ADVERTISEMENT

ನೃತ್ಯದಲ್ಲಿ ಚಕ್ರೇಶ್ವರಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 13:50 IST
Last Updated 19 ಜನವರಿ 2011, 13:50 IST
ನೃತ್ಯದಲ್ಲಿ ಚಕ್ರೇಶ್ವರಿ
ನೃತ್ಯದಲ್ಲಿ ಚಕ್ರೇಶ್ವರಿ   

ಉದಯ ಕಲಾನಿಕೇತನ: ಗುರುವಾರ ಚೌಡೇಶ್ವರಿ ನಗರದಲ್ಲಿ ಕನ್ನಡ ಸೇನೆಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶದ ಅಂಗವಾಗಿ ಕಲಾನಿಕೇತನದ ಕಲಾವಿದರಿಂದ ಚೌಕ್ರೇಶ್ವರಿ (ನಿರ್ದೇಶನ: ರೇಣುಕಾಬಾಲಿ. ಸಾಹಿತ್ಯ: ಯೋಗೇಶ್ ಮಾಸ್ಟರ್. ಸಂಗೀತ: ಮನೋಹರ್. ಬೆಳಕು: ಮುಸ್ತಾಫ) ನೃತ್ಯರೂಪಕ.

ಬ್ರಹ್ಮಾಂಡ ಪುರಾಣ ಮತ್ತು ಕಾಳಿಕಾ ಪುರಾಣದಲ್ಲಿ ಪ್ರಸ್ತಾಪ ಮಾಡಿರುವ ಅಸುರ ಸಂಹಾರದ ಘಟನೆಗಳನ್ನು ಈ ನೃತ್ಯರೂಪಕದಲ್ಲಿ ಸಾಮಾಜಿಕ ದೃಷ್ಟಿಯಿಂದ ನೋಡಲಾಗಿದೆ. ಸಾಮಾನ್ಯ ಜೀವನ ನಡೆಸುತ್ತಿದ್ದ ಕುಟುಂಬದ ಹೆಣ್ಣು ಮಗಳೊಬ್ಬಳ ಕಥೆಯಂತೆ ತೆರೆದುಕೊಳ್ಳುವ ಚಕ್ರೇಶ್ವರಿ, ಅಧಿಕಾರ ಮದದಿಂದ ಮೆರೆಯುತ್ತಿದ್ದ ಅಸುರೀ ಪ್ರವೃತ್ತಿಯ ರಾಜನಿಗೆ ಎದುರಾಗಿ ನಿಲ್ಲುವಳು. ಮೃಗೀಯ ಗುಣಗಳ ಅರಸ ಮಹಿಷಾಸುರನನ್ನು ವಧಿಸುವಳು.

ಇಡೀ ಪ್ರಯೋಗ ಸುಪ್ತ ಮನಸ್ಸಿನ ಹೋರಾಟವನ್ನು ಬಿಂಬಿಸುತ್ತದೆ. ನಾಯಕಿಯು ಮನುಷ್ಯನ ಚೈತನ್ಯದ ಸಂಕೇತವಾದರೆ, ನಾಯಕ ಮನಸ್ಸಿನ ಸಂಕೇತವಾಗುತ್ತಾನೆ. ಅವರ ಸುತ್ತಮುತ್ತಲಿನ ಸ್ನೇಹಿತರು, ಹಿತೈಷಿಗಳು ಸಾಮಾಜಿಕ ಕಟ್ಟುಪಾಡುಗಳನ್ನು ಸೂಚಿಸುತ್ತಾರೆ. ಮಹಿಷಾಸುರ ಮತ್ತು ಚಿಕ್ಷುರಾಸುರ ಒಳಗಿನಮತ್ತು ಮೃಗೀಯ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತಾರೆ. ಅಂತಿಮವಾಗಿ ದೇವಿ ಆದಿಶಕ್ತಿ ಅಥವಾ ಅಸ್ತಿತ್ವದ ಚೈತನ್ಯವನ್ನು ಬಿಂಬಿಸುತ್ತಾಳೆ.

ಕಲಾವಿದರು: ರೇಣುಕಾಬಾಲಿ ಉದಯಕುಮಾರ್, ಡಿ. ಭಾಸ್ಕರ್, ಸುನೀಲ್ ಕುಮಾರ್, ನಿತಿನ್, ನವೀನ್ ಕುಮಾರ್, ಕೃಷ್ಣಾ ರಾವ್, ಗಿರೀಶ್, ಶಿವಪ್ರಸಾದ್, ಐಶ್ವರ್ಯ, ಅರ್ಪಿತಾ, ಯಶಸ್ವಿ.

ಸ್ಥಳ: ಪೊಲೀಸ್ ಚೌಕಿ, 50 ಅಡಿ ರಸ್ತೆ,
ಚೌಡೇಶ್ವರಿ ನಗರ, ಲಗ್ಗೆರೆ.
ಸಂಜೆ 7 ಗಂಟೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.