ಮಾಹೇಶ್ವರಿ ಪ್ರಕಾಶನ: ಜೆ.ಎನ್.ಟಾಟಾ ಆಡಿಟೋರಿಯಂ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕ್ಯಾಂಪಸ್, ಸದಾಶಿವನಗರ. ಡಾ.ಎಂ.ವೀರಪ್ಪ ಮೊಯಿಲಿ ವಿರಚಿತ ಮಹಾಕಾವ್ಯ ‘ಸಿರಿಮುಡಿ ಪರಿಕ್ರಮಣ’ ಶನಿವಾರ ಬಿಡುಗಡೆ: ಸಾಹಿತಿ ಡಾ.ಚಂದ್ರಶೇಖರ ಕಂಬಾರ. ಅಧ್ಯಕ್ಷತೆ– ಡಾ.ಬಿ.ಎ. ವಿವೇಕ ರೈ, ಮಹಾಕಾವ್ಯ ಪರಿಚಯ: ವಿಮರ್ಶಕರಾದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್. ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಮಹಾಕಾವ್ಯದ ವಾಚನ, ಹಂಸ ವಿ.ಮೊಯಿಲಿ ಅವರಿಂದ ಸಿರಿಮುಡಿ ಪರಿಕ್ರಮಣ ಮಹಾಕಾವ್ಯದಿಂದ ಆಯ್ದಭಾಗಗಳ ನೃತ್ಯರೂಪಕ. ಸಂಜೆ 5.15.
ಸುಂದರ ಪ್ರಕಾಶನ: ಸಂಸ ಬಯಲು ರಂಗಮಂದಿರ, ರವೀಂದ್ರ ಕಲಾಕ್ಷೇತ್ರ. ಗಾಯಕಿ ಡಾ.ಬಿ.ಕೆ. ಸುಮಿತ್ರಾ ಅವರು ಹಾಡಿನ ಲೋಕಕ್ಕೆ ಕಾಲಿಟ್ಟು ಐವತ್ತು ವರ್ಷಗಳಾದವು. ಈ ಸಂದರ್ಭದಲ್ಲಿ ಖ್ಯಾತ ಲೇಖಕರು ಬರೆದ ಸುಂದರ ಪ್ರಕಾಶನದ 235ನೇ ಪುಸ್ತಕ ‘ಬಿ.ಕೆ. ಸುಮಿತ್ರಾ ಅವರ ಗಾನಯಾನ’ ಕೃತಿ ಶನಿವಾರ ಲೋಕಾರ್ಪಣೆ– ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯ, ಅಧ್ಯಕ್ಷತೆ: ಡಾ.ಎಂ.ರಾಮಾಜೋಯಿಸ್, ಗೌರವಾರ್ಪಣೆ: ಡಾ.ಬಿ.ಕೆ.ಸುಮಿತ್ರ ಅವರಿಗೆ. ಅತಿಥಿಗಳು– ಎಚ್.ಎಸ್. ವೆಂಕಟೇಶಮೂರ್ತಿ, ಎಂ.ಎನ್.ವ್ಯಾಸರಾವ್, ಬಿ.ಆರ್.ಲಕ್ಷ್ಮಣರಾವ್, ಗೋಪಿ, ಭಾರ್ಗವ್, ಎಚ್.ಎಂ.ಮಹೇಶ್, ಲಹರಿ ವೇಲು, ಬಿ.ವಿ.ಶ್ರೀನಿವಾಸ್. ಬಿ.ಕೆ.ಸುಮಿತ್ರ ಮತ್ತು ತಂಡದಿಂದ ಗಾಯನ. ಸಂಜೆ 6.
ಸಿವಿಜಿ ಇಂಡಿಯಾ: ಉದಯಭಾನು ಕಲಾಸಂಘದ ಸಭಾಂಗಣ, ಗವಿಪುರಂ ಸಾಲು ಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡ ನಗರ. ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರಿಂದ ಭಾನುವಾರ ಸುರೇಶ ಪಾಟೀಲ ಅವರ ‘ಪ್ರಸ್ಥಾನ’ ಕಾದಂಬರಿ ಲೋಕಾರ್ಪಣೆ. ಅಧ್ಯಕ್ಷತೆ: ವಿಮರ್ಶಕ ಡಾ. ಬಸವರಾಜ ಕಲ್ಗುಡಿ. ಅತಿಥಿಗಳು: ಸಾಹಿತಿ ಡಾ.ಕೆ. ಸತ್ಯನಾರಾಯಣ, ಚಿಂತಕ ಡಾ. ಬೈರಮಂಗಲ ರಾಮೇಗೌಡ. ಬೆಳಿಗ್ಗೆ 10.30.
ಶ್ರೀಕೃಷ್ಣ ಸಂಗೀತ ಸಭಾ: ಪವಮಾನ ಮಂದಿರ, ದತ್ತಾತ್ರೇಯ ದೇವಸ್ಥಾನ, 59, 3ನೇ ಬ್ಲಾಕ್, ತ್ಯಾಗರಾಜನಗರ. ಭಾನುವಾರ ಆಕಾಶವಾಣಿ ನಿವೃತ್ತ ನಿರ್ದೇಶಕ ಎಸ್. ಕೃಷ್ಣಮೂರ್ತಿ ಅವರಿಂದ ವಿದ್ವಾನ್ ಟಿ.ಎನ್. ಪದ್ಮನಾಭ ಅವರು ಡಿ.ವಿ.ಜಿ. ವಿರಚಿತ ‘ಮರುಳ ಮುನಿಯನ ಕಗ್ಗದ’ ಕುರಿತು ಬರೆದಿರುವ ‘ಡಿ.ವಿ.ಜಿ. ಅವರ ಮರುಳ ಮುನಿಯನಿಗೆ ದೀಪಿಕೆ’ ಕೃತಿ ಲೋಕಾರ್ಪಣೆ. ಅತಿಥಿ:ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಅಧ್ಯಕ್ಷ ಡಾ. ಎಸ್.ಆರ್. ರಾಮಸ್ವಾಮಿ, ಯು.ವಿ.ಸಿ.ಇ. ಮಾಜಿ ಪ್ರಾಂಶುಪಾಲ ಪ್ರೊ. ಎಂ.ಕೆ.ಎಲ್.ಎನ್. ಶಾಸ್ತ್ರಿ. ಪುಸ್ತಕ ಲೋಕಾರ್ಪಣೆ ನಂತರ ಎಸ್. ಶಂಕರ್ ಅವರಿಂದ ಹಾಡುಗಾರಿಕೆ. ಬಿ. ರಘುರಾಂ (ಪಿಟೀಲು), ಆನೂರು ಅನಂತಕೃಷ್ಣ ಶರ್ಮ (ಮೃದಂಗ). ಬೆಳಿಗ್ಗೆ 9.
ಅಂಕಿತ ಪುಸ್ತಕ: ವಾಡಿಯಾ ಸಭಾಂಗಣ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ. ಡಾ.ಕೆ.ನ್. ಗಣೇಶಯ್ಯ ಅವರ ‘ಶಿಲಾಕುಲ ವಲಸೆ’ ಕೃತಿ ಭಾನುವಾರ ಬಿಡುಗಡೆ ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಂದ. ಅತಿಥಿ: ಎನ್.ಎಸ್. ಶ್ರೀಧರಮೂರ್ತಿ. ಅಧ್ಯಕ್ಷತೆ: ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ.ದೇವರ ಕೊಂಡಾರೆಡ್ಡಿ. ಬೆಳಿಗ್ಗೆ 10.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.