ಪರಿಶುದ್ಧ ಚಿನ್ನದ ಪ್ರಮಾಣವನ್ನು ಪರಿಶೀಲಿಸಲು ಗಣಕೀಕೃತ ವ್ಯವಸ್ಥೆಯನ್ನು ಮಾಡಲಾಗಿದೆ. ಯಾರು ಬೇಕಾದರೂ ತಮ್ಮ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಬಹುದು.
ಇದಲ್ಲದೇ ಹಳೆಯ ಚಿನ್ನವನ್ನು ಅವರ ಮುಂದೆಯೇ ಕರಗಿಸಲಾಗತ್ತದೆ. `ಕಾರಿಗರ್~ ಇರುವ ಕೋಣೆಗೆ ಗಾಜಿನ ಬಾಗಿಲು ಮಾಡಿದ್ದು, ಗ್ರಾಹಕರಿಂದ ಯಾವ ಮುಚ್ಚುಮರೆಯಿಲ್ಲದೇ ವ್ಯವಹಾರಗಳನ್ನು ಮಾಡಲಾಗುತ್ತದೆ ಅಶೋಕ್ ಭರವಸೆ.
ಪ್ರತಿಯೊಂದು ಆಭರಣಕ್ಕೂ ಒಂದು ಅಂದಾಜು ಬೆಲೆ ಪಟ್ಟಿಯನ್ನು ನೀಡಲಾಗುತ್ತದೆ. ಆಭರಣದಲ್ಲಿ ಬಳಸಿರುವ ಚಿನ್ನದ ಪ್ರಮಾಣ, ಪರಿಶುದ್ಧತೆ, ತಯಾರಿ ವೆಚ್ಚ, ವಜ್ರಗಳ ಸಂಖ್ಯೆ, ಆ ವಜ್ರಗಳ ಬೆಲೆ ಮುಂತಾದವುಗಳನ್ನು ವಿವರವಾಗಿ ನೀಡಲಾಗುತ್ತದೆ.
ಕೆಲವು ಸರ, ಸೊಂಟಪಟ್ಟಿ ಮುಂತಾದ ಆಭರಣಗಳಿಗಂತೂ ಕೆಲ ಪುಟಗಳಷ್ಟು ವಿವರವನ್ನು ನೀಡಲಾಗುತ್ತದೆ. ಯಾವುದೇ ಮುಚ್ಚುಮರೆಯಿಲ್ಲ ಇಲ್ಲಿ ಎನ್ನುವುದು ಅವರ ಹೆಗ್ಗಳಿಕೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.