ADVERTISEMENT

ನಾಳೆಯಿಂದ ‘ತೇಜಸ್ವಿ ಬಿಂಬ’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರಿದ್ದಿದ್ದರೆ 75ನೇ ಸಂವತ್ಸರಕ್ಕೆ ಕಾಲಿಡುತ್ತಿದ್ದರು. ಅವರ ದಿಟ್ಟ ಬರವಣಿಗೆ, ಛಾಯಾಗ್ರಹಣ, ಚರ್ಚೆ, ಪರಿಸರ ಮತ್ತು ಜೀವವೈವಿಧ್ಯ ಕುರಿತ ನಿಷ್ಠುರ ಮಾತುಗಳಿಗೆ ಇನ್ನಷ್ಟು ಜವ್ವನ ಬರುತ್ತಿತ್ತು.

ಅವರನ್ನು ಹತ್ತಿರದಿಂದ ಕಂಡವರಿಗೆ, ಬಲ್ಲವರಿಗೆ ಯಾವುದೇ ಕ್ಷೇತ್ರಕ್ಕೆ ಇಣುಕಿದರೂ ತೇಜಸ್ವಿಯವರದೇ ಬಿಂಬ ಕಾಣಿಸುವುದು ಸಹಜವೇ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸೆ. ಎಂಟರಿಂದ 14ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದೆ.

ತೇಜಸ್ವಿ ಅವರ ಅಪ್ರಕಟಿತ ಕೃತಿ ‘ಕಾಡು ಮತ್ತು ಕ್ರೌರ್ಯ’ ಬಿಡುಗಡೆ, ವಿಶ್ವ ಪರಿಸರ ದಿನ ಕೈಪಿಡಿಗಳ ಬಿಡುಗಡೆ, ಪರಿಸರ ಸಂರಕ್ಷಣೆ ಕುರಿತು ತಜ್ಞರು ರಚಿಸಿರುವ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಚಿಂತನ ಮಂಥನ ಹಾಗೂ ಗೀತೆಗಳ ಗಾಯನ ಕಾರ್ಯಕ್ರಮವಿದೆ.

ಭಾನುವಾರ ಸಂಜೆ 4ಕ್ಕೆ ಉದ್ಘಾಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ. ಕೃತಿ ಬಿಡುಗಡೆ: ಡಾ.ಚಂದ್ರಶೇಖರ ಕಂಬಾರ. ಅತಿಥಿ: ನಾಗೇಶ ಹೆಗಡೆ. ಅಧ್ಯಕ್ಷತೆ: ಡಾ. ಬಿ. ಎಲ್. ಶಂಕರ್. ನಂತರ ರಾಜಗುರು, ವರುಣ್ ಹಾಗೂ ಅಭಿಮನ್ಯು ಸಂಗಡಿಗರಿಂದ ಗೀತಗಾಯನ.
ಸೋಮವಾರ ಸಂಜೆ 6ಕ್ಕೆ ಚಿತ್ರಕಲಾ ಪ್ರದರ್ಶನ ಹಾಗೂ ತೇಜಸ್ವಿ ಕಥೆಗಳ ವಾಚನ.

ಮಂಗಳವಾರ ಸಂಜೆ 6ಕ್ಕೆ ನವಕರ್ನಾಟಕ ಪಬ್ಲಿಕೇಶನ್ಸ್ ಪ್ತಕಟಿಸಿರುವ ತೇಜಸ್ವಿ ಪರಿಸರ ಕಥಾಪ್ರಸಂಗ ನಾಟಕ ಕೃತಿ ಬಿಡುಗಡೆ-ಡಾ.ಕೆ. ಮರುಳಸಿದ್ದಪ್ಪ. ಅಧ್ಯಕ್ಷತೆ: ಪ್ರೊ.ಎಂ.ಎಚ್.ಕೃಷ್ಣಯ್ಯ, ಉಪಸ್ಥಿತಿ: ರಾಜಾರಾಂ. ನಂತರ ನಾಟಕ ಪ್ರದರ್ಶನ. ಕೃತಿಗೆ ರಂಗರೂಪ ಹಾಗೂ ನಿರ್ದೇಶನ ಅ.ನ. ರಾವ್ ಜಾಧವ್.

ಬುಧವಾರ ಸಂಜೆ 6ಕ್ಕೆ ಚಿತ್ರಕಲಾ ಪರಿಷತ್ ಆವರಣದಲ್ಲಿ ತೇಜಸ್ವಿ ಮತ್ತು ನಾನು ಕುರಿತು ಎಂ.ಎಸ್. ಆಶಾದೇವಿ ಅವರಿಂದ ಮಾತುಕತೆ. ಅಧ್ಯಕ್ಷತೆ: ಸಿ.ಎಸ್. ದ್ವಾರಕಾನಾಥ್. ನಂತರ  ಪ್ರಯೋಗರಂಗ ಅಭಿನಯದ ನಾಟಕ -‘ಯಮಳ ಪ್ರಶ್ನೆ’ ಪ್ರದರ್ಶನ. ರಚನೆ: ತೇಜಸ್ವಿ. ನಿರ್ದೇಶನ: ಕೆ.ವಿ. ನಾಗರಾಜಮೂರ್ತಿ.

ಇದೇ ವೇಳೆ (ಸಂಜೆ 6) ರವೀಂದ್ರ ಕಲಾಕ್ಷೇತ್ರದಲ್ಲಿ ರೂಪಾಂತರ ತಂಡದವರಿಂದ ಸಂಜೆ 6ಕ್ಕೆ ನಾಟಕ ‘ಜುಗಾರಿಕ್ರಾಸ್’ನ 75ನೇ ಪ್ರಸ್ತುತಿ. ನಿರ್ದೆಶನ: ನಟರಾಜ್ ಹೊನ್ನವಳ್ಳಿ. ಅಭಿನಯ: ಅಭಿನಯ ಬೆಂಗಳೂರು. ಸೆ. 12ರ ಗುರುವಾರ ಸಂಜೆ 6ಕ್ಕೆ ‘ಪರಿಸರ ಕಾವ್ಯ’ ಕಾರ್ಯಕ್ರಮ ಜರ್ಮನಿಯ ಟ್ಯಾಗೋರ್ ಪೀಠದ ಅಧ್ಯಕ್ಷ ಡಾ. ಎಚ್.ಎಸ್. ಡಾ.ಎಚ್.ಎಸ್. ಅವರಿಂದ ಉದ್ಘಾಟನೆ. ಅಧ್ಯಕ್ಷತೆ: ಡಾ.ಚಂದ್ರಶೇಖರ ಕಂಬಾರ. ಕಾವ್ಯವಾಚನ: ಮುಕುಂದರಾಜ್, ಡಾ.ಮಮತಾಸಾಗರ್, ಎಚ್.ಎಸ್. ಆರತಿ, ಸುಬ್ಬು ಹೊಲೆಯಾರ್, ಜಯಶ್ರೀ ಕಂಬಾರ, ಹೇಮಲತಾ ವಡ್ಡೆ, ತಾರಿಣಿ ಶುಭದಾಯಿನಿ, ಜಯಲಕ್ಷ್ಮೀ ಪಾಟೀಲ. ಗೀತ ಗಾಯನ: ವರುಣ್, ರಾಜಗುರು, ಅಭಿಮನ್ಯು. ಸ್ಥಳ: ಚಿತ್ರಕಲಾ ಪರಿಷತ್ತು.

ಶುಕ್ರವಾರ ಸಂಜೆ 6ಕ್ಕೆ ಪರಿಷತ್ತಿನಲ್ಲಿ ಗೀತಗಾಯನ: ಹೇಮಾ ಪ್ರಸಾದ್, ರಾಜೀವ್, ಸುಪ್ರೀತಾ ಮತ್ತು ಸಂಗಡಿಗರು. ನಂತರ ‘ಸಾಹಿತ್ಯ ಸಂಜೆ ಬಳಗ ರೂಪಿಸುವ ತೇಜಸ್ವಿ’. ಕೊನೆಯ ದಿನವಾದ ಸೆ. 14ರ ಶನಿವಾರ ಸಂಜೆ 6ಕ್ಕೆ ಪರಿಷತ್ತಿನಲ್ಲಿ ತೇಜಸ್ವಿ ನೋಟ -ಕಿರುಚಿತ್ರಗಳ ಪ್ರದರ್ಶನ.

‘ಹಾಯ್ ತೇಜಸ್ವಿ’ ನಿರ್ದೇಶನ ಮತ್ತು ಪರಿಕಲ್ಪನೆ ಜಿ.ಎನ್. ಮೋಹನ್ ಮತ್ತು ದಿನೇಶ್ ಕುಮಾರ್. ‘ತೇಜಸ್ವಿ ಮಾಯಾಲೋಕ’– ನಿರ್ದೇಶನ- ಕೃಪಾಕರ ಸೇನಾನಿ. ‘ತೇಜಸ್ವಿ ಇನ್ನಿಲ್ಲ’– ಜಿ.ಎನ್. ಮೋಹನ್.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.