ADVERTISEMENT

ನಿಧಿ ಶೇಷಾದ್ರಿ `ರಂಗಾಭಿವಂದನ'

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಚಿತ್ರಕಲಾ ನೃತ್ಯ ಶಾಲೆಯ ನಿರ್ದೇಶಕರಾದ ನಿಧಿ ಶೇಷಾದ್ರಿ ಸೋಮವಾರ ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ.ಆಶಾ ಮತ್ತು ಶೇಷಾದ್ರಿ ಅವರ ಪುತ್ರಿ ನಿಧಿ ಶೇಷಾದ್ರಿ. ಆರನೇ ವಯಸ್ಸಿನಿಂದಲೇ ನೃತ್ಯದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ನಿಧಿಯ ಪ್ರತಿಭೆಯನ್ನು ತಿದ್ದಿ ತೀಡಿದ್ದು ಖ್ಯಾತ ನೃತ್ಯ ಕಲಾವಿದ ಪಿ.ಪ್ರವೀಣ್ ಕುಮಾರ್.

ಭರತನಾಟ್ಯದ ಪ್ರಕಾರಗಳಲ್ಲಿ ಒಂದಾದ ಪಂದನಲ್ಲೂರು ಶೈಲಿಯ ನೃತ್ಯದಲ್ಲಿ ನಿಧಿ ನಾಟ್ಯಾಭ್ಯಾಸ ಪ್ರಾರಂಭಿಸಿದರು. ಕಳೆದ ಹತ್ತು ವರ್ಷಗಳಿಂದ ನೃತ್ಯ ಕಲಿಯುತ್ತಿರುವ ಅವರೀಗ ಕುಮಾರನ್ಸ್ ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಕ

ಳೆದ ವರ್ಷ ಬಹರೇನ್‌ನಲ್ಲಿ ನಡೆದ `ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ' ಸೇರಿದಂತೆ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾದ ಅಗ್ಗಳಿಗೆ ಇವರದ್ದು.ಶ್ರೀಧರ್, ಅನುರಾಧಾ ಶ್ರೀಧರ್, ಪಲ್ಲವಿ, ಅರುಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಸ್ಥಳ: ಎಡಿಎ ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 6.30

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.