ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕ್ಯಾಂಡೋರ್ ಇಂಟರ್‌ನ್ಯಾಷನಲ್ ಶಾಲೆಯು ಜಪಾನಿನ ಲರ್ನಿಂಗ್ ಸಿಸ್ಟಮ್ಸನ ಸಹಯೋಗದೊಂದಿಗೆ ಪಠ್ಯಕ್ರಮದಲ್ಲಿ ರೋಬೊಟಿಕ್ಸ್ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.
ರೋಬೊಟಿಕ್ಸ್ ತಂತ್ರಜ್ಞಾನವನ್ನು ವಿಜ್ಞಾನ, ಕಲೆ, ಗಣಿತ ಮತ್ತು ಇತರೆ ವಿಷಯಗಳೊಂದಿಗೆ ಸೇರಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತಷ್ಟು ಸಹಕಾರಿಯಾಗುವಂತೆ ಮಾಡುವುದು ಇದರ ಉದ್ದೇಶ.
ಗಣಿತ, ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಪಠ್ಯಕ್ರಮದಲ್ಲಿ ರೋಬೊಟಿಕ್ಸ್ ಸೇರಿಸುವುದು ವಿದ್ಯಾರ್ಥಿಗಳಲ್ಲಿ ಒತ್ತಡ ರಹಿತ ಕಲಿಕೆಗೆ ನೆರವಾಗಲಿದೆ.
ಕ್ಯಾಂಡೋರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಪ್ರದೀಪ್ ಕೆ. ದಾಸ್ ಅವರು ಮಾತನಾಡಿ ರೊಬೊಟಿಕ್ಸ್ ತಂತ್ರಜ್ಞಾನ ಅನೇಕ ವೈಜ್ಞಾನಿಕ, ಗಣಿತ ಮತ್ತು ವಿನ್ಯಾಸ ಚಿಂತನೆಗಳನ್ನು ರೋಬೊಟ್‌ಗಳ ನಿರ್ಮಾಣ, ವಿನ್ಯಾಸ ಮತ್ತು ಪ್ರೊಗ್ರಾಮಿಂಗ್ ಮೂಲಕ ಕಲಿಯುವ ಸಾಧ್ಯತೆಯನ್ನು ನೀಡುತ್ತದೆ.
ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ಕಂಪ್ಯೂಟಿಂಗ್ ಪ್ರೊಗ್ರಾಮಿಂಗ್, ಮೆಕ್ಯಾನಿಕಲ್ ವಿನ್ಯಾಸ, ಭೌತಶಾಸ್ತ್ರ, ಗಣಿತ, ಪರಿಸರ ಅಂಶಗಳು ಹಾಗೂ ಸಮಸ್ಯೆಗಳ ಪರಿಹಾರ ಕಂಡುಹಿಡಿಯುವುದು ಮುಂತಾದವುಗಳನ್ನು ಸೃಜನಾತ್ಮಕ, ಸಾಮೂಹಿಕವಾಗಿ ಆವಿಷ್ಕರಿಸಲು ಸಹಾಯವಾಗಲಿದೆ ಎನ್ನುತ್ತಾರೆ.
ರೊಬೊಟಿಕ್ಸ್ ಕೇವಲ ಅಂತರಶಾಲಾ ಸ್ಪರ್ಧಿಗಳಿಗೆ ಸಿದ್ಧತೆ ನೀಡುವ ಕ್ಲಬ್ ಮಾತ್ರವಲ್ಲ. ಸ್ಪಷ್ಟ ಉದ್ದೇಶ, ಲಿಕಾ ಫಲಿತಾಂಶಗಳ ಕಡೆಗೆ ಗಮನವಿಟ್ಟು ಹೋಲಿಸಲಾಗುವ ವಿಷಯವಾಗಿದೆ. ಕ್ಯಾಂಡೋರ್‌ನಲ್ಲಿ ರೊಬೊಟಿಕ್ಸ್ ಕೇಂದ್ರವಿದ್ದು, ಇಲ್ಲಿ ಉತ್ತಮ ಅರ್ಹತೆಯ ತರಬೇತಿದಾರರು ಇರುತ್ತಾರೆ ಎಂದರು.
ತರಗತಿಗಳಲ್ಲಿ ರೊಬೊಟಿಕ್ಸ್ ಸೇರಿಸುವುದರಿಂದ ಕೇವಲ ರೊಬೊಟಿಕ್ಸ್ ತಂತ್ರಜ್ಞಾನದ ಸಂಪರ್ಕ ಮಾತ್ರವಲ್ಲ. ಸೂಕ್ತ ಶೈಕ್ಷಣಿಕ ಚಿಂತನೆ, ಪಠ್ಯಕ್ರಮ, ಕಲಿಕೆಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಜಪಾನ್‌ನ ಲರ್ನಿಂಗ್ ಸಿಸ್ಟಮ್ಸನ ಅಧ್ಯಕ್ಷ ಮಸಾವೊ ಇಶಿಹಾರ ಅಭಿಪ್ರಾಯಪಡುತ್ತಾರೆ. ಜಪಾನ್‌ನ ಲರ್ನಿಂಗ್ ಸಿಸ್ಟಮ್ಸನ ಅಧ್ಯಕ್ಷ ರೆನ್ಯಾ ಕಿಕುಚಿ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.