ADVERTISEMENT

ನೇಚರ್ ಕೊಡುಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ನೇಚರ್ ಕೊಡುಗೆ
ಒಂದು ಕಡೆ ಲಯಬದ್ಧವಾದ ಸಂಗೀತ. ಸಂಪೂರ್ಣ ಹಸಿರು ಬಣ್ಣಗಳಿಂದ ಕೂಡಿರುವ ಗೋಡೆಗಳು. ಎತ್ತನೋಡಿದರೂ ಪರಿಸರ ಕಾಳಜಿ ಇರುವಂತಹ ಸ್ಪಾ ಮತ್ತು ಬ್ಯೂಟಿ ಕಾಸ್ಮೆಟಿಕ್‌ಗಳ ದೊಡ್ಡ ಸಂಗ್ರಹ.

ಪಂಚಭೂತಗಳ ತತ್ವಗಳಿಂದ ಸಿದ್ಧಪಡಿಸಲಾಗಿರುವ ಈ ಸ್ಪಾ ನಿಮಗೆ ಪರಿಸರದ ಮಧ್ಯೆ ಇರುವಂತಹ ಅನುಭವ ನೀಡಲಿದೆ.

ಈಗಾಗಲೇ ಐದು ಮೆಟ್ರೊಗಳಲ್ಲಿ ತನ್ನ ಶಾಖೆ ಹೊಂದಿರುವ ನೇಚರ್ ಕಂಪನಿಯು ಇದೇ ಪ್ರಥಮ ಬಾರಿಗೆ ಫಿನಿಕ್ಸ್ ಮಾಲ್‌ನಲ್ಲಿ ಸ್ಪಾ ಮತ್ತು ಬ್ಯೂಟಿ ಕಾಸ್ಮೆಟಿಕ್ ಸೆಲೂನ್ ಪ್ರಾರಂಭಿಸಿದೆ. ಇಲ್ಲಿರುವ ಸ್ಪಾನಲ್ಲಿನ ಉತ್ಪನ್ನಗಳು...

ಅಟ್ಮಸಿಪ್ಯೂರ್: ಪರಿಸರದಿಂದ ಉತ್ತೇಜನಗೊಂಡು ಮಾಡಲಾಗಿರುವ ಆಕ್ಸಿಜನೆಟಿಂಗ್ ಪ್ರಾಡಕ್ಟ್‌ಗಳು ನಿಮಗೆ ಪರಿಸರದಲ್ಲಿ ಇರುವಂತಹ ಅನುಭವ ಸೃಷ್ಟಿಸುತ್ತದೆ.
ಸ್ಟಾರೈಸ್: ಬೆಳಗಿನ ಸೂರ್ಯನ  ಕಿರಣಗಳು ಚರ್ಮಕ್ಕೆ ಪೋಷಣೆ ಕೊಡುತ್ತದೆ. ಈ ಪ್ರಾಡಕ್ಟ್‌ಗಳು ಹೆಚ್ಚಾಗಿ ಚರ್ಮವನ್ನು ಪೋಷಣೆ  ಮಾಡುವುದರೊಂದಿಗೆ ಹೊಳಪು ನೀಡುತ್ತದೆ.

ಫಾರೆಸೆನ್ಸ್: ಸ್ಕಿನ್ ನರಿಷ್‌ಮೆಂಟ್ ಜೊತೆಗೆ  ಸುಗಂಧ ದ್ರವ್ಯಗಳಿಂದ ಕೂಡಿದೆ.
ಎರ್ಥ್‌ಬಾರ್ನ್: ಮಣ್ಣಿನ ಖನಿಜಗಳಿಂದ ಮಾಡಲಾಗಿದೆ.

ಅಕ್ವಸ್ಪಾರ್ಕ್: ನೀರಿನಲ್ಲಿ ದೊರೆಯುವ ಖನಿಜಗಳಿಂದ ಸಿದ್ಧಪಡಿಸಿದೆ.
ಇದರೊಂದಿಗೆ ನಿಮಗೆ ಶಾಂಪೂ, ಮಾಯಿಶ್ಚರೈಸರ್, ಬಾಥ್ ಸಾಲ್ಟ್ಸ್, ಲಿಪ್ ಬಾಮ್, ಫೇಶ್‌ವಾಶ್‌ಗಳು ಕೂಡ ಇಲ್ಲಿ ಲಭ್ಯ.

ಸ್ಥಳ: ಯುನಿಟ್ ಜಿ-08 ಗ್ರೌಂಡ್ ಫ್ಲೋರ್, ಫೋನಿಕ್ಸ್ ಮಾರ್ಕೆಟ್ ಸಿಟಿ, ಮಹದೇವಪುರ ಫೋಸ್ಟ್, ವೈಟ್ ಫೀಲ್ಡ್.  ಮಾಹಿತಿಗೆ: 6726 6186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.