ ತೊಡಬೇಕಾಗುತ್ತದೆ ಎಂದು ತಿಳಿದಾಗ ಅವರು ಆನಂದತುಂದಿಲರಾದರಂತೆ. ಮಾತ್ರವಲ್ಲ, ತಾವು ಇತ್ತೀಚಿಗಷ್ಟೇ ಖರೀದಿಸಿದ ನೇರಳೆ ಬಣ್ಣದ ಬಿಕಿನಿಯನ್ನೇ ತೊಡುವುದಾಗಿ ಒತ್ತಾಯಿಸಿದರಂತೆ. ಇಷ್ಟು ಸಾಲದು ಎಂಬಂತೆ ಚಿತ್ರದ ಸ್ಟೈಲಿಸ್ಟ್‌ ವಿಭಾಗದವರನ್ನೂ ಕರೆದು ತಮ್ಮ ಬಿಕಿನಿಯನ್ನು ತೋರಿಸಿ ಇದು ಹೇಗಿದೆ ನೋಡಿ ಎಂದು ಕೇಳಿಯೇಬಿಟ್ಟರಂತೆ. ಅವರೂ ಪ್ರತ್ಯಕ್ಷ ಕಂಡ ಮೇಲೆ ಓಕೆ ಅಂದರಂತೆ.

ಮೈಚಳಿ ಬಿಟ್ಟು ನಟಿಸಿ ‘ರಾಕ್‌ಸ್ಟಾರ್‌’ ಎಂದೇ ಕರೆಸಿಕೊಳ್ಳುತ್ತಿರುವ ನರ್ಗಿಸ್‌ ಅಂತೂ ಇಂತೂ ಬಿಕಿನಿಯಲ್ಲಿ ಪ್ರೇಕ್ಷಕರಲ್ಲಿ ಕಾವೇರಿಸಲಿದ್ದಾರೆ. ಏಪ್ರಿಲ್‌ 4ರಂದು ಈ ಚಿತ್ರ ತೆರೆಕಾಣಲಿದೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.