ಫ್ಯಾಷನ್ ಕ್ಷೇತ್ರದಲ್ಲಿ ಪ್ರಖ್ಯಾತವಾಗಿರುವ ಜರ್ಮನಿ ಮೂಲದ ನಿವಿಯಾ ಸ್ಕೀನ್ ಕೇರ್‌ನಿಂದ ದೀಪಾವಳಿ ಪ್ರಯುಕ್ತ ಮೇಕ್ ಒವರ್ ಸೌಲಭ್ಯವನ್ನು ಒದಗಿಸುತ್ತಿದೆ. ನಟಿ ಪ್ರಿಯಾಂಕ ಉಪೇಂದ್ರ ಇದಕ್ಕೆ ಶುಕ್ರವಾರ ಚಾಲನೆ ನೀಡಿದರು.
ಭಾನುವಾರದ ವರೆಗೂ ಇಲ್ಲಿ ಸ್ಕಿನ್ ಅನಾಲಿಸಿಸ್, ಪರ್ಸನಾಲಿಟಿ ಟೆಸ್ಟ್, ಸ್ಕಿನ್ ಲಾಂಜ್ ಸೇವೆ ಉಚಿತ. ಆಧುನಿಕ ಜೀವನ ಶೈಲಿಯಿಂದ ಸ್ವಲ್ಪ ರಿಲ್ಯಾಕ್ಸ್ ಮತ್ತು ನ್ಯೂ ಲುಕ್ ಬಯಸುವ ಮನಸ್ಸು ನಿಮಗಿದ್ದರೆ ಇಲ್ಲಿ ವಿನೂತನ ಅನುಭವ ದೊರೆಯಲಿದೆ.
ಇದಲ್ಲದೆ ನಿವಿಯಾ ಮೈ ಸ್ಕಿನ್ ಮೋಮೆಂಟ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದರೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಗಾಯಕಿ ರೆಹಾನಾ ಸಂಗೀತ ಆಲಿಸುವ, ಖುದ್ದಾಗಿ ಭೇಟಿ ಮಾಡುವ ಅವಕಾಶ ದೊರೆಯಲಿದೆ.
ಸ್ಥಳ: ಗರುಡಾ ಮಾಲ್, ಮಾರ್ಗತ ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.