ADVERTISEMENT

ನಾಗರಾಜನ್ ಅವರಿಗೆ ‘ಸ್ವರಲಯಶೃಂಗ’ ಗೌರವ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST
ವಿದ್ವಾನ್ ಡಿ.ವಿ.ನಾಗರಾಜನ್
ವಿದ್ವಾನ್ ಡಿ.ವಿ.ನಾಗರಾಜನ್   

ರಾಜ್ಯದ ಸಂಗೀತ ಶಾಲೆಗಳಲ್ಲಿ ಜಯನಗರದ ‘ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ’ಗೆ ತನ್ನದೇ ಆದ ಹೆಸರು ಇದೆ. ವಿದ್ವಾನ್‌ ಎಚ್‌.ಎಸ್‌.ಸುಧೀಂದ್ರ ಹಾಗೂ ವಿದ್ವಾನ್‌ ಬಾಲು ರಘುರಾಮನ್‌ ಅವರು 1999ರಲ್ಲಿ ಆರಂಭಿಸಿದ ಈ ಶಾಲೆಯ ವಾರ್ಷಿಕೋತ್ಸವ ಸಂಗೀತದ ಹಬ್ಬವೂ ಹೌದು. ಈ ಬಾರಿ ಶಾಲೆಗೆ 18ರ ಸಂಭ್ರಮ.

ಶಾಲೆಯು ಯುವ ಹಾಗೂ ಉದಯೋನ್ಮುಖ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಅವರ ಕಲಿಕೆಯ ದೃಷ್ಟಿಯಿಂದ ಹಿರಿಯ ಕಲಾವಿದರಿಂದ ಸಂಗೀತ ಕಛೇರಿಗಳನ್ನು ಆಯೋಜಿಸುತ್ತದೆ. ಹಾಡುಗಾರಿಕೆ ಜೊತೆಗೆ ವಾದ್ಯ ಸಂಗೀತವನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.

ಸ್ವರ ಕಲ್ಪನೆ, ರಾಗಾಲಾಪ, ಸಾಹಿತ್ಯ ಮತ್ತು ಲಯದ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇಲ್ಲಿ ಸಂಗೀತ ಕಲಿಕೆಗೆ ಸಂಬಂಧಿಸಿದ ಸಿ.ಡಿ.ಗಳು, ಗ್ರಂಥಾಲಯವೂ ಇಲ್ಲಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಿಷ್ಯವೇತನ ಪಡೆದಿದ್ದಾರೆ. ಆಕಾಶವಾಣಿ, ದೂರದರ್ಶನ ಕಲಾವಿದರಾಗಿದ್ದಾರೆ.

ADVERTISEMENT

ಸಂಗೀತ ಸೇವೆಯ ಜತೆಗೆ, ‘ಕಲಾಶ್ರಿತಕಲ್ಪಕ’ ಎನ್ನುವ ಕಲಾವಿದರ ಆರೋಗ್ಯ ನಿಧಿಯನ್ನು ಈ ಸಂಸ್ಥೆ ನಿರ್ವಹಿಸುತ್ತಿದೆ. ಕಲೆಯನ್ನೇ ನಂಬಿ ಬದುಕು ಸಾಗಿಸುತ್ತಿರುವ ಬಡ ಕಲಾವಿದರಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶದಿಂದ ಸ್ಥಾಪಿಸಿರುವ ನಿಧಿ ಇದು.

ಸಂಸ್ಥೆಯ 18ನೇ ವಾರ್ಷಿಕೋತ್ಸವ ಅ.27ರಂದು ಆರಂಭವಾಯಿತು. ಅ.29ರವರೆಗೂ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಥೆಯು ನೀಡುವ ‘ಸ್ವರಲಯಶೃಂಗ’ ‍ಬಿರುದಿಗೆ ಈ ಬಾರಿ ವಿದ್ವಾನ್‌ ಡಿ.ವಿ.ನಾಗರಾಜನ್‌ ಪಾತ್ರರಾಗಿದ್ದಾರೆ.

ಶನಿವಾರ 28ರಂದು ಬೆಳಗ್ಗೆ 9.30 ರಿಂದ 9.45ರವರೆಗೆ ‘ತಾಳವಾದ್ಯ’ ಕಾರ್ಯಕ್ರಮವಿದೆ. ಕಲಾವಿದರಾದ ಬಾಲಸುಬ್ರಹ್ಮಣ್ಯಂ, ಶ್ರೀಗಣೇಶ್, ಶ್ರೀಹರಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 10ರಿಂದ 11ರವರೆಗೆ ‘ಸಂಗೀತ ಮತ್ತು ಆಧ್ಯಾತ್ಮ ‘ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಕೆ.ಎನ್‌.ವೆಂಕಟನಾರಾಯಣ ನೀಡಲಿದ್ದಾರೆ. ಬೆಳಿಗ್ಗೆ 11.15ರಿಂದ 11.30ರವರೆಗೆ ‘ತಾಳವಾದ್ಯ’ ಕಾರ್ಯಕ್ರಮವಿರುತ್ತದೆ.

ಲಲಿತ್‌ ಶ್ರೀಕರ, ಕೆ.ಎಂ.ಲಿಖಿತ್‌, ಎಂ.ಅಭಿರಾಮ್‌, ಬಿ.ಜೆ.ಶ್ರೀನಿವಾಸ, ತೇಜಸ್‌, ಶ್ರೀವತ್ಸ್‌, ಮನಮೋಹನ್‌, ಜ್ಯೋತ್ಸ್ನಾಹೆಬ್ಬಾರ್‌ ಪಾಲ್ಗೊಳ್ಳಲಿದ್ದಾರೆ. ವಿದ್ವಾನ್‌ ಕೆ.ಯು.ಜಯಚಂದ್ರರಾವ್‌ ಮತ್ತು ವಿದ್ವಾನ್‌ ಎಸ್‌.ಅನಿರುದ್ಧ ಭಟ್‌ ಅವರುಗಳು ‘ವಿಶೇಷ ಲಯ ವಿನ್ಯಾಸ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಂಜೆ 4ರಿಂದ 4.15ರವರೆಗೆ ಆಶಿಶ್‌ ಗುರ್ಜಾರ್‌, ಎಸ್‌.ನಿರಂಜನ್, ಧೃವ, ಡಿ.ಶ್ರಿನಿಕೇತ್‌, ಬಿ.ಎಸ್‌ ಶಶಿಧರ, ನರಸಿಂಹಮೂರ್ತಿ ರಾವ್‌, ಎಂ.ನಾಗರಾಜ್‌ ಅವರುಗಳು ‘ತಾಳವಾದ್ಯ’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಂಜೆ 4.30 ರಿಂದ 5.30ರವರೆಗೆ ಗಾಯನ ಕಾರ್ಯಕ್ರಮವಿದೆ.

ಗಾಯನ– ಎ ದತ್ತಪ್ರಸಾದ್‌, ಮೃದಂಗ– ಕೆ. ಅಭಿಜಿತ್‌, ಪಿಟೀಲು– ಕೃತಿಕ್‌ ಕೌಷಿಕ್‌, ಮೋರ್ಚಿಂಗ್– ಕೆ.ಎಂ ಲಿಖಿತ್‌. ಸಂಜೆ 6ರಿಂದ 8.45ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ. ಗಾಯನ– ವಿದ್ವಾನ್‌ ಕುನ್ನಕುಡಿ ಎಂ.ಬಾಲಮುರಳಿ ಕೃಷ್ಣ, ಪಿಟೀಲು– ವಿದ್ವಾನ್‌ ಬಿ.ವಿಠ್ಠಲ್‌ ರಂಗನ್‌, ಮೃದಂಗ– ವಿದ್ವಾನ್‌ ಆನೂರು ಅನಂತ ಕೃಷ್ಣ ಶರ್ಮ, ಘಟ– ವಿದ್ವಾನ್‌ ವಾಳಪಲ್ಲಿ ಕೃಷ್ಣಕುಮಾರ್.

ಭಾನುವಾರ 29ರಂದು ಬೆಳಿಗ್ಗೆ 9.30ರಿಂದ 9.45ರವರೆಗೆ ‘ತಾಳವಾದ್ಯ’ ಕಾರ್ಯಕ್ರಮವನ್ನು ಕಿಷನ್‌ ಕೌಷಿಕ್‌, ರಕ್ಷಿತ್ ಶರ್ಮಾ, ಎ.ಶ್ರೀರಾಮ್‌, ಹರಿಶಂಕರ್‌ ಮೆನನ್, ಅಭಿಜಿತ್‌ ಮತ್ತು ಕೆ.ಪಿ.ಪ್ರಸಾದ್‌ ನಡೆಸಿಕೊಡಲಿದ್ದಾರೆ.

ಬೆಳಿಗ್ಗೆ 10ರಿಂದ 11ರವರಗೆ ‘ವ್ಯಕ್ತಿ, ಅಭಿವ್ಯಕ್ತಿ ಮತ್ತು ಭಕ್ತಿ’ ಕುರಿತ ಪ್ರಾತ್ಯಕ್ಷಿಕೆ ಮತ್ತು ‘ಸಂಧ್ಯಾವಂದನಂ ಶ್ರೀನಿವಾಸ ರಾವ್‌ ಅವರ ಕೊಡುಗೆಗಳ ಬಗ್ಗೆ ಒಳನೋಟ’ ಕಾರ್ಯಕ್ರಮವನ್ನು ಸಂಗೀತ ತಜ್ಞ ಎಸ್‌.ಮಧ್ವಮುನಿ ರಾವ್‌ ನಡೆಸಿಕೊಡಲಿದ್ದಾರೆ. ಬೆಳಗ್ಗೆ 11.15ರಿಂದ 12.15ರವರೆಗೆ ‘ಕರ್ನಾಟಕ ಸಂಗೀತದಲ್ಲಿ ಸಾಧನೆಯ ಮಹತ್ವ ಮತ್ತು ಇದರಿಂದ ಇತರೆ ಸಂಗೀತ ಪ್ರಕಾರಗಳಲ್ಲಿ ಕೌಶಲ’ ಕುರಿತು ವಿದುಷಿ ಚಂದನಬಾಲಾ ಜಿ.ಕಲ್ಯಾಣ್‌ ಅವರಿಂದ ಪ್ರಾತ್ಯಕ್ಷಿಕೆ ಇದೆ.

ಸಂಜೆ 4 ರಿಂದ 4.15ರ ನಡುವೆ ಆದಿತ್ಯ ಬಿ.ಪ್ರಹ್ಲಾದ್‌, ಅನರ್ಘ್ಯ ವೆಂಕಟೇಶ್‌, ಬಿ.ಎಸ್‌.ಸರ್ವಜಿತ್‌, ಆರ್‌.ಸುಧನ್ವ, ಎ.ದತ್ತಪ್ರಸಾದ್‌, ಎಸ್‌.ಎನ್‌.ಪ್ರಜ್ವಲ್‌, ಸುಬ್ಬರಾವ್‌ ಅವರಿಂದ ‘ತಾಳವಾದ್ಯ’ ಕಾರ್ಯಕ್ರಮವಿದೆ. 4.30ರಿಂದ 5.30ರವರೆಗೆ ಗಾಯನ ಕಾರ್ಯಕ್ರಮ.

ಗಾಯನ– ವಿದುಷಿ ಅನಘಾ ಯೋಗಾನಂದ್‌, ಪಿಟೀಲು– ವಿದ್ವಾನ್ ವೈಭವ್‌ ರಮಣಿ, ಮೃದಂಗ– ವಿದ್ವಾನ್‌ ವಿಷ್ಣುವರ್ಧನ, ಘಟ– ವಿದ್ವಾನ್‌ ಎನ್‌ ಫಣೀಂದ್ರ ಕಾರ್ಯಕ್ರಮ ನೀಡಲಿದ್ದಾರೆ. ಸಂಜೆ 6ರಿಂದ 8.45ರವರೆಗೆ ಗಾಯನ ಕಾರ್ಯಕ್ರಮವಿದೆ. ಗಾಯನ– ವಿದ್ವಾನ್‌ ಆರ್.ಸೂರ್ಯಪ್ರಕಾಶ್‌, ಪಿಟೀಲು– ಎಂ.ಆರ್‌.ಶ್ರೀನಿಧಿ, ಮೃದಂಗ– ವಿದ್ವಾನ್‌ ಶ್ರೀಮುಷ್ಣಂ ವಿ.ರಾಜಾರಾವ್‌, ಘಟ– ವಿದ್ವಾನ್‌ ತಿರುಚ್ಚಿ ಎಸ್‌.ಕೃಷ್ಣಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.